JEE ಅಡ್ವಾನ್ಸ್ ಫಲಿತಾಂಶ 2021 ಪ್ರಕಟ, 360ಕ್ಕೆ 348 ಅಂಕ ಪಡೆದ ಮರಿದುಲ್‌ಗೆ ಮೊದಲ ರ‍್ಯಾಂಕ್!

  • ಎಂಜಿನೀಯರಿಂಗ್ ಕೋರ್ಸ್ ಪ್ರವೇಶ ಪರೀಕ್ಷಾ ಫಲಿತಾಂಶ ಪ್ರಕಟ
  • ದೆಹಲಿಯ ವಿದ್ಯಾರ್ಥಿ ಮರಿದುಲ್‌ಗೆ ಮೊದಲ ಸ್ಥಾನ
  • ವಿದ್ಯಾರ್ಥಿನಿಯರ ಪೈಕಿ ಕ್ಯಾವ್ಯಾ ಚೋಪ್ರಾಗೆ 1ನೇ ಸ್ಥಾನ
  • JEE ಅಡ್ವಾನ್ಸ್ ಫಲಿತಾಂಶ 2021 ಲಿಸ್ಟ್ ಇಲ್ಲಿದೆ
National testing agency anncouces JEE advance exam result 2021 delhi student scores top rank ckm

ನವದೆಹಲಿ(ಅ.15): ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಇಂದು(ಅ.15) ಜಂಟಿ ಪ್ರವೇಶ ಪರೀಕ್ಷೆ( JEE) ಅಡ್ವಾನ್ಸ್ ಫಲಿತಾಂಶ 2021 ಪ್ರಕಟಿಸಿದೆ. ದೆಹಲಿಯ ವಿದ್ಯಾರ್ಥಿ ಮರಿದುಲ್ ಅಗರ್ವಾಲ್ 360 ಅಂಕಗಳಲ್ಲಿ 348 ಅಂಕ ಪಡೆದ ಮೊದಲ ಸ್ಥಾನ ಗಳಿಸಿದ್ದಾನೆ. ಇನ್ನು ವಿದ್ಯಾರ್ಥಿನಿಯರ ಪೈಕಿ ದೆಹಲಿಯ ಕಾವ್ಯಾ ಚೋಪ್ರಾ ಮೊದಲ ಸ್ಥಾನ ಗಳಿಸಿದ್ದಾರೆ.

ಕ್ಲಾಸ್‌ 1 ಉದ್ಯೋಗ ತೊರೆದು ಕನಸಿನ ಬೆನ್ನತ್ತಿದ ಜಾಗೃತಿ, UPSCಯಲ್ಲಿ 2ನೇ ರ‍್ಯಾಂಕ್!

JEE ಅಡ್ವಾನ್ಸ್ ಎಂಜಿನಿಯರ್ ಕೋರ್ಸ್‌ ಪ್ರವೇಶಕ್ಕಾಗಿ ನಡೆಸುವ ಪರೀಕ್ಷೆಯಾಗಿದೆ. ಈ ಪರೀಕ್ಷೆಯಲ್ಲಿ 17ರ ಹರೆಯದ ಮರಿದುಲ್ ಮೊದಲ ಸ್ಥಾನ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಪ್ರವೇಶಕ್ಕಾಗಿ ಮರಿದುಲ್ JEE ಅಡ್ವಾನ್ಸ್ ಪರೀಕ್ಷೆ ಬರೆದಿದ್ದ. ಇದೀಗ ಫಲಿತಾಂಶ ಪ್ರಕಟಗೊಂಡಿದ್ದು, ಅತ್ಯಧಿಕ ಅಂಕಗಳೊಂದಿಗೆ ದಾಖಲೆ ಬರೆದಿದ್ದಾನೆ.

JEE ಅಡ್ವಾನ್ಸ್ ಪರೀಕ್ಷೆ ರ‍್ಯಾಂಕಿಂಗ್‌ನಲ್ಲಿ ಮರಿದುಲ್ ಇತರ 17 ವಿದ್ಯಾರ್ಥಿಗಳ ಜೊತೆ ಮೊದಲ ಸ್ಥಾನ ಹಂಚಿಕೊಂಡಿದ್ದರೆ, ವಿದ್ಯಾರ್ಥಿನಿಯರ ಪೈಕಿ ಮೊದಲ ಸ್ಥಾನ ಪಡೆದ ಕಾವ್ಯ ಚೋಪ್ರಾ 98ನೇ ರ‍್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿನಿಯರ ಪೈಕಿ ಕಾವ್ಯಾ ಚೋಪ್ರಾ 360 ಅಂಕಗಳ ಪೈಕಿ 286 ಅಂಕಗಳನ್ನು ಪಡೆದು ಮೊದಲ ಸ್ಥಾನ ಗಳಿಸಿದ್ದಾರೆ. 

ಎರಡು ಬಾರಿ ಸೋತರೂ, 4ನೇ ಪ್ರಯತ್ನದಲ್ಲಿ UPSC ಟಾಪರ್ ಆದ ಪ್ರಖರ್ ಜೈನ್!

JEE ಅಡ್ವಾನ್ಸ್ ಪರೀಕ್ಷೆ ಬರೆಯಲು ಹಿಂದಿಗಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಬಾರಿ 1,41699 ವಿದ್ಯಾರ್ಥಿಗಳು JEE ಅಡ್ವಾನ್ಸ್ ಪರೀಕ್ಷೆ 2021 ಬರೆದಿದ್ದರು. ಇದರಲ್ಲಿ  41,862 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. 

ದೇಶಸೇವೆಗಾಗಿ ಮೂರು ವರ್ಷ ಸೋಶಿಯಲ್ ಮೀಡಿಯಾದಿಂದ ದೂರ ಉಳಿದ ಅಂಜಲಿ!

ಈ ಬಾರಿ JEE ಅಡ್ವಾನ್ಸ್ ಪರೀಕ್ಷೆ ಸ್ವರೂಪ ಬದಲಿಸಲಾಗಿತ್ತು. ಇದರ ಜೊತೆಗೆ ಕೊರೋನಾ ಹೊಡೆತವು ವಿದ್ಯಾರ್ಥಿಗಳಿಗೆ ತೀವ್ರವಾಗಿ ಕಾಡಿತ್ತು. ನಾಲ್ಕು ಹಂತಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಮೊದಲ ಹಂತ ಪರೀಕ್ಷೆ ಫೆಬ್ರವರಿಯಲ್ಲಿ ಯಾವುದೇ ಆತಂಕವಿಲ್ಲದೆ ನಡೆದಿತ್ತು. ಆದರೆ ಎರಡನೇ ಹಂತದ ಪರೀಕ್ಷೆ ಮಾರ್ಚ್‌ನಲ್ಲಿ ನಡೆದಿತ್ತು. ಈ ವೇಳೆ ಕೊರೋನಾ 2ನೇ ಅಲೆ ಆತಂಕ ಎದುರಾಗಿತ್ತು. ಇನ್ನು ಮೂರು ಮತ್ತು ನಾಲ್ಕನೇ ಹಂತದ ಪರೀಕ್ಷೆ ಕೊರೋನಾ 2ನೇ ಅಲೆ ಕಾರಣ ರದ್ದಾಗಿತ್ತು. ಬಳಿಕ ಜುಲೈ ಅಂತ್ಯದಲ್ಲಿ ಹಾಗೂ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಉಳಿದ ಹಂತಗಳ ಪರೀಕ್ಷೆ ನಡೆಸಲಾಗಿತ್ತು. ಮೊದಲೆರೆಡು ಹಂತಕ್ಕೆ ಹಾಜರಾದ ಹಲವು ವಿದ್ಯಾರ್ಥಿಗಳು 3 ಮತ್ತು 4ನೇ ಹಂತಕ್ಕೆ ಹಾಜರಾಗಿಲ್ಲ. 

Latest Videos
Follow Us:
Download App:
  • android
  • ios