ಶಾಲಾ ಸಮವಸ್ತ್ರ ವಿತರಣೆಯಲ್ಲಿ ಲೋಪ ಸಹಿಸೋದಿಲ್ಲ: ಸರ್ಕಾರ

ಸುಮಾರು 45.45 ಲಕ್ಷ ವಿದ್ಯಾರ್ಥಿಗಳಿಗೆ ಸರ್ಕಾರದ ಅನುದಾನದಿಂದ ಉಚಿತವಾಗಿ ಸಮವಸ್ತ್ರ ನೀಡಲಾಗುತ್ತಿದ್ದು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದರೆ ಡಿಡಿಪಿಐ, ಬಿಇಒಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

No Lapse in Distribution of School Uniform will be Tolerated Says Government of Karnataka grg

ಬೆಂಗಳೂರು(ಜು.02):  ವಿದ್ಯಾ ವಿಕಾಸ ಯೋಜನೆಯಡಿ ಶಾಲೆಗಳಿಗೆ 2ನೇ ಜತೆ ಸಮವಸ್ತ್ರ ಹಂಚಿಕೆ, ಸರಬರಾಜು, ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು. ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಲಾ ಶಿಕ್ಷಣ ಇಲಾಖೆಯು ಸೂಚಿಸಿದೆ.

2023-24 ನೇ ಸಾಲಿಗೆ ರಾಜ್ಯದಲ್ಲಿ 2ನೇ ಜತೆ ಸಮವಸ್ತ್ರ ಪೂರೈಸಲು ಟೆಂಡರ್‌ ಕರೆದಿದ್ದು ಸಕಾಲಕ್ಕೆ ಪೂರೈಸುವಂತೆ ಸೂಚನೆ ನೀಡಲಾಗಿದೆ. ಸುಮಾರು 45.45 ಲಕ್ಷ ವಿದ್ಯಾರ್ಥಿಗಳಿಗೆ ಸರ್ಕಾರದ ಅನುದಾನದಿಂದ ಉಚಿತವಾಗಿ ಸಮವಸ್ತ್ರ ನೀಡಲಾಗುತ್ತಿದ್ದು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದರೆ ಡಿಡಿಪಿಐ, ಬಿಇಒಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಬಾಗಲಕೋಟೆ ತೋವಿವಿ ಘಟಿಕೊತ್ಸವ: ಕೋಲಾರದ ಕಿರಾಣಿ ವ್ಯಾಪಾರಿ ಮಗಳಿಗೆ 16 ಚಿನ್ನದ ಪದಕ

‘ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸಿಗಬೇಕು. ಅಧಿಕಾರಿಗಳು ಸಮವಸ್ತ್ರ ಪಡೆದು ಗೋದಾಮುಗಳಲ್ಲಿ ಹೆಚ್ಚಿನ ಸಮಯ ಶೇಖರಿಸಿ ಇಡಬಾರದು. ಸರಬರಾಜಾದ ಸಮವಸ್ತ್ರದ ಗುಣಮಟ್ಟಅರಿಯಲು ಪ್ರತಿ ತಾಲೂಕಿನಿಂದ ಯಾವುದಾದರೂ ಒಂದು ಶಾಲೆಯಿಂದ ಸಮವಸ್ತ್ರ ಪಡೆದು ಅದನ್ನು ಇಲಾಖೆಗೆ ಕಳುಹಿಸಬೇಕು’ ಎಂದು ಸ್ಪಷ್ಟಪಡಿಸಲಾಗಿದೆ.

Latest Videos
Follow Us:
Download App:
  • android
  • ios