ಶಾಲೆ ಪ್ರಾರಂಭವಾಗಿ 15 ದಿನ ಕಳೀತಾ ಇದ್ರು, ಪಠ್ಯ ಪರಿಷ್ಕರಣೆ ವಿವಾದ ಮಾತ್ರ ಇನ್ನೂ ನಿಂತಿಲ್ಲ. ಬುಧವಾರವಷ್ಟೇ ಸಾಹಿತಿಗಳು, ಶಿಕ್ಷಣ ತಜ್ಞರು ಹೊಸ ಪಠ್ಯ ಪರಿಷ್ಕರಣೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ರು.
ವರದಿ: ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಮೇ.27): ಶಾಲೆ ಪ್ರಾರಂಭವಾಗಿ 15 ದಿನ ಕಳೀತಾ ಇದ್ರು, ಪಠ್ಯ ಪರಿಷ್ಕರಣೆ ವಿವಾದ ಮಾತ್ರ ಇನ್ನೂ ನಿಂತಿಲ್ಲ. ಬುಧವಾರವಷ್ಟೇ ಸಾಹಿತಿಗಳು, ಶಿಕ್ಷಣ ತಜ್ಞರು ಹೊಸ ಪಠ್ಯ ಪರಿಷ್ಕರಣೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ರು. ಇದರ ಬೆನ್ನಲ್ಲೇ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಬೆಂಗಳೂರಿನಲ್ಲಿ ಸಭೆ ನಡೆಸಿ ಪಠ್ಯ ಪರಿಷ್ಕರಣೆ ವಿವಾದ ಬಗೆಹರಿಸಲು ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟಿದ್ದಾರೆ.
ರೋಹಿತ್ ಚಕ್ರತೀರ್ಥ ಸಮಿತಿ ವಜಾಗೊಳಿಸಲು ಕರವೇ ಅಧ್ಯಕ್ಷ ನಾರಾಯಣ ಗೌಡ ಸರ್ಕಾರಕ್ಕೆ ಇದೇ 31 ರವರೆಗೂ ಗಡವು ಕೊಟ್ಟಿದ್ದಾರೆ.ಕೊರೋನಾದಿಂದ ಕಳೆದ ಎರಡು ವರ್ಷಗಳಿಂದ ಶಾಲೆ ನಡೆದಿಲ್ಲ.ಹೀಗಾಗಿ ಹಳೆಯ ಪಠ್ಯಕ್ರಮವನ್ನೇ ಮುಂದುವರಿಸಿ..ಹೊಸ ಪಠ್ಯ ಪರಿಷ್ಕರಣೆ ಕೈ ಬಿಡಿ ಎಂದು ಸರ್ಕಾರಕ್ಕೆ ನಾರಾಯಣ ಗೌಡ ಒತ್ತಾಯಿಸಿದ್ದಾರೆ.
ರೋಹಿತ್ ಚಕ್ರತೀರ್ಥ ಶೈಕ್ಷಣಿಕ ಅರ್ಹತೆ ಬಹಿರಂಗ, ಸಚಿವ ನಾಗೇಶ್ ಸುಳ್ಳು ಹೇಳಿದ್ರಾ?
ಈಗೀರುವ ಸಮಿತಿಯನ್ನ ಯಾವುದೇ ಕಾರಣಕ್ಕೂ ಮುಂದುವರಿಸಬಾರದು.ಮುಖ್ಯಮಂತ್ರಿಗಳು ಕೂಡಲೇ ಸಭೆ ಕರೆದು ಭುಗಿಲೇದ್ದಿರುವ ಪಠ್ಯ ಪರಿಷ್ಕರಣೆ ವಿವಾದ ಬಗೆಹರಿಸಬೇಕು. ಇಲ್ಲವಾದಲ್ಲಿ ಇದೇ 31 ರಿಂದ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಸಾಹಿತಿಗಳ ಜೊತೆ ಚರ್ಚೆ ನಡೆಸಿಲ್ಲ.ಈ ನೆಲದ ಶಿಕ್ಷಣ ತಜ್ಞರು, ಸಾಹಿತಿಗಳು ಮಕ್ಕಳು ಯಾವುದನ್ನ ಓದಬೇಕು ಅನ್ನೋದನ್ನ ಶಿಕ್ಷಣ ಸಚಿವರು ನಿರ್ಧಾರ ಮಾಡೋದು ಸರಿಯಲ್ಲ.ಆದ್ರೆ ಹೊಸ ಪಠ್ಯ ಕ್ರಮ ನೀಡೋದ್ರಿಂದ ಮಕ್ಕಳಿಗೆ ತೊಂದರೆ ಆಗುತ್ತೆ.ಹಳೆ ಪಠ್ಯಕ್ರಮವನ್ನೇ ಮುಂದುವರಿಸಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನನ್ನ ಕತೆ ಪಾಠ ಮಾಡೋದು ಬೇಡ: ಸರ್ಕಾರಕ್ಕೆ ಪತ್ರ ಬರೆದ ದೇವನೂರ ಮಹದೇವ
ರೋಹಿತ್ ಚಕ್ರತೀರ್ಥ ವಿರುದ್ಧ ವಾಗ್ದಾಳಿ ನಡೆಸಿದ ನಾರಾಯಣ ಗೌಡ: ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಈ ನಾಡಿಗೆ ದೊಡ್ಡ ಕಳಂಕ..ಈ ರೀತಿ ಪಠ್ಯ ಪರಿಷ್ಕರಣೆ ಮಾಡಿ ಬೇಷ್ ಎನಿಸಿಕೊಳ್ಳಲು ಹೊರಟಿದ್ದಾರೆ.ಆಲ್ಲದೆ ಈ ನಾಡಿನ ಹೆಸರಾಂತ ಕವಿಗಳ ವಿರುದ್ಧ ಮಾತನಾಡುವ ಮೂಲಕ ರಾಜಕೀಯ ಪ್ರವೇಶ ಮಾಡಲು ವೇದಿಕೆ ಸಜ್ಜು ಮಾಡಿಕೊಳ್ಳುತ್ತಿದ್ದಾರೆ ಅಂತ ಕರವೇ ಅಧ್ಯಕ್ಷ ನಾರಾಯಣಗೌಡ ವಾಗ್ದಾಳಿ ನಡೆಸಿದ್ರು.
