ಎಸ್ಸೆಸ್ಸೆಲ್ಸಿ ಪರೀಕ್ಷೆ: ತಾಯಿ, ಮಗಳು ಪಾಸ್‌..!

*  2002-03ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯಾಗಿದ್ದ ಸವಿತಾ
*  ಮದುವೆ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಲಾಗಿರಲಿಲ್ಲ
*  ತನ್ನ ಮಗಳೊಂದಿಗೆ ತಾನು ಪರೀಕ್ಷೆ ಬರೆದು ಪಾಸ್‌

Mother And Daughter Pass in SSLC Exam in Hosapete grg

ಹೊಸಪೇಟೆ(ಮೇ.20): ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಯಿ-ಮಗಳು ಇಬ್ಬರು ಪಾಸಾಗಿದ್ದಾರೆ!.

ಮರಿಯಮ್ಮನಹಳ್ಳಿ ನಿವಾಸಿ, ಚಿಲುಗೋಡಿ ಹೈಸ್ಕೂಲ್‌ ಶಿಕ್ಷಕ ಬಿ.ರಾಮಜ್ಜರ ಪತ್ನಿ ಸವಿತಾ (37 ವರ್ಷ) ಹಾಗು ಮಗಳು ಚೇತನಾ ಇಬ್ಬರೂ ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.

ಸವಿತಾರ ಅವರು 2002-03ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯಾಗಿದ್ದರು. ಮದುವೆ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಲಾಗಿರಲಿಲ್ಲ. ಈಗ ತನ್ನ ಮಗಳೊಂದಿಗೆ ತಾನು ಪರೀಕ್ಷೆ ಬರೆದು ಪಾಸಾಗಿದ್ದಾರೆ. ಅವರ ಪತಿ ರಾಮಜ್ಜ ಮತ್ತು ಮಗಳು ಚೇತನಾ ಕೂಡ ಅವರ ಸಾಧನೆಗೆ ಸಾಥ್‌ ನೀಡಿದ್ದಾರೆ.

Chikkamagaluru: ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಾಫಿನಾಡಿಗೆ ಎ ಶ್ರೇಣಿ: 6 ಮಂದಿ ವಿದ್ಯಾರ್ಥಿಗಳು 625 ಕ್ಕೆ 625

ಮರಿಯಮ್ಮನಹಳ್ಳಿ ಪಟ್ಟಣದ ಸ.ಪ.ಪೂ. ಕಾಲೇಜಿನ ಹೈಸ್ಕೂಲ್‌ ವಿಭಾಗದಲ್ಲಿ ಖಾಸಗಿ ವಿದ್ಯಾರ್ಥಿಯಾಗಿ ಪರೀಕ್ಷೆ ತೆಗೆದುಕೊಂಡು ಯು ಟ್ಯೂಬ್‌ ಮುಖಾಂತರ ಹೊಸ ಪಠ್ಯವನ್ನು ಅಭ್ಯಾಸ ಮಾಡಿದರು. ಹೊಸಪೇಟೆಯ ಚೈತನ್ಯ ಟೆಕ್ನೊ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದು ಶೇ. 45ರಷ್ಟುಅಂಕ ಪಡೆದು ಪಾಸಾಗಿದ್ದಾರೆ. ಅವರ ಮಗಳು ಚೇತನಾ ಸ್ಮಯೋರ್‌ ವ್ಯಾಸಪುರಿ ಪ್ರೌಢಶಾಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆದು ಶೇ.85 ಅಂಕ ಪಡೆದು ತೇರ್ಗಡೆಯಾಗಿದ್ದಾಳೆ.
ಬಹು ವರ್ಷಗಳ ನಂತರ ಪರೀಕ್ಷೆ ಬರೆಯುವ ಹಂಬಲದೊಂದಿಗೆ ಪರೀಕ್ಷೆ ಬರೆದು ತೇರ್ಗಡೆಯಾದ ತೃಪ್ತ ಭಾವ ಇದೆ ಎಂದು ಸವಿತಾ ಅವರು ಸಂತಸ ಹಂಚಿಕೊಂಡರು.
 

Latest Videos
Follow Us:
Download App:
  • android
  • ios