Asianet Suvarna News Asianet Suvarna News

ಶಿವಮೊಗ್ಗ: ಕುವೆಂಪು ವಿವಿ ಕುಲಸಚಿವೆ ವಿಜಯನಗರ ಅಪರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ

ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ  ಅನುರಾಧ.ಜಿ  ಅವರನ್ನು ವಿಜಯನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ. 

Kuvempu University Chancellor Transferred as Vijayanagara District Collector grg
Author
First Published Jan 11, 2023, 9:01 AM IST

ಶಿವಮೊಗ್ಗ(ಜ.11):  ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಅನುರಾಧ. ಜಿ ಅವರನ್ನು ವಿಜಯನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇಂದಿನಿಂದಲೇ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಲಾಗಿದೆ. 

ಶಿವಮೊಗ್ಗದಲ್ಲಿ ಎಡಿಸಿಯಾಗಿ ಸೇವೆ ಸಲ್ಲಿಸಿದ್ದ ಅನುರಾಧ.ಜಿ ಅವರು 2020 ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕವಾಗಿದ್ದರು. ಇದೀಗ ವಿಜಯನಗರ ಅಪರ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ. ವಿಜಯನಗರ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಮ್ಮ ಜವಾಬ್ದಾರಿಯಲ್ಲಿ ಮುಂದುುವರಿಯಲಿದ್ದಾರೆ.

NEP ಅನುಷ್ಠಾನದಲ್ಲಿ ಕುವೆಂಪು ವಿಶ್ವವಿದ್ಯಾಲಯ ಮೇಲುಗೈ: ಪ್ರೊ. ವೀರಭದ್ರಪ್ಪ

ಕುವೆಂಪು ವಿವಿ ಕುಲಸಚಿವ ಸ್ಥಾನಕ್ಕೆ ಹಣಕಾಸು ಅಧಿಕಾರಿ ಪ್ರೊ.ನವೀನ್ ಕುಮಾರ್‌ ಅವರಿಗೆ ಹೆಚ್ಚುವರಿ ಜವಬ್ದಾರಿ ನೀಡಲಾಗಿದೆ ಅಂತ ತಿಳಿದು ಬಂದಿದೆ. 

Follow Us:
Download App:
  • android
  • ios