Asianet Suvarna News Asianet Suvarna News

NEET ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಡ್ರೆಸ್ ಕೋಡ್ ಸೇರಿದಂತೆ ಕೆಲವು ನಿಯಮಗಳು ಜಾರಿ

2020ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(NEET)ಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಡ್ರೆಸ್ ಕೋಡ್ ಸೇರಿದಂತೆ ಕೆಲವು ನಿಯಮಗಳನ್ನು ಹೊರಡಿಸಿದೆ.

NEET 2020: Dress Code modified slightly as per safety measures
Author
Bengaluru, First Published Sep 8, 2020, 6:24 PM IST

ನವದೆಹಲಿ, (ಸೆ.08): ಕೊರೋನಾ ವೈರಸ್ ಸೋಂಕು ಭೀತಿ ನಡುವೆ 2020ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(NEET) ಸಿದ್ಧತೆಗಳು ನಡೆದಿವೆ.

ಕೊರೋನಾ ವೈರಸ್ ಭೀತಿ ನಡುವೆಯೂ ಜೆಇಇ ಪರೀಕ್ಷೆ ನಡೆಸುವಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಸೆಪ್ಟೆಂಬರ್ 13ರಂದು ನೀಟ್ ಪರೀಕ್ಷೆ ನಡೆಸುವುದಕ್ಕೆ ಸಜ್ಜಾಗಿದೆ.  2020ನೇ ಸಾಲಿನಲ್ಲಿ ನೀಟ್ ಪರೀಕ್ಷೆ ಬರೆಯುವುದಕ್ಕೆ 15.97 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ದೇಶಾದ್ಯಂತ ನೀಟ್ ಪರೀಕ್ಷೆಗಾಗಿ 3842 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.

ನೀಟ್ ಪರೀಕ್ಷೆ ಬರೆಯಲು ಅನುಮತಿ ಕೇಳಿದ ಪುಲ್ವಾಮಾ ದಾಳಿಯ ಆರೋಪಿ

ಇನ್ನು ಜೆಇಇ ಪರೀಕ್ಷೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಡ್ರೆಸ್ ಕೋಡ್ ಸೇರಿದಂತೆ ಕೆಲವು ನಿಯಮಗಳನ್ನು ಹೊರಡಿಸಿದ್ದು, ಅವು ಈ ಕೆಳಗಿನಂತಿವೆ.

* ದೇಶಾದ್ಯಂತ ಕೊರೋನಾ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಪರೀಕ್ಷಾರ್ಥಿಗಳು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಬೇಕು. 

* ದೊಡ್ಡ ಗುಂಡಿ(ಬಟನ್)ಗಳನ್ನು ಹೊಂದಿರುವ ಬಟ್ಟೆಯನ್ನು ಧರಿಸಿ ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವುದಕ್ಕೆ ಅನುಮತಿಯಿಲ್ಲ.

* ವಿದ್ಯಾರ್ಥಿಗಳು ಫುಲ್ ತೋಳು, ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ ಪರೀಕ್ಷಾ ಕೇಂದ್ರಕ್ಕೆ ತೆರಳುವಂತಿಲ್ಲ.

* ಪರೀಕ್ಷಾರ್ಥಿಗಳು ಬೂಟ್ ಧರಿಸಿಕೊಂಡು ಹೋಗುವುದಕ್ಕೆ ಅನುಮತಿಯಿಲ್ಲ. ಅದರ ಬದಲು ಚಪ್ಪಲಿ, ಸ್ಯಾಂಡಲ್ ಮಾತ್ರ ಹಾಕಿಕೊಂಡು ಹೋಗಬೇಕೆಂದು ಹೊಸ ನಿಯಮಗಳಲ್ಲಿ ಹೇಳಲಾಗಿದೆ.

* ನಿಗದಿಗೊಳಿಸಿದ ಪರೀಕ್ಷಾ ಸಮಯಕ್ಕಿಂತ ಮೊದಲು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರು ಇರಬೇಕು. ಕೊವಿಡ್-19 ಹಿನ್ನೆಲೆ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷಿಸಿದ ಬಳಿಕವಷ್ಟೇ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶಿಸುವುದಕ್ಕೆ ಅವಕಾಶ ನೀಡಲಾಗುತ್ತದೆ.

* ನೀಟ್ ಪರೀಕ್ಷೆಗೆ ತೆರಳು ವಿದ್ಯಾರ್ಥಿಗಳು ಮುದ್ರಿತ ಅಥವಾ ಬರೆದ ಸಾಮಗ್ರಿಗಳು, ಹಾಳೆಯ ತುಂಡುಗಳು, ಪೆನ್ಸಿಲ್ ಬಾಕ್ಸ್, ಜಿಯೋಮೆಟ್ರಿ ಬಾಕ್ಸ್, ಕ್ಯಾಲುಕಿಲೇಟರ್, ಪೆನ್, ಸ್ಕೇಲ್, ರೈಟಿಂಗ್ ಪ್ಯಾಡ್, ಪೆನ್ ಡ್ರೈವ್, ರಬ್ಬರ್, ಎಲೆಕ್ಟ್ರಾನಿಕ್ ಪೆನ್, ಸ್ಕ್ಯಾನರ್ ಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಅನುಮತಿ ಇರುವುದಿಲ್ಲ.

* ಮೊಬೈಲ್, ಇಯರ್ ಫೋನ್, ಹೆಲ್ತ್ ಬ್ಯಾಂಡ್, ಹ್ಯಾಂಡ್ ಬ್ಯಾಗ್, ಗಾಗಲ್ಸ್, ಕ್ಯಾಪ್, ಬೆಲ್ಟ್ ಮತ್ತು ಆಭರಣಗಳನ್ನೂ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬಾರದಂತೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ.

Follow Us:
Download App:
  • android
  • ios