ಹಿಂದೂಗಳನ್ನು ಒಡೆಯುವ ಸಲುವಾಗಿ ವಿಪಕ್ಷಗಳಿಂದ ಪಠ್ಯ ವಿವಾದ: ಸಚಿವ ನಾಗೇಶ್‌

ಹಿಂದೂ ಸಮಾಜವನ್ನು ಒಡೆಯಲು ಪ್ರತಿಪಕ್ಷದವರು ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ಕೈಗೆತ್ತಿಕೊಂಡಿದ್ದಾರೆ ಎಂದು ಸಚಿವ ಬಿ.ಸಿ.ನಾಗೇಶ್‌ ಗಂಭೀರ ಆರೋಪ ಮಾಡಿದ್ದಾರೆ. 

minister bc nagesh slams on siddaramaiah and congress in hassan gvd

ಹಾಸನ/ಅರಕಲಗೂಡು (ಜೂ.12): ಹಿಂದೂ ಸಮಾಜವನ್ನು ಒಡೆಯಲು ಪ್ರತಿಪಕ್ಷದವರು ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ಕೈಗೆತ್ತಿಕೊಂಡಿದ್ದಾರೆ ಎಂದು ಸಚಿವ ಬಿ.ಸಿ.ನಾಗೇಶ್‌ ಗಂಭೀರ ಆರೋಪ ಮಾಡಿದ್ದಾರೆ. ಹಾಸನ ಮತ್ತು ಅರಕಲಗೂಡುಗಳಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಮುಗಿದಿದೆ. ಸಣ್ಣ ಪುಟ್ಟ ದೋಷ ಸರಿಪಡಿಸಲಾಗುವುದು. ಬಸವಣ್ಣನವರ ಪಾಠ ಬಿಟ್ಟಿದ್ದರೆ ಅದನ್ನು ಸೇರ್ಪಡೆ ಮಾಡಿಸಲು ಪ್ರಯತ್ನ ಮಾಡಲಾಗುವುದು. 

ಪಠ್ಯಪುಸ್ತಕ ಪರಿಷ್ಕರಣೆಯಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ನಷ್ಟವುಂಟಾಗುವುದಿಲ್ಲ. ಆದರೆ ಪ್ರತಿಪಕ್ಷದವರು ಹಿಂದೂ ಸಮಾಜ ಒಡೆಯಲು ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ಕೈಗೆತ್ತಿಕೊಂಡರು. ಹಿಂದಿನಿಂದಲೂ ಹಿಂದೂ ಸಮಾಜ ಒಡೆದು ಒಂದು ಸಮುದಾಯದ ಓಲೈಕೆ ಮಾಡುವ ಈ ಕೆಲಸದಲ್ಲಿ ನಿರತರಾಗಿದ್ದಾರೆ. ಅದರಲ್ಲಿ ಎಡಪಂಥೀಯರು ಇದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಸಚಿವ ನಾಗೇಶ್‌ ರಾಜೀನಾಮೆಗೆ ಶಿಕ್ಷಣ ತಜ್ಞರ ಆಗ್ರಹ

ಬೊಕ್ಕಸ ಲೂಟಿಯಲ್ಲಿ ಎತ್ತಿದ ‘ಕೈ’: ಇನ್ನು ಸರ್ಕಾರದ ಬೊಕ್ಕಸವನ್ನು ಲೂಟಿ ಹೊಡೆಯುವುದರಲ್ಲಿ ನಿಸ್ಸೀಮರಾದ ಕಾಂಗ್ರೆಸ್‌ನವರು ಬಿಜೆಪಿ ಸರ್ಕಾರದ ಆಡಳಿತದ ವಿರುದ್ಧ ಹುರುಳಿಲ್ಲದ ಆರೋಪ ಮಾಡುತ್ತಿದ್ದಾರೆ. ಪಠ್ಯಪರಿಷ್ಕರಣೆ ಕಾರ್ಯ ಪ್ರಾಮಾಣಿಕವಾಗಿ ನಡೆದಿದೆ. ಮಕ್ಕಳಲ್ಲಿ ದೇಶಾಭಿಮಾನ, ಕನ್ನಡ ಪ್ರೇಮ ಬಿತ್ತಿ ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಪಠ್ಯಗಳನ್ನು ಪರಿಷ್ಕರಿಸಲಾಗಿದೆ. ಕುವೆಂಪು, ಮೈಸೂರು ಮಹಾರಾಜರ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ಟಿಪ್ಪು ಪಠ್ಯ ತೆಗೆದದ್ದಕ್ಕೆ ಅಪಪ್ರಚಾರ: ಇನ್ನು ಬರಗೂರು ರಾಮಚಂದ್ರಪ್ಪ ಪಠ್ಯಪುಸ್ತಕ ಪರಿಷ್ಕರಣೆ ಸಮಯದಲ್ಲಿ ಉನ್ನೀಕೃಷ್ಣನ್‌, ಮೈಸೂರು ಮಹರಾಜರು, ಕೆಂಪೇಗೌಡರು, ಕುವೆಂಪು ಅಧ್ಯಾಯ ತೆಗೆದಿದ್ದಾರೆ. ಇದಕ್ಕೆ ಕಾಂಗ್ರೆಸ್‌ನಲ್ಲಿ ಉತ್ತರ ಇಲ್ಲ. ಕಾಂಗ್ರೆಸ್‌ಗೆ ಟಿಪ್ಪು ಸುಲ್ತಾನ್‌ ಪಠ್ಯ ತೆಗೆದಿದ್ದು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಈ ರೀತಿ ಅಪಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಅವ​ಧಿಯಲ್ಲಿ ಅಲ್ಹಾ, ಜೀಸಸ್‌ ಬಗ್ಗೆ ಮಾತ್ರ ಮಕ್ಕಳಿಗೆ ಹೇಳಿಕೊಟ್ಟರು ಎಂದು ಆರೋಪಿಸಿದರು.

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ತಪ್ಪಾಗಿದ್ರೆ ತಿದ್ದಿಕೊಳ್ಳುತ್ತೇವೆ: ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ತಪ್ಪಾಗಿದ್ರೆ ತಿದ್ದಿಕೊಳ್ಳುತ್ತೇವೆ. ಪರಿಷ್ಕರಣೆ ಮಾಡುವಾಗ ದೊಡ್ಡ ತಪ್ಪು ಮಾಡಬಾರದು. ಇಂತದ್ದೊಂದು ಜವಾಬ್ದಾರಿ ಸಿಕ್ಕಾಗ ಜಾಗರೂಕತೆ ಇರಬೇಕು. ಆದ್ರೆ ತಪ್ಪು ಆಗಿದ್ದನ್ನ ನಾವು ಗಮನಿಸಿ ಅದನ್ನ ಮರು ಪರಿಷ್ಕರಣೆಗೆ ಮುಂದಾಗಿದ್ದೇವೆ ಅಂತ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.  

ಶಿಕ್ಷಣ ಸಚಿವರ ಮನೆಗೆ ನುಗ್ಗಿದವರು ವಿದ್ಯಾರ್ಥಿಗಳೇ ಅಲ್ಲ: Araga Jnanendra

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವಣ್ಣನ ಪಠ್ಯದಲ್ಲಿ ಹಲವು ಹೊಸ ವಿಚಾರದಲ್ಲಿ ಲೋಪದೋಷಗಳನ್ನ ಯಾರೇ ಕಂಡು ಹಿಡಿದರೂ ಅದನ್ನ ಸರಿ ಮಾಡುತ್ತೇವೆ. ಯಾವುದೇ ತಪ್ಪನ್ನ ಮುಚ್ಚಿಡುವುದು ನಾವು ಮಾಡುತ್ತಿಲ್ಲ. ವಾದ ವಿವಾದ ಮಕ್ಕಳ ಮೇಲೆ ಪರಿಣಾಮ ಬಿರಬಾರದು. ಹೀಗಾಗಿ ಅದನ್ನ ಸರಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ 84% ರಷ್ಟು ಬಿಇಓ ಕಚೇರಿ ಸೇರಿದೆ, ಇನ್ನೊಂದು ತಿಂಗಳಲ್ಲಿ ಎಲ್ಲ ಪುಸ್ತಕ ಕೊಡುವ ಹಾಗಾಗುತ್ತೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Latest Videos
Follow Us:
Download App:
  • android
  • ios