Asianet Suvarna News Asianet Suvarna News

ಮೊದಲ ಪ್ರಯತ್ನದಲ್ಲೇ SSLC ಪರೀಕ್ಷೆ ಬರೆದು ಪಾಸ್ ಆದ 44 ವರ್ಷದ ಕರ್ನಾಟಕದ ಮಹಿಳೆ

* ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದ 44 ವರ್ಷದ ಮಹಿಳೆ
* ಮೊದಲ ಪ್ರಯತ್ನದಲ್ಲೇ ಎಸ್‌ಎಸ್‌ಎಲ್‌ಸಿ ಪಾಸ್
* ಮಂಗಳೂರು ವಿವಿ ಕಾಲೇಜಿನ ಮಹಿಳಾ ಅಟೆಂಡರ್
 

Mangaluru VV College 44 woman attender Passed SSLC In First attempt rbj rbj
Author
Bengaluru, First Published Aug 10, 2021, 8:42 PM IST

ವರದಿ : ಸಂದೀಪ್ ವಾಗ್ಲೆ

 ಮಂಗಳೂರು, (ಆ.10):  ಕೇವಲ 5ನೇ ತರಗತಿ ಕಲಿತ್ತಿದ್ದ 44 ವರ್ಷದ ಮಹಿಳೆ ಇದೀಗ ಎಸ್‌ಎಸ್‌ಎಲ್‌ಸಿ ತೇಗರ್ಡೆಯಾಗಿದ್ದಾಳೆ. ಅಚ್ಚರಿ ಎನ್ನಿಸಿದರೂ ಸತ್ಯ.

ಕೇವಲ ಐದನೇ ತರಗತಿ ವಿದ್ಯಾರ್ಹತೆ ಪಡೆದು ಮಂಗಳೂರು ವಿವಿ ಕಾಲೇಜಿನ ತಾತ್ಕಾಲಿಕ ಅಟೆಂಡರ್ ಆಗಿರುವ ಜಯಶ್ರೀ, ಇದೀಗ ಮೊದಲ ಪ್ರಯತ್ನದಲ್ಲೇ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅಲ್ಲದೇ 35 ವರ್ಷಗಳ ಬಳಿಕ ಮತ್ತೆ ವಿದ್ಯಾರ್ಥಿನಿಯಾಗಿ ಗೆದ್ದಿದ್ದಾರೆ.

ಒಂದೇ ಜಿಲ್ಲೆಯ ನಾಲ್ವರಿಗೆ 625ಕ್ಕೆ 625 ಅಂಕ : ಅವರ ಮನದ ಮಾತುಗಳು ಕೇಳಿ

ಈ ನಡುವಿನ ಜೀವನದ ಬಂಡಿ ಕಡುಕಷ್ಟದಲ್ಲಿ ಸವೆದರೂ ಮತ್ತೆ ಮಕ್ಕಳಂತೆ ಪಾಠ ಕಲಿತವರು, ಇದೀಗ 625ಕ್ಕೆ 247 ಅಂಕಗೊಂದಿಗೆ ಪಾಸಾದ ಖುಷಿಯನ್ನೂ ಮಕ್ಕಳಂತೆಯೇ ಸಂಭ್ರಮಿಸಿದ್ದಾರೆ. ಅವರ ಜೀವನೋತ್ಸಾಹ ಎಂಥವರಿಗೂ ಸ್ಫೂರ್ತಿಯಂತಿದೆ. 

ಮಂಗಳೂರಿನ ವೆಲೆನ್ಶಿಯಾ ಸೂಟರ್‌ಪೇಟೆಯಲ್ಲಿ ಜಯಶ್ರೀ ಮನೆ. ಪತಿ ಆಟೋ ಡ್ರೈವರ್ ಆಗಿದ್ದವರು ಈಗ ವಾಚ್‌ಮ್ಯಾನ್ ಕೆಲಸ ಮಾಡಿಕೊಂಡಿದ್ದಾರೆ. ಜೀವನ ಸಾಗಿಸಲು ಅನೇಕ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದವರಿಗೆ ನಗರದ ವಿವಿ ಕಾಲೇಜಿನಲ್ಲಿ ಕ್ಲೀನಿಂಗ್ ಕೆಲಸ ಸಿಕ್ಕಿತ್ತು. ಕ್ರಮೇಣ ಅಟೆಂಡರ್ ಸ್ಥಾನಕ್ಕೇರಿದರು. ಆದರೆ ನೌಕರಿ ಈಗಲೂ ತಾತ್ಕಾಲಿಕ ನೆಲೆಯಲ್ಲೇ ಮುಂದುವರಿದಿದೆ. ಈ ನಡುವೆ ಹೇಗಾದರೂ ಮಾಡಿ ಎಸ್‌ಎಸ್‌ಎಲ್‌ಸಿ ಪಾಸಾಗಲೇಬೇಕು ಎಂಬ ಹಠಕ್ಕೆ ಬಿದ್ದ ಜಯಶ್ರೀ ಈಗ ಅದನ್ನು ಸಾಕಾರಗೊಳಿಸಿದ್ದಾರೆ.

SSLC ಫಲಿತಾಂಶ ಪ್ರಕಟ: ಯಾವ ಜಿಲ್ಲೆ ಫಸ್ಟ್? ಯಾವುದು ಲಾಸ್ಟ್? ಇಲ್ಲಿದೆ ವಿವರ

ಮಂಗಳೂರು ವಿವಿ ಕಾಲೇಜಿನ ಪ್ರೊ. ಉದಯ ಕುಮಾರ್ ಅವರು ನನಗೆ ಕಾಲೇಜಿನಲ್ಲಿ ಕೆಲಸ ಕೊಡಿಸಿದರು. ಅದೇ ನನಗೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಯಿತು. ನಂತರ ಎಸ್‌ಎಸ್‌ಎಲ್‌ಸಿ  ಪರೀಕ್ಷೆ ಬರೆಯಲು ಕಾಲೇಜಿನ ಡಾ.ಶೋಭಾ ಸ್ಫೂರ್ತಿ ನೀಡಿದ್ದಲ್ಲದೆ, ಮಾತಾ ಎಜ್ಯುಕೇಶನ್‌ಗೆ ಸೇರಿಸಿ ಫೀಸನ್ನೂ ಅವರೇ ಕಟ್ಟಿದ್ದರು ಎನ್ನುತ್ತಾರೆ ಜಯಶ್ರೀ. 
.
ಮಕ್ಕಳಂತಾಗಿದ್ದೆ: 
ಶಾಲೆಯ ಶಿಕ್ಷಕರು ಆನ್‌ಲೈನ್ ಕ್ಲಾಸ್ ಆರಂಭಿಸಿದಾಗ ತುಂಬ ಕಷ್ಟ ಆಗುತ್ತಿತ್ತು. ಅವರು ಕೊಟ್ಟ ಹೋಮ್ ವರ್ಕ್‌ನ್ನು ಮಾಡಲೇಬೇಕಿತ್ತು. ಇಲ್ಲದಿದ್ದರೆ ಜೋರು ಮಾಡುತ್ತಿದ್ದರು. ಚಿಕ್ಕ ಮಕ್ಕಳಿಗೆ ಕಲಿಸುವಂತೆ ಕಲಿಸಿದರು. ಇದರ ನಡುವೆ ಅಕ್ಕನ ಮನೆಗೆ ಹೋದರೆ ‘ಆನ್‌ಲೈನ್ ಕ್ಲಾಸ್ ಉಂಟಲ್ಲ, ಸರಿಯಾಗಿ ಓದು, ಹೋಮ್‌ವರ್ಕ್ ಮಾಡು’ ಎಂದು ನೆನಪಿಸುತ್ತಿದ್ದರು. ಅಷ್ಟೂ ದಿನಗಳ ಕಾಲ ಚಿಕ್ಕ ಮಕ್ಕಳ ಹಾಗೆಯೇ ಆಗಿತ್ತು ಜೀವನ, ಚೆನ್ನಾಗಿತ್ತು ಎಂದು ತಮ್ಮ ಪ್ರಯತ್ನದ ಘಟನೆಗಳನ್ನ ಹೇಳಿಕೊಂಡಿದ್ದಾರೆ.

SSLC ಫಲಿತಾಂಶ ಪ್ರಕಟ: ಚೆಕ್‌ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಎಸ್‌ಎಸ್‌ಎಲ್‌ಸಿ ಕಲಿಯುತ್ತಿದ್ದೇನೆ ಎಂದು ಯಾರೂ ಕೊಂಕು ಮಾತನಾಡಿಲ್ಲ. ಕುಟುಂಬದವರಾದಿಯಾಗಿ ಎಲ್ಲರೂ ಪ್ರೋತ್ಸಾಹಿಸಿದರು. ಈಗ ಪಾಸಾದ ಖುಷಿಯಲ್ಲಿ ಎಲ್ಲರೂ ಕರೆ ಮಾಡಿ ಶುಭಾಶಯ ತಿಳಿಸುತ್ತಿದ್ದಾಾರೆ. ತುಂಬ ಖುಷಿಯಾಗುತ್ತಿದೆ ಎಂದು ಜಯಶ್ರೀ ಹರ್ಷಪಟ್ಟರು.

ಈಗ ಇರುವುದು ತಾತ್ಕಾಾಲಿಕ ಕೆಲಸ. ಅದು ಕಾಯಂ ಆಗಬೇಕಾದರೆ ಎಸ್‌ಎಸ್‌ಎಲ್‌ಸಿ ಅಗತ್ಯವಿತ್ತು. ಅದಲ್ಲದಿದ್ದರೂ ನನಗೆ ಎಸ್ಎಸ್‌ಎಲ್‌ಸಿ ಿ ಮಾಡಲೇಬೇಕು ಎನ್ನುವ ಆಸೆಯೂ ಇತ್ತು. ಕೊನೆಗೂ 44ನೇ ವಯಸ್ಸಿನಲ್ಲಿ ಅದು ಸಾಕಾರವಾಗಿದೆ. ಇದಕ್ಕೆ ಕಾರಣಕರ್ತರಾದ, ಪ್ರೋತ್ಸಾಹ ನೀಡಿದ ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದರು.

ಜಯಶ್ರೀ ಪಡೆದ ವಿಷಯವಾರು ಅಂಕ
ಅಂದ ಹಾಗೆ ಜಯಶ್ರೀ ಪಡೆದುಕೊಂಡಿರುವ ಅಂಕಗಳನ್ನ ನೋಡುವುದಾದ್ರೆ, ಕನ್ನಡದಲ್ಲಿ 60  ಇಂಗ್ಲೀಷ್‌ನಲ್ಲಿ 40. ಹಿಂದಿ, ಗಣಿತದಲ್ಲಿ 35, ವಿಜ್ಞಾನದಲ್ಲಿ 35, ಸಮಾಜ ವಿಜ್ಞಾನದಲ್ಲಿ 35 ಅಂಕ ಪಡೆದಿದ್ದಾರೆ. 

Follow Us:
Download App:
  • android
  • ios