ಮೈಸೂರು ಮಹಾರಾಣಿ ಮಹಿಳಾ ಪ್ರಶಿಕ್ಷಣ ಸಂಸ್ಥೆ ಮುಚ್ಚದಿರಲು ಆಗ್ರಹ
ಮೈಸೂರು ನಗರದಲ್ಲಿರುವ ಸರ್ಕಾರಿ ಮಹಾರಾಣಿ ಮಹಿಳಾ ಪ್ರಶಿಕ್ಷಣ ಸಂಸ್ಥೆಯನ್ನು ಮುಚ್ಚದಿರುವಂತೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದ್ದಾರೆ.
ಮೈಸೂರು (ಜ.12): ಮೈಸೂರು ನಗರದಲ್ಲಿರುವ ಸರ್ಕಾರಿ ಮಹಾರಾಣಿ ಮಹಿಳಾ ಪ್ರಶಿಕ್ಷಣ ಸಂಸ್ಥೆಯನ್ನು ಮುಚ್ಚದಿರುವಂತೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದ್ದಾರೆ. 1928ರಲ್ಲಿ ಪ್ರಾರಂಭವಾಗಿದ್ದು, ಮಹಾರಾಜರು ಪ್ರಾರಂಭಿಸಿದ ಈ ಸಂಸ್ಥೆಗೆ 95 ವರ್ಷಗಳ ಇತಿಹಾಸ ಇದೆ. ಶತಮಾನೋತ್ಸವ ಆಚರಣೆಯ ಹೊಸಲಿನಲ್ಲಿದೆ. ಮಹಿಳೆಯರ ಸಬಲೀಕರಣ ಹಾಗೂ ಪ್ರಶಿಕ್ಷಣದ ಹಿತದೃಷ್ಟಿಯಿಂದ ಸ್ಥಾಪನೆಗೊಂಡ ಈ ಸಂಸ್ಥೆಯಲ್ಲಿ ಟಿಸಿಎಚ್, ಡಿಇಡಿ, ಡಿಎಲ್.ಇಡಿ ಕೋರ್ಸ್‌ಗಳ ಮೂಲಕ ನಿರಂತರವಾಗಿ ಗ್ರಾಮೀಣ ಪ್ರದೇಶದ ಬಡ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತ ಮಹಿಳೆಯರು ಗುಣಮಟ್ಟದ ತರಬೇತಿ ಪಡೆದು ಶಿಕ್ಷಕರಾಗಿ ನೇಮಕಗೊಂಡು, ತಮ್ಮ ಸ್ವಾವಲಂಬಿ ಜೀವನ ರೂಪಿಸಿಕೊಳ್ಳುತ್ತಿದ್ದಾರೆ.
ಮೈಸೂರು ವಿಭಾಗದಲ್ಲೇ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಏಕೈಕ ಮಹಿಳಾ ಪ್ರಶಿಕ್ಷಕರ ಸರ್ಕಾರಿ ತರಬೇತಿ ಸಂಸ್ಥೆ ಇದಾಗಿದ್ದು, ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನದ ಹಿನ್ನಲೆಯಲ್ಲಿ ಈ ಸಂಸ್ಥೆ ಮುಚ್ಚುವಂತೆ ಪ್ರಸ್ತಾಪಿಸಿ, ತೀರ್ಮಾನಿಸಲಾಗಿತ್ತು.
ಶಿಕ್ಷಕರ ವರ್ಗ ಪರಿಷ್ಕೃತ ವೇಳಾಪಟ್ಟಿ ಪ್ರಕಟ, ಜ.16ರ ವರೆಗೆ ಹೆಚ್ಚುವರಿ ಶಿಕ್ಷಕರ ದಾಖಲೆಗಳ ಪರಿಶೀಲನೆ
ಸರ್ಕಾರಿ ಮಹಾರಾಣಿ ಮಹಿಳಾ ಪ್ರಶಿಕ್ಷಣ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಮುಚ್ಚದೆ ಮತ್ತು ಪ್ರಶಿಕ್ಷಣ ಸಂಸ್ಥೆಗಳಲ್ಲಿನ ಯಾವುದೇ ಹುದ್ದೆಗಳನ್ನು ರದ್ದುಪಡಿದೇ ಅದರ ಬಲವರ್ಧನೆಗಾಗಿ ಕ್ರಮ ಕೈಗೊಂಡು, ಶೈಕ್ಷಣಿಕ ಹಿತದೃಷ್ಟಿಯಿಂದ ಸದರಿ ಸಂಸ್ಥೆಯನ್ನು ಮುಂದುವರೆಸುವಂತೆ ಅವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರನ್ನು ಒತ್ತಾಯಿಸಿದ್ದಾರೆ.
ಶಿವಮೊಗ್ಗ: ಕುವೆಂಪು ವಿವಿ ಕುಲಸಚಿವೆ ವಿಜಯನಗರ ಅಪರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ
ಗ್ರಂಥಾಲಯಗಳಿಗೆ ಪುಸ್ತಕ ಆಹ್ವಾನ
ಮೈಸೂರು: ನಿರ್ದೇಶಕರು ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಾಲಯಗಳಗೆ 2022ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಣೆಯಾದ ಸಾಹಿತ್ಯ, ಕಲೆ, ವಿಜ್ಞಾನ, ಸರ್ಧಾತ್ಮಕ, ಪಠ್ಯ, ಪಠ್ಯ ಪುಸ್ತಕ, ಸಾಂದರ್ಭಿಕ, ಮಕ್ಕಳ ಸಾಹಿತ್ಯ, ವೃತ್ತಿ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಆದಾಯ ಉತ್ಪಾದನಾ ಯೋಜನೆ ಇತ್ಯಾದಿ ವಿಷಯಗಳ ಕನ್ನಡ, ಆಂಗ್ಲ ಹಾಗೂ ಇತರೆ ಭಾರತೀಯ ಭಾಷೆಯ ಗ್ರಂಥಗಳ ಆಯ್ಕೆಗೆ ಲೇಖಕ, ಲೇಖಕ ಪ್ರಕಾಶಕ, ಪ್ರಕಾಶಕರ ಹಾಗೂ ಪ್ರಕಟ ಸಂಸ್ಥೆಗಳಿಂದ ಪುಸ್ತಕ ಆಹ್ವಾನಿಸಲಾಗಿದೆ. ಅರ್ಜಿಯೊಂದಿಗೆ ಗ್ರಂಥಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ ಇಲ್ಲಿ ಕಾಪಿರೈಟ್ ಮಾಡಿಸಿರುವ ಪುಸ್ತಕದ ಪ್ರತಿಯನ್ನು ನೋಂದಣಿ ಪತ್ರದ ಪ್ರತಿಯೊಂದಿಗೆ ಜ. 31ರ ಸಂಜೆ 5 ರೊಳಗಾಗಿ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ನಗರ ಕೇಂದ್ರ ಗ್ರಂಥಾಲಯವನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಬಿ. ಮಂಜುನಾಥ್ ತಿಳಿಸಿದ್ದಾರೆ.