ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್ ಕೊಟ್ಟ ಶಿಕ್ಷಣ ಸಚಿವ ಬಿಸಿ ನಾಗೇಶ್

* ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್ ಕೊಟ್ಟ ಶಿಕ್ಷಣ ಸಚಿವ ಬಿಸಿ ನಾಗೇಶ್
* ಪಠ್ಯ ಪುಸ್ತಕ ಸಮಸ್ಯೆ ಪರಿಹಾರಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ
* ಸೆಪ್ಟೆಂಬರ್ 15ರೊಳಗೆ ಎಲ್ಲ ಶಾಲೆಗಳಿಗೆ ಪಠ್ಯ ಪುಸ್ತಕ ಪೂರೈಸುವಂತೆ ಸೂಚನೆ 

Minister BC Nagesh Gives instructions supply textbook to All Schools Before Sept 15th rbj

ಬೆಂಗಳೂರು, (ಆ.25): ರಾಜ್ಯದಲ್ಲಿ ಕೊರೋನಾ ಆತಂಕದ ಮಧ್ಯೆಯೂ 9 ಮತ್ತು 10 ನೇ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಕೊರೋನಾ ಸುರಕ್ಷತೆ ಮಾರ್ಗಸೂಚಿ ಅನ್ವಯ ಶಾಲೆಗಳನ್ನು ಆರಂಭಿಸಿದೆ, ಆದ್ರೆ, ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಸಮಸ್ಯೆ ಎದುರಾಗಿದೆ.

ಪಠ್ಯ ಪುಸ್ತಕ ಸಮಸ್ಯೆ ಪರಿಹಾರಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಮುಂದಾಗಿದ್ದು,  ಸೆಪ್ಟೆಂಬರ್ 15ರೊಳಗೆ ಎಲ್ಲ ಶಾಲೆಗಳಿಗೆ ಪಠ್ಯ ಪುಸ್ತಕ ಪೂರೈಸುವಂತೆ ಸೂಚನೆ ಕೊಟ್ಟಿದ್ದಾರೆ.

ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಈ ವರ್ಷ ದಾಖಲಾಗುವ ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್

ಈಗಾಗಲೇ ರಾಜ್ಯದ ಶೇ.50ರಷ್ಟು ಶಾಲೆಗಳಿಗೆ ಪಠ್ಯ ಪುಸ್ತಕ ಪೂರೈಕೆ ಮಾಡಲಾಗಿದೆ. ಇಲ್ಲಿ ತನಕ ಶೇ.70 ರಷ್ಯ ಪಠ್ಯ ಪುಸ್ತಕಗಳು ಮುದ್ರಣ ಮಾಡಲಾಗಿದೆ. ಮುಂದಿನ ಒಂದು ವಾರದೊಳಗೆ ಪಠ್ಯ ಪುಸ್ತಕ ಎಲ್ಲಾ ಶಾಲೆಗಳಲ್ಲಿ ಸಿಗಲಿದೆ ಎಂದು ಬಿಸಿ ನಾಗೇಶ್ ವಿಶ್ವಾಸ ವ್ಯಕ್ತಪಡಿಸಿದರು.

ತರಗತಿಗಳನ್ನ ಪ್ರಾರಂಭ ಮಾಡುವುದಕ್ಕೂ ಮೊದಲು ಪಠ್ಯ ಪುಸ್ತಕಗಳು ವ್ಯವಸ್ಥೆ ಮಾಡಬೇಕಿತ್ತು. ಆದ್ರೆ, 9 ಮತ್ತು 10 ನೇ ತರಗತಿಗಳ ಆರಂಭವಾಗಿದ್ರೂ ಸಹ ಪಠ್ಯ ಪುಸ್ತಕಗ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios