ಮೋದಿ ಅಂಕಲ್, ಮಕ್ಕಳಿಗೇ ಯಾಕೆ ಅಷ್ಟೊಂದು ಕೆಲ್ಸಾ?: 6 ವರ್ಷದ ಕಾಶ್ಮೀರಿ ಪೋರಿಯ ಕ್ಯೂಟ್ ಪ್ರಶ್ನೆ!

ಕೊರೋನಾ ಹಿನ್ನೆಲೆಯಲ್ಲಿ ಶಾಲೆಗಳು ಈ ವರ್ಷವೂ ತೆರೆಯುವುದು ಅನುಮಾನವೇ. ಕಳೆದ ವರ್ಷವೂ ಇದೇ ಪರಿಸ್ಥಿತಿ ಇತ್ತು. ಮಕ್ಕಳಿಗೆ ಆನ್‌ಲೈನ್ ಮೂಲಕವೇ ಪಾಠ ಮಾಡಲಾಗುತ್ತಿದೆ. ಆದರೆ, ಕಾಶ್ಮೀರದ 6 ವರ್ಷದ ಬಾಲಕಿ ಮಕ್ಕಳಿಗೆ ಯಾಕೆ ಇಷ್ಟೊಂದು ಕಷ್ಟ ಎಂದು ಪ್ರಧಾನಿ ಮೋದಿ ಅವರಿಗೆ ಕ್ಯೂಟ್ ಪ್ರಶ್ನೆ ಮಾಡಿದ್ದಾಳೆ. ಅವಳ ಈ ವಿಡಿಯೋ ಸಖತ್ ವೈರಲ್ ಆಗಿದೆ.

Modiji why so much work for students asks 6 year old kashmiri girl

ಕೊರೋನಾ ವೈರಸ್ ಎಲ್ಲವನ್ನೂ ಉಲ್ಟಾಪಲ್ಟಾ ಮಾಡಿಬಿಟ್ಟಿದೆ. ಕಳೆದೊಂದು ವರ್ಷದಿಂದ ಎಲ್ಲವೂ ಏರುಪೇರಾಗಿಬಿಟ್ಟಿದೆ. ಮನೆಗಳೇ ಆಫೀಸ್ ಆಗಿವೆ.. ಮಕ್ಕಳಿಗೆ ಪಾಠಶಾಲೆಯಾಗಿದೆ. ನಾಲ್ಕು ಗೋಡೆಗಳ ಮಧ್ಯೆಯೇ ಮಕ್ಕಳು ಕಲಿಯಬೇಕಾದ ಅನಿವಾರ್ಯತೆ ಸೃಷ್ಟಿಸಿದೆ. ೨೦೧೯ರವರೆಗೂ ಆಟವಾಡುತ್ತಾ ಕಲಿಯುತ್ತಿದ್ದ ಮಕ್ಕಳು ಈಗ ಮನೆಗಳಲ್ಲೇ ಬಂಧಿಯಾಗಿದ್ದಾರೆ.

ಪ್ಲೀಸ್... 4G ನೆಟ್ ಕೊಡಿ ಎಂದು ವಿದ್ಯಾರ್ಥಿಗಳು ಕೇಳುತ್ತಿರುವುದು ಯಾಕೆ?

ಕಳೆದೊಂದು ವರ್ಷದಿಂದ ಮಕ್ಕಳಿಗೆ ಆನ್‌ಲೈನ್ ಶಿಕ್ಷಣವೊಂದೇ ಕಲಿಕೆಗೆ ಮಾರ್ಗವಾಗಿದೆ. ಎಲ್‌ಕೆಜಿ ಮಕ್ಕಳಿಂದ ಹಿಡಿದು ಪದವಿವರೆಗೂ ಆನ್‌ಲೈನ್ ಶಿಕ್ಷಣ ನೀಡಲಾಗುತ್ತಿದೆ. ಕೊರೊನಾ ಬಂದಾಗಿನಿಂದ ಯಾವುದೇ ಸಾಮಾಜಿಕ ಚಟುವಟಿಕೆಗಳಿಲ್ಲದೇ ಇಲ್ಲದೇ ಮಕ್ಕಳು ಸಾಕಷ್ಟು ಒತ್ತಡಕ್ಕೆ ಸಿಲುಕಿದ್ದಾರೆ. ಇದರ ಜೊತೆಗೆ ಅವರು ಶಿಕ್ಷಣದಿಂದ ಹಿಂದುಳಿಯಬಾರದು ಅಂತ ಸರ್ಕಾರಗಳು ಕೂಡ ಆನ್‌ಲೈನ್ ಶಿಕ್ಷಣಕ್ಕೆ ಅವಕಾಶ ಕೊಟ್ಟಿವೆ. ಅದಕ್ಕೊಂದಷ್ಟು ಇತಿಮಿತಿಗಳನ್ನು ಹೇರಿವೆ.ಆದ್ರೆ ಕೆಲ ಖಾಸಗಿ ಶಾಲೆಗಳು ಸರ್ಕಾರದ ಆದೇಶಕ್ಕೂ ಕ್ಯಾರೇ ಎನ್ನದೇ ಮನಸೋ ಇಚ್ಛೆ ವರ್ತಿಸುತ್ತಿವೆ. ಇದರ ಎಫೆಕ್ಟ್ ಆಗ್ತಿರೋದು ಮಾತ್ರ ಪುಟ್ಟ ಮಕ್ಕಳಿಗೆ.

ಆಫ್‌ಲೈನ್ ಕ್ಲಾಸ್‌ಗಳು ಇದ್ದಾಗಲೂ ಹೋಮ್ ವರ್ಕ್ ಹೊರೆ ಹೇರುತ್ತಿದ್ದ ಶಾಲೆಗಳು, ಇದೀಗ ಆನ್‌ಲೈನ್ ಕಲಿಕೆಯಲ್ಲೂ ಮತ್ತದೇ ವರಸೆ ತೋರಿಸ್ತಿವೆ. ಈ ಹೋಂ ವರ್ಕ್ ಎಂಬ ಪೆಡಂಭೂತ ಎಳೆಯ ಮಕ್ಕಳ ಮನಸ್ಸನ್ನು ಕಂಗೆಡಿಸುತ್ತಿದೆ. ಪುಟ್ಟ ಮಕ್ಕಳಿಗೆ ಸಾಕಷ್ಟು ತೊಂದರೆ ಒಡ್ಡಿ, ಜಿಗುಪ್ಸೆ ಮೂಡಿಸುತ್ತಿರುವುದು ಸುಳ್ಳಲ್ಲ. ತಮ್ಮ ಎಳೆಯ ಮನಸ್ಸಿಗೆ ಆಗುತ್ತಿರುವ ಸಮಸ್ಯೆ ಕುರಿತು 6 ವರ್ಷದ ಪುಟಾಣಿಯೊಬ್ಬಳು  ಪ್ರಧಾನಮಂತ್ರಿ ನರೇಂದ್ರ ಮೋದಿಗೆ ದೂರಿದ್ದಾಳೆ. ಸಣ್ಣ ಮಕ್ಕಳಿಗೆ ಯಾಕೆ ಇಷ್ಟು ಕಷ್ಟ ಎಂದು ಪ್ರಧಾನಿ ಅವರನ್ನೇ ಪ್ರಶ್ನಿಸಿದ್ದಾಳೆ.

 

 

ಕಣಿವೆ ರಾಜ್ಯ ಜಮ್ಮು ಕಾಶ್ಮೀರದ 6 ವರ್ಷದ ಮುದ್ದಾದ ಪೋರಿ, ಆನ್‌ಲೈನ್ ಕ್ಲಾಸ್‌ನ ಜಂಜಾಟವನ್ನ ವಿಡಿಯೋ ಮೂಲಕ ಬಿಚ್ಚಿಟ್ಟಿದ್ದಾಳೆ. ಈ ಮುದ್ದು ಪೋರಿಯ ದೂರಿನ ವಿಡಿಯೋವನ್ನು ಔರಂಗಜೇಬ್ ನಕ್ವಶ್ಬಂದಿ ಎಂಬ ಪತ್ರಕರ್ತರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಉನ್ನತ ಶಿಕ್ಷಣಕ್ಕಾಗಿ ಪಶ್ಚಿಮ ಬಂಗಾಳದಲ್ಲಿ ಕ್ರೆಡಿಟ್ ಕಾರ್ಡ್ ಸ್ಕೀಮ್!

ದೀರ್ಘ ಕಾಲದ ಆನ್ಲೈನ್ ಕ್ಲಾಸ್ ಮತ್ತು ಸಾಕಷ್ಟು ಹೋಂ ವರ್ಕ್ನಿಂದ ಕಷ್ಟ ಅನುಭವಿಸುತ್ತಿರುವುದಾಗಿ ಪುಟಾಣಿ ದೂರಿದ್ದಾಳೆ. ಬೆಳಗ್ಗೆ 10 ರಿಂದ 2 ಗಂಟೆವರೆಗೆ ಆನ್ಲೈನ್ ಕ್ಲಾಸ್ ನಡೆಯುತ್ತದೆ, ಮೊದಲು ಇಂಗ್ಲಿಷ್, ನಂತರ ಗಣಿತ, ಉರ್ದು ಬಳಿಕ ಇವಿಎಸ್ ಜೊತೆಗೆ ಕಂಪ್ಯೂಟರ್ ಕ್ಲಾಸ್ ನಡೆಸುತ್ತಾರೆ. ಜೊತೆಗೆ ಹೋಂ ವರ್ಕ್ ಹೊರೆ ಬೇರೆ. ಮಕ್ಕಳಿಗೆ ಎಷ್ಟೆಲ್ಲಾ ಕೆಲಸಗಳನ್ನ ಕೊಡುತ್ತಾರೆ.

ಸಣ್ಣ ಮಕ್ಕಳು ಯಾಕೆ ಇಷ್ಟೊಂದು ಕೆಲಸ ಮಾಡಬೇಕು ಮೋದಿ ಸಾಹೇಬ್ ಎಂದು ಬಾಲಕಿ ತೊದಲು ನುಡಿಗಳಲ್ಲಿ ಪ್ರಶ್ನೆ ಕೇಳಿದ್ದಾರೆ. 45 ಸೆಕೆಂಡ್ ಇರುವ ಈ ವಿಡಿಯೋ ಕ್ಲಿಪ್‌ನಲ್ಲಿ ಹಿಂದಿಯಲ್ಲಿ ತನ್ನ ಕಷ್ಟ ಹೇಳಿಕೊಂಡಿರುವ ಬಾಲಕಿ, 7 ಹಾಗೂ 8ನೇ ತರಗತಿಯವರಿಗೆ ನೀಡುವಷ್ಟು ಹೋಂ ವರ್ಕ್‌ನಮಗೇಕೆ ಕೊಡುತ್ತಿದ್ದಾರೆ ಅಂತ ಕ್ಯೂಟ್ ಕ್ಯೂಟ್ ಆಗಿ ಕಂಪ್ಲೆಂಟ್ ಮಾಡಿದ್ದಾಳೆ.

Modiji why so much work for students asks 6 year old kashmiri girl

ಜಸ್ಟ್ ೬ ವರ್ಷದ ಪುಟಾಣಿಯ ಮುಗ್ಧ ಪ್ರಶ್ನೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಸುರಿಮಳೆ ಹರಿದಿದೆ. ತೊದಲು ನುಡಿಯ ಈ ಮಗುವಿನ ಪ್ರಶ್ನೆ ಹಾಗೂ ಸಮಸ್ಯೆ, ಇತರೆ ಮಕ್ಕಳದ್ದೂ ಕೂಡ ಆಗಿದೆ. ಆನ್ಲೈನ್ ಶಿಕ್ಷಣ ಎಂಬುದು ಮಕ್ಕಳ ಮನಸಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಅನ್ನೋದಕ್ಕೆ ಈ ವಿಡಿಯೋ ಸ್ಪಷ್ಟ ನಿದರ್ಶನ. ಮಕ್ಕಳಿಗೆ ಕಲಿಕೆಗಿಂತ ಹೆಚ್ಚು ಆಟ, ಮೋಜು ಮಸ್ತಿ ಅವಶ್ಯಕತೆ ಇದೆ. ಈ ಮಗುವಿನ ಮನವಿಯನ್ನ ಆಲಿಸಿ, ಇಂಥ ಎಳೆಯ ಮನಸ್ಸುಗಳಿಗಾಗುತ್ತಿರೋ ಸಮಸ್ಯೆಯನ್ನ ಪ್ರಧಾನಿ ಮೋದಿ ಈಡೇರಿಸಬೇಕು ಅನ್ನೋದು ನೆಟ್ಟಿಗರ ಒತ್ತಾಯ.

ಶಿಕ್ಷಣ ಸಾಲ ಪಡೆಯುವ ಮುನ್ನ ಈ ಸಂಗತಿಗಳ ಬಗ್ಗೆ ತಿಳಿದಿರಲಿ..!

Latest Videos
Follow Us:
Download App:
  • android
  • ios