ರಾಜ್ಯಕ್ಕೆ ಮಾದರಿ ಲಾ ರಿಸರ್ಚ್ ಆ್ಯಂಡ್‌ ಸ್ಟಡಿ ಸೆಂಟರ್‌ ಹುಬ್ಬಳ್ಳಿ ವಕೀಲರ ಸಂಘ ರೂಪಿಸಿರುವ ಅಧ್ಯಯನ ಕೇಂದ್ರ ಲಕ್ಷಾಂತರ ಕಾನೂನು ಕೃತಿಗಳು ಲಭ್ಯ ಅಪರೂಪದ ಲಾ ಡಿಜಿಟಲ್‌ ಲೈಬ್ರರಿ ಸೌಲಭ್ಯವೂ ಇದೆ 106 ಲಾ ಕಾಲೇಜು ವಿದ್ಯಾರ್ಥಿಗಳು ಪ್ರಯೋಜನ ಪಡಿಯಬಹುದು

ವರದಿ: ಮಯೂರ ಹೆಗಡೆ

ಹುಬ್ಬಳ್ಳಿ (ಆ.5) : ರಾಜ್ಯದಲ್ಲಿ ಮಾದರಿ ಆಗುವಂತ ಲಾ ರಿಸಚ್‌ರ್‍ ಆ್ಯಂಡ್‌ ಸ್ಟಡಿ ಸೆಂಟರ್‌ನ್ನು ಹುಬ್ಬಳ್ಳಿ ವಕೀಲರ ಸಂಘ ರೂಪಿಸಿದ್ದು, ವಕೀಲರು, ವಿದ್ಯಾರ್ಥಿಗಳು ಸೇರಿ ಕಾನೂನು ಜ್ಞಾನದ ಹಸಿವುಳ್ಳ ಎಲ್ಲರಿಗೂ ಇದು ವಿದ್ಯಾಕೇಂದ್ರವಾಗಲಿದೆ. ಕಾನೂನು ಅರಿಯಬೇಕು, ರಿಸಚ್‌ರ್‍ ಮಾಡಬೇಕು ಎಂದುಕೊಳ್ಳುವರಿಗೆ ಇಂಥದೊಂದು ಪುಸ್ತಕ ಸಿಗುತ್ತಿಲ್ಲ ಎಂಬ ಬೇಸರ ಆಗಬಾರದು ಎಂಬ ಆಶಯದಲ್ಲಿ ಈ ಸೆಂಟರ್‌ ತಲೆ ಎತ್ತಿದೆ. 150 ವರ್ಷಗಳ ಹಿಂದಿನ ಪುಸ್ತಕದಿಂದ ಹಿಡಿದು ತಿಂಗಳು ಪ್ರಕಟವಾಗುವ ಜರ್ನಲ್‌ಗಳು ಕೂಡ ಇಲ್ಲಿ ಲಭ್ಯ. ಹುಬ್ಬಳ್ಳಿ ನ್ಯಾಯಾಲಯಗಳ ಸಂಕಿರ್ಣದಲ್ಲಿರುವ ವಕೀಲರ ಸಂಘದ 2ನೇ ಮಹಡಿಯಲ್ಲಿ ಈ ಸೆಂಟರ್‌ ಆರಂಭವಾಗಿದೆ. ಆ. 6ರಂದು ವಿದ್ಯುಕ್ತ ಚಾಲನೆ ಸಿಗಲಿದೆ.

ದೇಣಿಗೆ: ರಿಸಚ್‌ರ್‍ ಸೆಂಟರ್‌ಗೆ ನ್ಯಾಯಾಧೀಶರು, ವಕೀಲರಿಂದ ಪುಸ್ತಕವನ್ನು ದೇಣಿಗೆ ರೂಪದಲ್ಲಿ ಪಡೆದಿರುವುದು ವಿಶೇಷ. ಕಳೆದ ಫೆಬ್ರವರಿ ತಿಂಗಳಿಂದಲೆ ಇದಕ್ಕಾಗಿ ವಕೀಲರ ಸಂಘ ಅಭಿಯಾನ ನಡೆಸಿತ್ತು. ಹಣ ಬೇಡ, ಒಬ್ಬೊಬ್ಬರಿಂದ ಒಂದು ಪುಸ್ತಕ ನಿರೀಕ್ಷಿಸುತ್ತೇವೆ ಎಂದು ಘೋಷಣೆ ಹೊರಡಿಸಲಾಗಿತ್ತು. ಈವರೆಗೆ ಸುಪ್ರೀಂ ಕೋರ್ಚ್‌, ಹೈಕೋರ್ಚ್‌ ವಕೀಲರು, ನ್ಯಾಯಾಧಿಶರು, ನಿವೃತ್ತರು ಸೇರಿ 430ಕ್ಕೂ ಹೆಚ್ಚಿನವರು ಪುಸ್ತಕ ದಾನ ಮಾಡಿದ್ದಾರೆ. ಬರೋಬ್ಬರಿ .25ಲಕ್ಷ ಮೌಲ್ಯಕ್ಕೂ ಅಧಿಕ ಕಾನೂನು ಗ್ರಂಥಗಳು ಸಂಗ್ರಹವಾಗಿವೆ. .100 ನ ಒಂದು ಪುಸ್ತಕದಿಂದ ಹಿಡಿದು .3.70ಲಕ್ಷ ಮೌಲ್ಯದ 34 ಪುಸ್ತಕಗಳ ಸೆಟ್‌ನ್ನು ದೇಣಿಗೆ ನೀಡಿದವರಿದ್ದಾರೆ. ಪರಿಣಾಮ ಲಕ್ಷಾಂತರ ಕಾನೂನು ಕೃತಿಗಳು ಇಲ್ಲಿ ಸಂಗ್ರವಾಗಿವೆ.

ಹುಬ್ಬಳ್ಳಿ: ಬೆಂಗೇರಿ ಖಾದಿ ಧ್ವಜ ಕೇಂದ್ರಕ್ಕೆ ದುಪ್ಪಟ್ಟು ಆದಾಯ..!

‘ಸಿವಿಲ್‌, ಕ್ರಿಮಿನಲ್‌, ಗ್ರಾಹಕ, ಬ್ಯಾಂಕ್‌, ಕಂಪನಿ ಕಾನೂನು ಸೇರಿ ಹತ್ತಾರು ವಿಧದ ಪುಸ್ತಕಗಳು ಸಂಗ್ರಹವಾಗಿವೆ. ಸಿ.ಸಿ.ಯಲ್ಲಟ್ಟಿಅವರು ನೀಡಿರುವ ಧಾರ್ಮಿಕ ಕಾನೂನುಗಳ ಕೃತಿಗಳು ರಾಜ್ಯದಲ್ಲೇ ತೀರಾ ಅಪರೂಪದ ಕೃತಿ ಎನಿಸಿದೆ. ರಾಜ್ಯದಲ್ಲಿ ಯಾವ ಬಾರ್‌ ಕೂಡ ತರಿಸದಷ್ಟು21 ಜರ್ನಲ್‌ಗಳನ್ನು ಹುಬ್ಬಳ್ಳಿ ವಕೀಲರ ಸಂಘ ತರಿಸಿ ಸಂಗ್ರಹಿಸಿದೆ. ಎಐಆರ್‌, ಎಸಿಜೆ, ಟಿಎಸಿ, ಸಿಆರ್‌ಆರ್‌, ಕೆಎಲ್‌ಆರ್‌, ಎಸ್‌ಎಆರ್‌ ಜರ್ನಲ್‌ಗಳು ಇದರಲ್ಲಿ ಸೇರಿವೆ. ಹುಬ್ಬಳ್ಳಿ ಹಳೇ ನ್ಯಾಯಾಲಯ ಕಟ್ಟಡದಲ್ಲಿಯೂ ಕೂಡ ಆಗಿನ ಲೈಬ್ರರಿ ಇದ್ದು, ಬ್ರಿಟಿಷ್‌ ಕಾಲದ ಕಾನೂನು ಪುಸ್ತಕಗಳಿವೆ’ ಎಂದು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಅಣವೇಕರ ತಿಳಿಸಿದರು.

ಡಿಜಿಟಲ್‌ ಜ್ಞಾನಕೇಂದ್ರ:

ಪುಸ್ತಕ ಮಾತ್ರವಲ್ಲ, ಡಿಜಿಟಲ್‌ ಲೈಬ್ರರಿ ಕೂಡ ಇಲ್ಲಿದೆ. ಮಾಜಿ ಮುಖ್ಯಮಂತ್ರಿ, ಸಂಘದ ಸದಸ್ಯರಾಗಿರುವ ಜಗದೀಶ ಶೆಟ್ಟರ್‌ ಡಿಜಿಟಲ್‌ ಲೈಬ್ರರಿಗೆ ತಮ್ಮ ಅನುದಾನ ನೀಡಿದ್ದಾರೆ. 10ಕಂಪ್ಯೂಟರ್‌, ಪ್ರಿಂಟರ್‌, ಪ್ರೊಜೆಕ್ಟರ್‌ ಸೇರಿ ಡಿಜಿಟಲ್‌ ಗ್ರಂಥಾಲಯಕ್ಕೆ ಅಗತ್ಯವಿದ್ದ ಇತರ ಪರಿಕರ ನೀಡಿದ್ದಾರೆ. ಮನುಸೂತ್ರ, ಎಐಆರ್‌, ಕೆಎಲ್‌ಜೆ, ಎಸ್‌ಸಿಸಿ, ಲಾ ಸ್ಯೂಟ್‌ ಪೋರ್ಟಲ್‌ಗಳಿಗೆ ವಾರ್ಷಿಕ ಚಂದಾದಾರಿಕೆಯನ್ನು ಸಂಘ ಪಡೆದಿದೆ. .15ಲಕ್ಷ ಅನುದಾನದಲ್ಲಿ ಈ ಕೇಂದ್ರ ಸ್ಥಾಪನೆಯಾಗಿದೆ.

ಹೇಗೆ ಅನುಕೂಲ:

ಕೇವಲ ಹುಬ್ಬಳ್ಳಿ ವಕೀಲರ ಸಂಘಕ್ಕೆ ಮಾತ್ರ ಲಾ ರಿಸಚ್‌ರ್‍ ಆ್ಯಂಡ್‌ ಸ್ಟಡಿ ಸೆಂಟರ್‌ ಸೀಮಿತವಾಗಿಲ್ಲ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಸೇರಿ ರಾಜ್ಯದ 106 ಕಾನೂನು ಕಾಲೇಜು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು. ಸಂಘ ಎಲ್ಲ ಕಾಲೇಜುಗಳಿಗೆ ಈ ಬಗ್ಗೆ ಪತ್ರ ಬರೆದಿದ್ದು, ಕೇಂದ್ರಕ್ಕೆ ಆಗಮಿಸಿ ರಿಸಚ್‌ರ್‍ ಮಾಡಲು ಅವಕಾಶ ನೀಡಿದೆ. ಅದರ ಜತೆಗೆ ಕೊಪ್ಪಳ, ಕಾರವಾರ, ಬಳ್ಳಾರಿ, ಗದಗ, ಹಾವೇರಿ ಸುತ್ತಮುತ್ತಲ ಎಲ್ಲ ಜಿಲ್ಲೆಗಳ ವಕೀಲರಿಗೂ ಇಲ್ಲಿನ ಪುಸ್ತಕಗಳ ಅನುಕೂಲತೆ ಪಡೆಯಲು ತಿಳಿಸಲಾಗಿದೆ. ಅಲ್ಲದೆ, ವೈದ್ಯರು, ಪತ್ರಕರ್ತರು,ಲೆಕ್ಕ ಪರಿಶೋಧಕರು, ಅಭಿಯಂತರರು ಸಂಘದ ಮುಖ್ಯಸ್ಥರ ಗಮನಕ್ಕೆ ತಂದು ಇಲ್ಲಿ ತಮಗೆ ಸಂಬಂಧಿಸಿದ ಕಾನೂನು ಅಧ್ಯಯನ ಮಾಡಬಹುದು.

ನಿಷೇಧವಿದ್ದರೂ ನಿಲ್ಲದ ಪ್ಲಾಸ್ಟಿಕ್‌ ಮಾರಾಟ, ಬಳಕೆ

ದಾಖಲೆ ಕೇಂದ್ರ:

ಪುಸ್ತಕ, ಡಿಜಿಟಲ್‌ ಮಾತ್ರವಲ್ಲ, ಹುಬ್ಬಳ್ಳಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಸಮಗ್ರ ಪ್ರಕರಣಗಳ ದಾಖಲಾತಿ ಕೇಂದ್ರವನ್ನು ಇಲ್ಲಿ ತೆರೆಯಲಾಗುತ್ತಿದೆ. ಎಫ್‌ಐಆರ್‌, ವಿವಿಧ ಬಗೆಯ ಚಾಜ್‌ರ್‍ಶೀಟ್‌, ಮೇಲ್ಮನವಿ, ಅದರ ವಿಚಾರಣೆ, ಪ್ರಕಟವಾದ ತೀರ್ಪು ಸೇರಿ ಇವುಗಳದ್ದೆ ಒಂದು ಪ್ರತ್ಯೇಕ ದಾಖಲೆ ಕೇಂದ್ರ ಸಿದ್ಧವಾಗುತ್ತಿದೆ. ಈಗಾಗಲೆ ಇದರ ಪ್ರಕ್ರಿಯೆ ಆರಂಭವಾಗಿದೆ. ಜತೆಗೆ ಕಿರಿಯ ವಕೀಲರಿಗೆ ಉಚಿತವಾಗಿ ಪರೀಕ್ಷಾ ತರಬೇತಿ ನೀಡಿ ನ್ಯಾಯಾಧೀಶರಾಗಲು ಅಣಿಗೊಳಿಸಲಾಗುತ್ತಿದೆ.

ಶತಮಾನ ಪೂರೈಸಿರುವ ವಕೀಲರ ಸಂಘ ನಮ್ಮದು. ರಾಜ್ಯಕ್ಕೆ ಮಾದರಿಯಾಗಬೇಕು ಎಂಬ ಆಶಯದಿಂದ ರೂಪಿಸಲಾದ ಲಾ ರಿಸಚ್‌ರ್‍ ಆ್ಯಂಡ್‌ ಸ್ಟಡಿ ಸೆಂಟರ್‌ ಇದು. ಲಕ್ಷಾಂತರ ಪುಸ್ತಕಗಳು ಸಂಗ್ರಹವಾಗಿವೆ.ಆ. 6ರಂದು ಉದ್ಘಾಟನೆಯಾಗಲಿದೆ.

ಸಿ.ಆರ್‌.ಪಾಟೀಲ್‌, ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷರು

ದೇಣಿಗೆ ಮೂಲಕ ಪುಸ್ತಕ ಪಡೆಯಲಾಗಿರುವುದು ವಿಶೇಷ ವಕೀಲರು, ವಿದ್ಯಾರ್ಥಿಗಳು ಸೇರಿ ಕಾನೂನು ತಿಳಿಯಬೇಕು ಎಂದು ಬರುವವರಿಗೆ ಅಧ್ಯಯನಕ್ಕೆ ಅನುವು ಮಾಡಿಕೊಡುತ್ತೇವೆ.

ಅಶೋಕ ಅಣವೇಕರ, ಹುಬ್ಬಳ್ಳಿ ವಕೀಲರ ಸಂಘ