Asianet Suvarna News Asianet Suvarna News

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ತಪ್ಪಾಗಿದ್ರೆ ತಿದ್ದಿಕೊಳ್ಳುತ್ತೇವೆ: ಸಚಿವ ನಾಗೇಶ್

*  ಸಿದ್ದರಾಮಯ್ಯ ಓಟ್‌ ಬ್ಯಾಂಕ್ ಗೋಸ್ಕರ ಹೀಗೆ ಮಾಡುತ್ತಾರೆ
*  ಹಿಜಾಬ್  ಮತ್ತು ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವುದನ್ನ ಅವರು ಬಿಡಬೇಕು
*  ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ನಾಡಗೀತೆಗೆ ಅವಮಾನ ಆಗಿದೆ 

Minister BC Nagesh React on Textbook Revision in Karnataka grg
Author
Bengaluru, First Published Jun 8, 2022, 2:18 PM IST

ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ(ಜೂ.08): ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ತಪ್ಪಾಗಿದ್ರೆ ತಿದ್ದಿಕೊಳ್ಳುತ್ತೇವೆ. ಪರಿಷ್ಕರಣೆ ಮಾಡುವಾಗ ದೊಡ್ಡ ತಪ್ಪು ಮಾಡಬಾರದು. ಇಂತದ್ದೊಂದು ಜವಾಬ್ದಾರಿ ಸಿಕ್ಕಾಗ ಜಾಗರೂಕತೆ ಇರಬೇಕು. ಆದ್ರೆ ತಪ್ಪು ಆಗಿದ್ದನ್ನ ನಾವು ಗಮನಿಸಿ ಅದನ್ನ ಮರು ಪರಿಷ್ಕರಣೆಗೆ ಮುಂದಾಗಿದ್ದೇವೆ ಅಂತ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.  

ಇಂದು(ಬುಧವಾರ) ನಗರದಲ್ಲಿಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವಣ್ಣನ ಪಠ್ಯದಲ್ಲಿ ಹಲವು ಹೊಸ ವಿಚಾರದಲ್ಲಿ ಲೋಪದೋಷಗಳನ್ನ ಯಾರೇ ಕಂಡು ಹಿಡಿದರೂ ಅದನ್ನ ಸರಿ ಮಾಡುತ್ತೇವೆ. ಯಾವುದೇ ತಪ್ಪನ್ನ ಮುಚ್ಚಿಡುವುದು ನಾವು ಮಾಡುತ್ತಿಲ್ಲ. ವಾದ ವಿವಾದ ಮಕ್ಕಳ ಮೇಲೆ ಪರಿಣಾಮ ಬಿರಬಾರದು. ಹೀಗಾಗಿ ಅದನ್ನ ಸರಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ 84% ರಷ್ಟು ಬಿಇಓ ಕಚೇರಿ ಸೇರಿದೆ, ಇನ್ನೊಂದು ತಿಂಗಳಲ್ಲಿ ಎಲ್ಲ ಪುಸ್ತಕ ಕೊಡುವ ಹಾಗಾಗುತ್ತೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಪಠ್ಯ ಸಮಿತಿ ಸೇರಿದಾಗ ಉಬ್ಬಿಲ್ಲ, ಈಗ ಕುಗ್ಗಿಯೂ ಇಲ್ಲ: ಚಕ್ರತೀರ್ಥ

ಈ ಬಾರಿ ಅತಿಥಿ ಶಿಕ್ಷಕರನ್ನ ಶಿಕ್ಷಕರನ್ನಾಗಿ ತೆಗೆದುಕೊಳ್ಳುತ್ತಿದ್ದೇವೆ. ಬಿಜೆಪಿ ಸರ್ಕಾರದಲ್ಲಿ 27 ಸಾವಿರ ಅತಿಥಿ ಶಿಕ್ಷಕರನ್ನ ತೆಗೆದುಕೊಂಡಿದ್ದೇವ. ಮುಂಬರೋ ದಿನಗಲ್ಲಿ ಸೈಕಲ್ ವಿತರಣೆಯನ್ನ ಸಹ ಮಾಡುವ ವಿಚಾರ ಇದೆ ಸಾಹಿತಿಗಳನ್ನ ಯಾವುದೇ ರೀತಿಯಲ್ಲಿ ಕಡೆಗಣಿಸಿಲ್ಲ. ಮಹಾರಾಜರನ್ನ ತೆಗೆದು ಟಿಪ್ಪು ಸುಲ್ತಾನ್‌ನ್ನ ತರಲಾಗಿತ್ತು ಹಿಂದೂ ಸಂಸ್ಕೃತಿ ಕಿತ್ತುಹಾಕಿ ನೆಹರೂ ಪಾಠ ತರಲಾಗಿತ್ತು. ಇಸ್ಲಾಂ ಮತ್ತು ಕ್ರೈಸ್ತರನ್ನ ಮಾತ್ರ ಪುಸ್ತಕದಲ್ಲಿ ತರಲಾಗಿತ್ತುವ. ಇಂತಹ 100 ಉದಾಹರಣೆಗಳು ಇವೆ ಎಂದು ಹೇಳಿದರು.

ದೇವನೂರು ಮಹಾದೇವ ನಮಗೆ ಹೇಳಬಹುದಿತ್ತು ಆದ್ರೆ ಪುಸ್ತಕ ಬಿಡುಗಡೆಯಾದ ಮೇಲೆ ಹೇಳಿದ್ದು ನೋವಾಗಿದೆ. ಕುವೆಂಪು ಅವರಿಗೆ ಅವಮಾನ ಆದ್ರೆ ಅದು ಬರಗೂರು ರಾಮಚಂದ್ರಪ್ಪರಿಗೆ ಸೇರುತ್ತೆ, ಅವರೇ ಅದನ್ನ ಹಾಕಿದ್ರು ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ನಾಡಗೀತೆಗೆ ಅವಮಾನ ಆಗಿದೆ ಪಠ್ಯಪುಸ್ತಕವನ್ನ ಒಬ್ಬರೇ ಮಾಡುವುದಿಲ್ಲ. ತಪ್ಪು ಆಗಿದೆ ಈಗ ಅದನ್ನ ಪರಿಷ್ಕರಣೆ ಮಾಡುತ್ತಿದ್ದೇವೆ. ಸ್ವಾತಂತ್ರ್ಯ ಬಂದಾಗಿನಿಂದ ಅವರಿಗೆ ಚಡ್ಡಿ ಹೋಗಿ ಪ್ಯಾಂಟ್ ಬಂದಿರೋದು ಅವರಿಗೆ ಗೊತ್ತಿಲ್ಲ ಅನಿಸುತ್ತೆ ಅವರು ವೋಟ್ ಬ್ಯಾಂಕ್ ಪೊಲಿಟಿಕ್ಸ್ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದ ಅವರು ಹೀಗೆ ಮಾಡುತ್ತಾ ಬಂದಿದ್ದಾರೆ ಏನು ಸಿಗದೆ ಹೋದಾಗ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುತ್ತಾರೆ ಅಂತ ಕಾಂಗ್ರೆಸ್‌ ವಿರುದ್ಧ ನಾಗೇಶ್‌ ಹರಿಹಾಯ್ದಿದ್ದಾರೆ. 

ಸಿದ್ದರಾಮಯ್ಯ ಓಟ್‌ ಬ್ಯಾಂಕ್ ಗೋಸ್ಕರ ಹೀಗೆ ಮಾಡುತ್ತಾರೆ. ಬೇಕಾದಷ್ಟು ವಿಷಯಗಳನ್ನ ಬಿಟ್ಟು ಆರ್‌ಎಸ್‌ಎಸ್‌ ಬಗ್ಗೆ ಯಾಕೆ ಮಾತನಾಡಬೇಕು ಎಷ್ಟೊಂದು ಸಮಸ್ಯೆಗಳನ್ನ ಜನರು ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರಕ್ಕೆ ಅವರು ಸಲಹೆ ಕೊಡಬೇಕು ಅದನ್ನ ಬಿಟ್ಟು ಹಿಜಾಬ್ ಮತ್ತು ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವುದನ್ನ ಅವರು ಬಿಡಬೇಕು ಅಂತ ತಿಳಿಸಿದ್ದಾರೆ.

Follow Us:
Download App:
  • android
  • ios