ನೀಟ್ ಪರೀಕ್ಷೆ ಬರೆಯಲು ಅನುಮತಿ ಕೇಳಿದ ಪುಲ್ವಾಮಾ ದಾಳಿಯ ಆರೋಪಿ

ಪ್ರಸಕ್ತ ಸಾಲಿನ ವೃತ್ತಿಪರ ಕೋರ್ಸ್ ಗಳಿಗೆ ನಡೆಯಲಿರುವ ನೀಟ್(ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ) ಸೆಪ್ಟೆಂಬರ್ 13ರಂದು ನಡೆಯಲಿದೆ. ಈ ಪರೀಕ್ಷೆ ಬರೆಯಲು ಪುಲ್ವಾಮಾ ಭಯೋತ್ಪಾದಕ ದಾಳಿಯ ಆರೋಪಿ ಅವಕಾಶ ನೀಡಬೇಕೆಂದು ಕೇಳಿಕೊಂಡಿದ್ದಾನೆ. 

Pulwama Attack Accused Moves NIA Court Seeking Bail To Appear For NEET Exam 2020

ನವದೆಹಲಿ, (ಸೆ.02): ಸೆಪ್ಟೆಂಬರ್ 13ರಂದು ನಡೆಯಲಿರುವ ನೀಟ್ (ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ) ಎಕ್ಸಾಮ್ ಬರೆಯಲು ಅನುಮತಿ ನೀಡಬೇಕೆಂದು ಪುಲ್ವಾಮಾ ಆರೋಪಿ ವಾಝಿದ್ ಉಲ್ ಇಸ್ಲಾಮ್ ಎನ್ ಐಎ ವಿಶೇಷ ಕೋರ್ಟ್ ಮುಂದೆ ಮನವಿ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಕಾಶ್ಮೀರ ಮೂಲದ ಈ ಇಸ್ಲಾಮ್  ಮನವಿ ಮಾಡಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಅರ್ಜಿಯ ವಿಚಾರಣೆ ಸೆಪ್ಟೆಂಬರ್ 3ರಂದು ನಡೆಯಲಿದ್ದು, ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಎನ್ ಐಎ ಸಿದ್ದತೆ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.

NEET,JEE ಪರೀಕ್ಷೆ ಗೊಂದಲಗಳಿಗೆ ತೆರೆ ಎಳೆದ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ

ನೀಟ್ ಪರೀಕ್ಷೆ ಬರೆಯಲು ಅನುಮತಿ ಕೊಡಬೇಕೆಂಬ ಇಸ್ಲಾಮ್ ಅರ್ಜಿಯನ್ನು ತಿರಸ್ಕರಿಸಬೇಕು. ವಾಜಿದ್ ಜೈಶ್ ನಂತಹ ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ ಇಟ್ಟುಕೊಂಡಿದ್ದ. ಅಲ್ಲದೇ 2019ರ ಭಯೋತ್ಪಾದಕ ದಾಳಿಯಲ್ಲಿನ ಸ್ಫೋಟಕವನ್ನು ಇ ಕಾಮರ್ಸ್ ಸೈಟ್ ಮೂಲಕ ಖರೀದಿಸುವ ಪ್ರಮುಖ ಸೂತ್ರಧಾರಿಗಳಲ್ಲಿ ಇಸ್ಲಾಮ್ ಪ್ರಮುಖನಾಗಿದ್ದಾನೆ ಎಂದು ಎನ್ ಐಎ ದೂರಿದೆ.

40 ಮಂದಿ ಯೋಧರು ಹುತಾತ್ಮರಾದ ಪುಲ್ವಾಮಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಸಲ್ಲಿಸಿದ್ದ 19 ಮಂದಿ ಆರೋಪಿಗಳ ಚಾರ್ಜ್ ಶೀಟ್ ನಲ್ಲಿ ವಾಝಿದ್ ಹೆಸರು ಇದೆ.

ಈ ಅರ್ಜಿಯ ವಿಚಾರಣೆ ಸೆಪ್ಟೆಂಬರ್ 3ರಂದು ನಡೆಯಲಿದ್ದು,ಇದಕ್ಕೆ ಕೋರ್ಟ್ ಏನು ಹೇಳಿತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

Latest Videos
Follow Us:
Download App:
  • android
  • ios