Guest Lecturers ಮತ್ತೆ ಸಿಡಿದೆದ್ದ ಅತಿಥಿ ಉಪನ್ಯಾಸಕರು, ಅಶ್ವತ್ಥ್ ನಾರಾಯಣ ಗರಂ

* ಮತ್ತೆ ಶುರುವಾಯ್ತು ಅತಿಥಿ ಉಪನ್ಯಾಸಕರು, ಸರ್ಕಾರದ ನಡವಿನ ಯುದ್ಧ
* ಸರ್ಕಾರದ ಕೆಲ ನಿಯಮಗಳಿಂದ ಆಕ್ರೋಶಗೊಂಡ ಅತಿಥಿ ಉಪನ್ಯಾಸಕರು
*ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ್ ನಾರಾಯಣ ಗರಂ 

Minister Ashwath Narayan Hits out at Guest Lecturers Over Salary rbj

ಬೆಂಗಳೂರು, (ಜ.16): ಮಾನವೀಯ ನೆಲೆ, ಜೀವನ ನಿರ್ವಹಣೆಗೆ ಅನುಕೂಲವಾಗಲೆಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ  (Guest Lecturers)ಸಂಬಳ ಮೂರು ಪಟ್ಟು ಹೆಚ್ಚಿಸಿದ್ದು (Salary Hike), ಯಾವುದೋ ರಾಜಕೀಯ ಕಾರಣಕ್ಕೆ ಕೆಲ ಅತಿಥಿ ಉಪನ್ಯಾಕರ ಸಂಘಟನೆಗಳು ಪಟ್ಟು ಹಿಡಿದಿವೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ (Dr CN Ashwath Narayan) ಕಿಡಿಕಾರಿದರು.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಇಂದು (ಭಾನುವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‌ಯುಜಿಸಿ ನಿಯಮಾವಳಿ ಪ್ರಕಾರ ನೇಮಕವಾದವರಿಗೆ ಮಾತ್ರ ಸೇವಾ ಭದ್ರತೆ ಅನ್ವಯವಾಗುತ್ತದೆ. ಉಳಿದವರಿಗೆ ಸೇವಾ‌ಭದ್ರತೆಯ ಪ್ರಶ್ನೆಯೇ ಉದ್ಬವಿಸದು ಎಂದು ಸ್ಪಷ್ಟಪಡಿಸಿದರು.

Guest Lecturer ಸಂಕ್ರಾಂತಿ ಕೊಡುಗೆ ಶುದ್ಧ ಸುಳ್ಳು, ಸರ್ಕಾರದ ತೀರ್ಮಾನಕ್ಕೆ ಅತಿಥಿ ಉಪನ್ಯಾಸಕರ ಆಕ್ರೋಶ

ಸರ್ಕಾರದ ಈಗಿನ ನಿರ್ಧಾರದಲ್ಲಿ ಬದಲಾವಣೆಯಿಲ್ಲ. ಇಷ್ಟ ಇರುವವರು ಸೇರಿಕೊಳ್ಳಬಹುದು. ಯುಜಿಸಿ ಮಾನದಂಡದ ಪ್ರಕಾರ ಹಾಲಿ 13500 ಅತಿಥಿ ಉಪನ್ಯಾಸಕರಲ್ಲಿ 4,500 ಉಪನ್ಯಾಸಕರು ಮಾತ್ರ ಅರ್ಹರಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯ, ಬೋಧನಾ ಗುಣಮಟ್ಟ ಕಾಯ್ದುಕೊಳ್ಳುವ ದೃಷ್ಟಿಯಿಂದ ಯುಜಿಸಿ ನಿಯಮಾವಳಿ ಪಾಲಿಸಲೇಕಾಗಿದೆ‌ ಎಂದರು.

ಯುಜಿಸಿ ಅರ್ಹತೆಯ ಮಾನದಂಡ ಹಾಗೂ ವರ್ಕ್ ಲೋಡ್ 8-10 ತಾಸು ವಿಸ್ತರಣೆಯಾಗಿರುವ ಕಾರಣ ಹೊಸದಾಗಿ 9500. ಅತಿಥಿ ಉಪನ್ಯಾಸಕರ ನೇಮಕಕ್ಕೆ ಅವಕಾಶ ದೊರೆತಿದ್ದು,‌ ಅರ್ಜಿ‌ ಸಲ್ಲಿಕೆಗಾಗಿ ಸೋಮವಾರ ಪೋರ್ಟಲ್ ಕಾರ್ಯಾರಂ‌ಭಿಸಲಿದ್ದು, ಅರ್ಹ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ಸರ್ಕಾರದ ತೀರ್ಮಾನಕ್ಕೆ ಅತಿಥಿ ಉಪನ್ಯಾಸಕರು ಆಕ್ರೋಶ
ಅತಿಥಿ ಉಪನ್ಯಾಕರಿಗೆ(Guest Lecturers) ಸಂಕ್ರಾಂತಿ ಹಬ್ಬಕ್ಕೆ (Sankranti Festival) ಸಿಹಿ ಸುದ್ದಿ ಕೊಟ್ಟಿದ್ದೇವೆ ಎಂದು ಹೇಳಿರುವ ಶಿಕ್ಷಣ ಸಚಿವ ಅಶ್ವಥ್ ನಾರಾಯಣ (Dr CN Ashwath Narayan) ಅವರ ಹೇಳಿಕೆ ಶುದ್ಧ ಸುಳ್ಳು, ಇದು ಮೂಗಿಗೆ ತುಪ್ಪ ಸವರುವ ತಂತ್ರವಾಗಿದೆ ಎಂದು ಅತಿಥಿ ಉಪನ್ಯಾಸಕರು ಆಕ್ರೋಶ ಹೊರಹಾಕಿದ್ದಾರೆ.

Karnataka Guest Lecturer Salary Hike: ಸಂಕ್ರಾಂತಿ ಕೊಡುಗೆ, ಅತಿಥಿ ಉಪನ್ಯಾಸಕರ ವೇತನ ದುಪ್ಪಟ್ಟು ಹೆಚ್ಚಿಸಿದ ಸರಕಾರ

ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರು, ರಾಜ್ಯದ ಇತಿಹಾಸದಲ್ಲೇ ಅತೀ ಹೆಚ್ಚು ಸಹಾಯ ಧನವನ್ನ ಅತಿಥಿ ಉಪನ್ಯಾಸಕರಿಗೆ ನೀಡ್ತಿದ್ದೇವೆ ಎಂದು ಸರ್ಕಾರ ಹೇಳಿರುವುದು ಶುದ್ಧ ಸುಳ್ಳು. ಟೆಕ್ನಿಕಲಿ ಯೋಚನೆ ಮಾಡಿದರೆ ಒಬ್ಬರಿಗೆ 3 ಸಾವಿರ ಮಾತ್ರ ಹೆಚ್ಚು ಮಾಡಿದ್ದಾರೆ. ಆದರೆ, 30, 32 ಸಾವಿರ ಕೊಡುತ್ತೇವೆ ಎಂದು ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವುದು ಶುದ್ಧ ಸುಳ್ಳು ಎಂದು ಆರೋಪಿಸಿದ್ದಾರೆ.

ಇನ್ನು ಸರ್ಕಾರದ ತೀರ್ಮಾನದಲ್ಲಿ ಉದ್ಯೋಗ ಭದ್ರತೆ ಇಲ್ಲ. ಇದೊಂದು ಒಡೆದು ಆಳುವ ನೀತಿ. ಯಾರೂ ಕೂಡ ಧೃತಿಗೆಡೋದು ಬೇಡ. ನಮ್ಮ ಹೋರಾಟ ಮುಂದುವರೆಯುತ್ತದೆ. 14 ಸಾವಿರ ಮಂದಿಗೂ ನ್ಯಾಯ ದೊರೆಯುವವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ ಎಂದು ಪ್ರತಿಭಟನಾ ನಿರತ ಅಥಿತಿ ಉಪನ್ಯಾಸಕರು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಮೂಲ ಬೇಡಿಕೆಯನ್ನೇ ಬಿಟ್ಟು ಸಂಬಳವನ್ನ ಮಾತ್ರ ಹೆಚ್ಚಿಗೆ ಮಾಡಿರೋದು ಬೇಸರದ ಸಂಗತಿ. ಆದರೆ ಅತಿಥಿ ಉಪನ್ಯಾಸಕರಿಗೆ ಬೇಕಿರೋದು ಸಂಬಳ ಅಲ್ಲ. ಸೇವಾ ಭದ್ರತೆ ಬೇಕು. ಖಾಯಂ ಹಾಗೂ ಹೆಚ್ಚುವರಿ ಉಪನ್ಯಾಸಕರು ಬಂದಾಗ ನಮ್ಮ ವೃತ್ತಿಯನ್ನೇ ತೊರೆಯಬೇಕಿದೆ, ಈ ಕ್ರಮ ಸರಿ ಇಲ್ಲ. ಈ ಹಿಂದಿನಿಂದಲೂ ಸೇವಾ ಅಭದ್ರತೆ ಕಾಡ್ತಿತ್ತು. ಸೇವಾ ಭದ್ರತೆಗಾಗಿ ನಾವು ಹೋರಾಟ ಕೈಗೊಂಡಿದ್ದೇವೆ. ನಮ್ಮ ಮೂಲ ಬೇಡಿಕೆಯನ್ನೇ ಈಡೇರಿಸದೇ ಸರ್ಕಾರ ಕೈ ಚೆಲ್ಲಿದ್ದಾರೆ. ಇದು ನಿರಾಶಾದಾಯಕವಾದ ಕ್ರಮ. ನಮ್ಮ ಮೂಲ ಬೇಡಿಕೆ ಈಡೇರೋವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದ ಅತಿಥಿ ಉಪನ್ಯಾಸಕರು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

Latest Videos
Follow Us:
Download App:
  • android
  • ios