ಮೌಲ್ಯಯುತ ಶಿಕ್ಷಣಕ್ಕೆ ಹೊಸ ಪದ್ದತಿ, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ: ಶಿಕ್ಷಣ ಸಚಿವ ಬಿ.ಸಿ ನಾಗೇಶ್
ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡುವ ನಿಟ್ಟಿನಲ್ಲಿ ನಾವೂ ಪದ್ದತಿ ಅಳವಡಿಸಿಕೊಳ್ತೇವೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಇದನ್ನು ಜಾರಿ ಮಾಡ್ತೀವಿ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರು (ಜ.9): ವಿವೇಕಾನಂದ ಜಯಂತಿ ದಿನ ಈ ಕಾರ್ಯಕ್ರಮ ನಡೆಸಬೇಕು ಅಂದುಕೊಂಡಿದ್ದೆವು. ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕಲಿಸಬೇಕು ಅಂತಾ ನಮ್ಮ ಉದ್ದೇಶ. ವಿವೇಕಾನಂದರು, ಮಹಾತ್ಮ ಗಾಂಧಿ, ವಿನೋಭಾ ಬಾವೆ ಮೊದಲಾದವರು ಇದನ್ನೇ ಹೇಳಿದ್ದು. ಪಠ್ಯದಲ್ಲಿ ಇಲ್ಲದೇ ಇರುವ ಮೌಲ್ಯಗಳನ್ನು ಕೊಡುವ ಪ್ರಯತ್ನ ವನ್ನು ಅನೇಕ ಮಠಾಧೀಶರು, ಮೌಲ್ವಿಗಳು ಮಾಡಿದ್ದಾರೆ. ಅವರೆಲ್ಲರನ್ನೂ ಕರೆಸಿ ಚರ್ಚೆ ಮಾಡಿದ್ದೇವೆ. ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡುವ ನಿಟ್ಟಿನಲ್ಲಿ ನಾವೂ ಪದ್ದತಿ ಅಳವಡಿಸಿಕೊಳ್ತೇವೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಇದನ್ನು ಜಾರಿ ಮಾಡ್ತೀವಿ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿಕೆ ನೀಡಿದ್ದಾರೆ.
ನೈತಿಕ ಶಿಕ್ಷಣ ಅಳವಡಿಕೆ ಕುರಿತು ಧರ್ಮ ಗುರುಗಳು, ಶಿಕ್ಷಣ ತಂತ್ರಜ್ಞರು ಸೇರಿ ಅನೇಕರೊಂದಿಗೆ ಶಿಕ್ಷಣ ಸಚಿವ ವಿಧಾನಸೌಧದಲ್ಲಿ ಇಂದು ಸಭೆ ನಡೆಸಿದ್ದು, ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಸಭೆಗೆ ಮುಸ್ಲಿಂ, ಕ್ರೈಸ್ತ ಧರ್ಮಗುರುಗಳಿಗೂ ಆಹ್ವಾನ ನೀಡಲಾಗಿತ್ತು. ಇದು ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ, ಶಿಕ್ಷಣದಲ್ಲಿ ಮೌಲ್ಯಗಳನ್ನು ನೀಡುವ ಪ್ರಯತ್ನವಾಗಿದೆ ಎಂದು ಸಭೆಗೂ ಮುನ್ನ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದರು
ಶಿಕ್ಷಣದಲ್ಲಿ ಮೌಲ್ಯಯುತ ಶಿಕ್ಷಣ ಮುಖ್ಯ: ಸಮಾಜದಲ್ಲಿ ಮೌಲ್ಯ ಕುಸಿಯುತ್ತಿದೆ ಅಂತ ಅನೇಕರು ಮಾತನಾಡಿದ್ದಾರೆ. ಅನೇಕ ಸ್ವಾಮೀಜಿ ಬಳಿ ಆಶೀರ್ವಾದ ಪಡೆಯಲು ಹೋದಾಗ ಮೌಲ್ಯ ಕುಸಿತದ ಬಗ್ಗೆ ಶಿಕ್ಷಣ ಪಾತ್ರವಿಲ್ಲ ಅಂತ ಅಭಿಪ್ರಾಯ ವ್ಯಕ್ತಪಡಿಸಿದರು. ಶಿಕ್ಷಣದಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ವಿಭಿನ್ನ ಇದೆ ಅಂತ ತಿಳಿದಿದೆ. ಶಿಕ್ಷಣ ವ್ಯವಸ್ಥೆ ಇಂದ ಮೌಲ್ಯ ಕುಸಿಯುತ್ತಿದೆ ಅನ್ನೋದು ಅನೇಕರ ಅಭಿಪ್ರಾಯ. ಕುಟುಂಬ ವ್ಯವಸ್ಥೆ, ಮಠಗಳು ಶಿಕ್ಷಣ ವ್ಯವಸ್ಥೆ ಕೊಡುತ್ತಾ ಬಂದಿದೆ. ಶಿಕ್ಷಣ ವ್ಯವಸ್ಥೆಯಲ್ಲೇ ತಪ್ಪಿದೆಯಾ ಅನ್ನೋ ಪ್ರಶ್ನೆ ಎದುರಾಗಿದೆ. ಮಠಾಧೀಶರನ್ನ ಕೇಳಿಕೊಂಡಾಗ ಎಲ್ಲಾ ಕಾರ್ಯಕ್ರಮ ಬದಿಗೊತ್ತಿ ಬಂದಿದ್ದಾರೆ.
ಶಿಕ್ಷಣದಲ್ಲಿ ವ್ಯವಸ್ಥೆ ತರಬೇಕು. ಶಿಕ್ಷಣದಲ್ಲಿ ಮೌಲ್ಯಯುತ ಶಿಕ್ಷಣ ತರಬೇಕು. ಶಿಕ್ಷಣದ ಒಳಗೆ ಮೌಲ್ಯಗಳನ್ನ ಹೇಗೆ ತರಬೇಕು, ಪಠ್ಯದಲ್ಲಿ ತರಬೇಕು, ಐದತ್ತು ನಿಮಿಷ ಹೇಗೆ ತರಬೇಕು ಅನ್ನೋದ್ರ ಬಗ್ಗೆ ಚರ್ಚೆಯಾಗ್ತಿದೆ. ರಾಮಾಯಣ, ಭಗವದ್ಗೀತೆ, ಕುರಾನ್, ಬೈಬಲ್ ಬಗ್ಗೆ ಹೇಗೆ ತಿಳಿಸಬಹುದು. ಪ್ರಪಂಚ ವಿಭಿನ್ನವಾಗಿದೆ ಅನ್ನೋದು ತಿಳಿಯಬಹುದು. ಇಂದು ಭಾರತದತ್ತ ಎಲ್ಲರೂ ತಿರುಗಿ ನೋಡುವಾಗ ಏನು ಮಾಡಬೇಕು ಅನ್ನೋದ್ರ ಬಗ್ಗೆ ಈಗ ಚರ್ಚೆಯಾಗಬೇಕಿದೆ. ಈಗ ಮಾಡುವ ಚರ್ಚೆಯೇ ಅಂತಿಮವಲ್ಲ. ಇಲ್ಲಿ ಬರುವ ಸಲಹೆಗಳನ್ನು ಹೇಗೆ ಅನುಷ್ಠಾನ ಮಾಡಬಹುದು. ಮಕ್ಕಳನ್ನ ಹೇಗೆ ಭಾರತದ ಪ್ರಜೆ ಮಾಡಬಹುದು ಅನ್ನೋದು ನಮ್ಮೆಲ್ಲರ ಗುರಿಯಾಗಿದೆ ಎಂದು ಸಚಿವರು ಹೇಳಿದ್ದಾರೆ.
ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿಕೆ: ಮೌಲ್ಯ ಶಿಕ್ಷಣ ಕುರಿತು ಪ್ರಾಥಮಿಕ ಪ್ರೌಢಶಾಲಾ ಶಿಕ್ಷಣದಲ್ಲಿ ಅಳವಡಿಸುವ ಸಭೆ ಕರೆಯಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದೆ. ಶೈಕ್ಷಣಿಕ ಗುಣಮಟ್ಟವನ್ನ ವಿಸ್ತಿರಿಸುವ,ವಿದ್ಯಾರ್ಥಿಗಳ ಇಚ್ಚೆಗೆ ಅಯ್ಕೆ ಮಾಡಿಕೊಳ್ಳವ ಅವಕಾಶವಿದೆ. ಅನುಷ್ಠಾನ ತರುವಲ್ಲಿ ಸೂಕ್ಷ್ಮಾತಿ ಸೂಕ್ಷ್ಮವಾಗಿ ಚರ್ಚೆ ನಡೆಯುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಬಂದಾಗ ಸಾಕಷ್ಟು ಚರ್ಚೆ ಆಯ್ತು. ಮಕ್ಕಳಗೆ ನೈತಿಕತೆ ಹೇಳೋದ್ರಿಂದ ಅಳವಡಿಸಿಕೊಳ್ಳೊದಕ್ಕೆ ಆಗೊಲ್ಲಾ. ನೈತಿಕತೆ ಅಳವಡಿಸಿಕೊಳ್ಳಲು ಸಾಧ್ಯ ಅನ್ನೋದರ ಬಗ್ಗೆ ಯೋಚನೆ ಮಾಡಬೇಕಿದೆ. ನೀತಿ ಭೋದಕರು ನೈತಿಕತೆಯನ್ನ ಅಳವಡಿಸಿಕೊಳ್ಳಬೇಕಿದೆ. ಮಕ್ಕಳಿಗೆ ಪೋಷಕರು ಶಿಕ್ಷಕರು ನೈತಿಕತೆ ಕಲಿಸುವುದು ಅನಿವಾರ್ಯವಾಗಿದೆ. ಮಕ್ಕಳಿಗೆ ಸರ್ವಸ್ವ ಮೊಬೈಲ್ ಆಗಿದೆ. ಅದರಿಂದ ಅವರನ್ನ ಹೊರತರಬೇಕಿದೆ. ನೈತಿಕತೆಯನ್ನ ಪೌರಾಣಿಕ ಕತೆಗಳನ್ನ ಹೇಳುವುದರಿಂದ ಮಕ್ಕಳಿಗೆ ಪ್ರತಿಯೊಂದು ವಿಚಾರವನ್ನ ಸೂಕ್ಷ್ಮವಾಗಿ ಹೇಳಬೇಕಿದೆ. ನೈತಿಕತೆಯನ್ನ ಮೊದಲು ನಾವು ಅಳವಡಿಸಿಕೊಳ್ಳಬೇಕಿದೆ ಎಂದಿದ್ದಾರೆ.
ಮಕ್ಕಳಿಗಲ್ಲ ರಾಜಕಾರಣಿಗಳಿಗೆ ಕೂಡ ನೈತಿಕ ಶಿಕ್ಷಣ ಅಗತ್ಯ: ಸಿರಿಗೆರೆ ಶಿವಾಚಾರ್ಯ ಸ್ವಾಮೀಜಿ
ನಮ್ಮ ಗುರುಗಳಾದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳು ಒಂದೆರಡು ಮಾತು ಹೇಳಿದ್ರು. ಶಿಕ್ಷಣದಲ್ಲಿ ಪರಿವರ್ತನೆ ಆಗಬೇಕಿದೆ. ವಿದ್ಯಾರ್ಥಿಗಳಿಗೆ ಔದ್ಯೋಗಿಕ, ಆಧ್ಯಾತ್ಮಿಕ, ವ್ಯಾವಹಾರಿಕ ಮೂರು ಶಿಕ್ಷಣ ನೀಡಬೇಕು. ಇಂದಿನ ಶಿಕ್ಷಣದಲ್ಲಿ ಔದ್ಯೋಗಿಕ ಹಾಗು ವ್ಯಾವಹಾರಿಕ ಶಿಕ್ಷಣ ಸಿಗುತ್ತಿದೆ. ಆದ್ರೆ ಆಧ್ಯಾತ್ಮಿಕ ಶಿಕ್ಷಣ ಸಿಗುತ್ತಿಲ್ಲ. ಅದಕ್ಕಾಗಿ ಈ ಸಭೆ ಬಹಳ ಮುಖ್ಯ. ಭಗವಾನ್ ಬುದ್ದ ಹಾಗೂ ರಾಜನ ಕುದುರೆ ಬಗ್ಗೆ ಕಥೆಯನ್ನ ಉದಾಹರಣೆ ನೀಡಿದ ಶ್ರೀಗಳು. ಮಕ್ಕಳಿಗೆ ನೈತಿಕ ಶಿಕ್ಷಣ ಕೊಡುವ ಬಗ್ಗೆ ಯಾವುದೇ ವಿವಾದ ಇಲ್ಲ.ಆದ್ರೆ ನೈತಿಕ ಶಿಕ್ಷಣ ನೀಡುವವರಿಗೆ ಮೊದಲು ಶಿಕ್ಷಣ ನೀಡಬೇಕು. ಆಗ ಮಕ್ಕಳು ಸರಿಯಾದ ನಡೆಯಲ್ಲಿ ನಡೆಯುತ್ತಾರೆ. ಸಭಾಧ್ಯಕ್ಷ ಕಾಗೇರಿ ಇದ್ದಾರೆ, ನೀವು ರಾಜಕಾರಣಿಗಳನ್ನ ಕರೆದು ಉತ್ತಮ ನೈತಿಕ ಶಿಕ್ಷಣ ನೀಡಿ. ಆ ಮೂಲಕ ಬದಲಾವಣೆ ತನ್ನಿ.
ವಿಧಾನಸೌಧದಲ್ಲಿ ಹೇಗೆ ಕಾರ್ಯಕಲಾಪ ನಡೆಯುತ್ತಿದೆ ಅನ್ನೋದು ನೋಡ್ತಿದ್ದೇವೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮಾಡ್ತಾರೆ.ಯಾ ವ ರೀತಿ ವೈಯಕ್ತಿಕ ನಿಂದನೆ ಸದನದಲ್ಲಿ ಆಗುತ್ತಿದೆ. ವೈಯಕ್ತಿಕ ನಿಂದನೆಗೆ ಕಡಿವಾಣ ಹಾಕಬೇಕಿದೆ. ಇದಕ್ಕಾಗಿ ಪ್ರತ್ಯೇಕ ಆಕ್ಟ್ ಜಾರಿಗೆ ತರುವ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಇಂತ ದುಂಡು ಮೇಜಿನ ಸಭೆ ಕರೆದು ಆಕ್ಟ್ ಪಾಸ್ ಮಾಡಿಕೊಳ್ಳಿ. ರಾಜಕಾರಣಿಗಳ ಕಿವಿ ಹಿಂಡಿದ ಸಿರಿಗೆರೆ ಶ್ರೀಗಳು. ನೈತಿಕ ಶಿಕ್ಷಣ ಮಕ್ಕಳಿಗಷ್ಟೇ ಅಲ್ಲ, ಸಾರ್ವಜನಿಕ ಜೀವನದಲ್ಲಿರೋ ರಾಜಕಾರಣಿಗಳಿಗೂ ಅವಶ್ಯಕತೆ ಇದೆ.
ಆಧುನಿಕ ತಂತ್ರೋಪಕರಣ ಬಳಸಿ ಇಂಗ್ಲಿಷ್ ಸಂವಹನ ತರಬೇತಿ: ಸಚಿವ ಅಶ್ವತ್ಥನಾರಾಯಣ
ನಿರ್ಮಲಾನಂದ ನಾಥ ಸ್ವಾಮೀಜಿ ಹೇಳಿಕೆ: ಶಾಲಾ ಕಾಲೇಜುಗಳಲ್ಲಿ ಮೌಲ್ಯ ಶಿಕ್ಷಣ ಅನುಷ್ಠಾನ ವಿಚಾರ. ಇದು ದಶಕಗಳ ಕಾಲದಿಂದ ಚರ್ಚೆಯಾಗ್ತಿರೋ ವಿಚಾರ. ನಮ್ಮ ಗುರುಗಳಿದ್ದ ಕಾಲದಲ್ಲಿ ಒಂದು ವಿಚಾರ ಪ್ರಸ್ತಾಪ ಮಾಡ್ತಿದ್ರು. ಆಹಾರ, ನಿದ್ರೆ, ಭಯ ಇವೆಲ್ಲಾ ಸಾಮಾನ್ಯ. ಶಿಕ್ಷಣ ಬಂದಮೇಲೂ, ಪ್ರಾಣಿಗಳ ರೀತಿ ವರ್ತಿಸೋದ್ರಿಂದ ಶಿಕ್ಷಣಕ್ಕೆ ಬೆಲೆ ಎಲ್ಲಿ. ಮನುಷ್ಯನಿಗೆ ವಿದ್ಯೆ ಕಲಿತ ಬಳಿಕವೂ ಸಾಮಾನ್ಯ ಪ್ರಜ್ಞೆ ಇಲ್ಲದ ಮೇಲೆ ಶಿಕ್ಷಣ ಯಾಕೆ ಬೇಕು. ವಿದ್ಯಾ ಶಾಲೆಗಳ, ವಿವಿಗಳ ಅಸ್ಥಿತ್ವ ಪ್ರಶ್ನೆ ಮಾಡಬೇಕಾಗಲಿದೆ. ಶಿವರಾತ್ರಿ ಶ್ರೀಗಳು ಹೇಳಿದ್ರು. ಮನುಷ್ಯನ ಕೈಗೆ ವಿಜ್ಞಾನ ಬಂದ ಮೇಲೆ, ಸಂಬಂಧಗಳು ದೂರ ಆಗ್ತಿದೆ ಅಂತ. ಅವನ್ನ ಕೂಡುವ ಕೆಲಸ ಮಾಡಬೇಕು.
ನೂತನ ರಾಷ್ಟ್ರೀಯ ಶಿಕ್ಷಣದಿಂದ ಭಾರತೀಯ ಚಿಂತನೆಯ ಬೆಳವಣಿಗೆ: ಕಲ್ಲಡ್ಕ ಪ್ರಬಾಕರ ಭಟ್
ಬಾಲ್ಯದಿಂದಲೇ ಮೌಲ್ಯಯುತ ಶಿಕ್ಷಣ ಸಿಗಬೇಕು. ಮಕ್ಕಳಿಗೆ ಬೇಕಾದ ವಿದ್ಯೆ ಕಲಿಸದೇ ಹೋದ್ರೆ, ಮುಂದೆ ಕಲಿಯುವುದು ಹೇಗೆ. ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರೇ ಕಲಿಯದಿದ್ರೆ, ಹೇಗೆ ಕಲಿಸುತ್ತಾರೆ.? ಪ್ರತೀ ದೇಶಕ್ಕೂ ತನ್ನದೇ ಮಹತ್ವ ಇದೆ. ಮಣ್ಣಿನಲ್ಲಿ ಏನು ಬೇಳೆಯಬಹುದು ಅನ್ನೋದು ಅಲ್ಲಿನ ರೈತರಿಗೆ ಗೊತ್ತಿದೆ. ಸರ್ವ ಧರ್ಮಗಳ ನಾಡು ನಮ್ಮದು. ಆಧುನಿಕ ಮಕ್ಕಳಿಗೆ ಹೇಳಿಕೊಡದಿದ್ರೆ ಏನು ಕಲಿಯುತ್ತಾರೆ. ಮಕ್ಕಳು ಪ್ರಾರಂಭಿಕ ದಿನದಲ್ಲಿ ಹೇಗೆ ಗಣಿತ, ವಿಜ್ಞಾನ ಕಲಿಯುತ್ತಾರೆ, ಹಾಗೆ ಹಂತ ಹಂತವಾಗಿ ಮೌಲ್ಯ ಶಿಕ್ಷಣ ಕಲಿಸಬೇಕಾಗುತ್ತದೆ.