Asianet Suvarna News Asianet Suvarna News

Hubballi; ವಿರೋಧದ ನಡುವೆಯೂ ಅನಧಿಕೃತ ಕಟ್ಟಡಗಳ ತೆರವು ಆರಂಭ!

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೇಕಾ ಬಿಟ್ಟಿ ಅನಧಿಕೃತ ಕಟ್ಟಡ, ವ್ಯಾಪಾರ ಮಳಿಗೆಗಳನ್ನು  ತಲೆ ಎತ್ತಿದ್ದು, ಇದರಿಂದ ಸಾಕಷ್ಟು ಸಮಸ್ಯೆಗಳು ಉಲ್ಬಣಿಸುತ್ತಿವೆ.

HDUDA start demolition of unauthorised building in hubballi gow
Author
Bengaluru, First Published Jun 1, 2022, 5:02 PM IST

ಹುಬ್ಬಳ್ಳಿ (ಜೂ.1): ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ (Hubballi-Dharwad Municipal Corporation) ವ್ಯಾಪ್ತಿಯಲ್ಲಿ ಬೇಕಾ ಬಿಟ್ಟಿ ಅನಧಿಕೃತ ಕಟ್ಟಡ, ವ್ಯಾಪಾರ ಮಳಿಗೆಗಳನ್ನು  ತಲೆ ಎತ್ತಿದ್ದು, ಇದರಿಂದ ಸಾಕಷ್ಟು ಸಮಸ್ಯೆಗಳು ಉಲ್ಬಣಿಸುತ್ತಿವೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ (Hubballi) ಧಾರವಾಡ (Dharwad) ಮಹಾನಗರ ಪಾಲಿಕೆ ಅಧಿಕಾರಿಗಳ ತೆರವು ಕಾರ್ಯಚರಣೆ ಆರಂಭಿಸಿದ್ದು,  ಅನಧಿಕೃತ ಕಟ್ಟಡಗಳ ಮಾಲೀಕರಿಗೆ ಬಿಸಿ‌ ಮುಟ್ಟಿಸಲಾಗುತ್ತಿದೆ.

ಹಳೆ ಹುಬ್ಬಳ್ಳಿಯ ಹೆಗ್ಗೇರಿ ಕಾಲೋನಿಯಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ಮನೆಗಳನ್ನು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಯಿತು. ಬಿಗಿ ಪೊಲೀಸ್ ಭದ್ರತೆಯಲ್ಲಿ ಪಾಲಿಕೆ ಅಧಿಕಾರಿಗಳು ಅಕ್ರಮ ಕಟ್ಟಡಗಳನ್ನು ತೆರವು ಮಾಡಿದ್ರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳು ನೇತೃತ್ವದಲ್ಲಿ ನಡೆಸಲಾಗಿದ್ದು, ಕಟ್ಟಡಗಳ ತೆರವಿಗೆ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದ್ರು. ಆದ್ರೆ ಇದಕ್ಕೆ ಸೊಪ್ಪು ಹಾಕದ ಪಾಲಿಕೆ ಅಧಿಕಾರಿಗಳು ಬಿಗಿ ಪೊಲೀಸ್ ಸಹಕಾರ ಪಡೆದುಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ.

DHARWADದಲ್ಲಿ ಗೊಬ್ಬರಕ್ಕಾಗಿ ರೈತರ ಪರದಾಟ, ಶಾಸಕ ಬೆಲ್ಲದ ಮನೆಗೆ ಮುತ್ತಿಗೆ

ಈ ಹಿಂದೆಯೇ ಅಕ್ರಮ ಕಟ್ಟಡಗಳ ಮಾಲೀಕರಿಗೆ  ಸ್ವಯಂ ತೆರವಿಗೆ ಗಡುವು ನೀಡಿ ಎಚ್ಚರಿಕೆ ನೋಟಿಸ್ ಸಹ ಜಾರಿ ಮಾಡಲಾಗಿತ್ತು. ಆದ್ರು ತೆರವು ಮಾಡಿಕೊಳ್ಳದ‌ ಹಿನ್ನಲೆ ಏಕಾಏಕಿ ಜೆಸಿಬಿ ಸಹಾಯದಿಂದ 10 ಕ್ಕೂ ಹೆಚ್ಚು ಮನೆಗಳನ್ನು ತೆರವು ಮಾಡಲಾಯಿತು.

ಈ ನಡುವೆ ಮನೆಯ ಮಾಲಿಕರು ತಮ್ಮ ವಸ್ತುಗಳನ್ನು ತೆಗೆಯಲು ಅವಕಾಶವನ್ನು ನೀಡಬೇಕು ಎಂದು ಪರಿಪರಿಯಾಗಿ ಬೇಡಿಕೊಂಡ್ರು ಕಿವಿಗೊಡದ ಅಧಿಕಾರಿಗಳ.  ಈಗಾಗಲೇ ಪಾಲಿಕೆ ಅಧಿಕಾರಿಗಳು ಅನೇಕ ಭಾರಿ ಸಮಯಾಕಾಶ ನೀಡಿದ್ರು ತೆರವು ಮಾಡದ ಹಿನ್ನಲೆ, ಇಂದು ಜೆಸಿಬಿ ಮೂಲಕ ಕಟ್ಟಡಗಳನ್ನು ನೆಲಕ್ಕುರುಳಿಸಲಾಯಿತು.

Chitradurga; ಚಲವಾದಿ ಗುರುಪೀಠದಲ್ಲಿ ಸಮಾಜದ ಸಭೆ, ಎರಡು ಗುಂಪುಗಳ ವಾಗ್ವಾದ

ಗೊಬ್ಬರಕ್ಕಾಗಿ ರೈತರ ಪರದಾಟ, ಶಾಸಕ ಬೆಲ್ಲದ ಮನೆಗೆ ಮುತ್ತಿಗೆ: ಧಾರವಾಡ (Dharwad) ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಆರಂಭಗೊಂಡಿದೆ. ಸದ್ಯ ಜೂನ್ ಮೊದಲನೇಯ ವಾರದಲ್ಲಿ ಧಾರವಾಡಕ್ಕೆ ಮಳೆ (Rain) ಆಗಮಿಸುತ್ತೆ ಎಂಬ ನೀರಿಕ್ಷೆಯಲ್ಲಿ ಅನ್ನದಾತರು, ಬಿತ್ತನೆ ಕಾರ್ಯವನ್ನ ಆರಂಭ ಮಾಡಿದ್ದಾರೆ‌. ಇನ್ನೊಂದಡೆ ರೈತರಿಗೆ (Farmers) ಸಮರ್ಪಕವಾದ ಬಿತ್ತನೆ ಬೀಜ ಸಿಗುತ್ತಿಲ್ಲ ಎಂದು ರೈತರು ಪರದಾಡುವಂತಾಗಿದೆ. 

ಧಾರವಾಡ ಜಿಲ್ಲೆಯಲ್ಲಿ ರಸಗೊಬ್ಬರಕ್ಕಾಗಿ (Fertilizer) ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಿನೇ ದಿನೇ ರಸಗೊಬ್ಬರಕ್ಕಾಗಿ ಅಲೆದಾಡುತ್ತಿರುವ ಅನ್ನದಾತರು ಕಂಗಾಲಾಗಿ ಧಾರವಾಡದಲ್ಲಿರುವ ಶಾಸಕ ಅರವಿಂದ ಬೆಲ್ಲದ (MLA Arvind Bellad) ಅವರ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. 

ಸೊಸೈಟಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ರಸಗೊಬ್ಬರವೇ ಸಿಗುತ್ತಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ಬರೀ ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಸದ್ಯ ಬಿತ್ತನೆ ಕಾರ್ಯ ಆರಂಭವಾಗಿದ್ದು, ಬಿತ್ತನೆಗೆ ಪೂರಕವಾದ ಡಿ ಎ ಪಿ ಗೊಬ್ಬರವೇ ಧಾರವಾಡದಲ್ಲಿ ಸಿಗುತ್ತಿಲ್ಲ. ಶಾಸಕ ಅರವಿಂದ ಬೆಲ್ಲದ ಅವರು ಸರ್ಕಾರದಲ್ಲಿದ್ದು, ಅವರು ಈ ಸಮಸ್ಯೆ ಬಗೆಹರಿಸಬೇಕು ಎಂದು ರೈತರು ಅವರ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಬಿತ್ತನೆ ಸಮಯದಲ್ಲಿ ರಸಗೊಬ್ಬರ ಪೂರೈಕೆ ಮಾಡಿದರೆ ಅದು ಪ್ರಯೋಜನವಾಗುತ್ತದೆ. ಬಿತ್ತುವ ಸಮಯ ಮುಗಿದು ಹೋದ ಮೇಲೆ ಗೊಬ್ಬರ ಪೂರೈಕೆ ಮಾಡಿದರೆ ಅದು ಪ್ರಯೋಜನಕ್ಕೆ ಬರುವುದಿಲ್ಲ. ಧಾರವಾಡದಲ್ಲಿ ರಸಗೊಬ್ಬರದ ಅಭಾವ ಸೃಷ್ಠಿಯಾಗಿದ್ದು, ರೈತರು ಆಕ್ರೋಶಗೊಂಡಿದ್ದಾರೆ.

ಇನ್ನು ಕೃಷಿ ಅಧಿಕಾರಿಗಳು ಗೊಬ್ಬರವನ್ನ ತರಸಿ ರೈತರಿಗೆ ಕೋಡಲು ಒಂದು ಕಡೆ ಮುಂದಾದ್ರೆ ಸೋಸೈಟಿ ಅವರು ಗೊಬ್ಬರವನ್ನು ಸಂಗ್ರಹಣ ಮಾಡಿ ಡಬಲ್ ದರಕ್ಕೆ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಅಂತವರನ್ನ ಕೃಷಿ ಅಧಿಕಾರಿಗಳು ಪತ್ತೆ ಹಚ್ಚಬೇಕಿದೆ. ಇನ್ನು ಕಡಿಮೆ ದರದಲ್ಲಿ ಸಿಗಬೇಕಾದ ದರ ಸದ್ಯ ಹೆಚ್ಚಿನ ದರಕ್ಕೆ‌ ಮಾರಾಟ ಮಾಡುವವರ ಹಡೆಮೂರಿ ಕಟ್ಟಬೇಕಿದೆ. ಮತ್ತೊಂದೆಡೆ ಗೊಬ್ಬರ ಎಷ್ಟು ಬಂದಿದೆ ಅನ್ನುವುದರ ಬಗ್ಗೆ ಕೃಷಿ ಅಧಿಕಾರಿಗಳು ರೈತರಿಗೆ ಮಾಹಿತಿಯನ್ನ ನೀಡಬೇಕು ಎಂದು ಕೃಷಿ ಅಧಿಕಾರಿಗಳಿಗೆ ರೈತರು ಒತ್ತಾಯ ಮಾಡಿದ್ದಾರೆ. 

Follow Us:
Download App:
  • android
  • ios