Asianet Suvarna News Asianet Suvarna News

ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಗ್ಗೆ ಒತ್ತಡವೇ: 08046110007 ಸಂಖ್ಯೆಗೆ ಕರೆ ಮಾಡಿ

*   ಫಲಿತಾಂಶದ ಒತ್ತಡ ನಿರ್ವಹಣೆಗೆ ಮಾನಸಿಕ ಸಹಾಯವಾಣಿ
*   ಆರೋಗ್ಯ ಸಚಿವ ಡಾ. ಸುಧಾಕರ್‌ ಒತ್ತಾಸೆಯಿಂದ ಸ್ಥಾಪನೆ
*  ಫಲಿತಾಂಶ ನಿರೀಕ್ಷೆಯಲ್ಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು 
 

Mental Health Helpline Starts in Karnataka For SSLC Students grg
Author
Bengaluru, First Published May 19, 2022, 4:22 AM IST

ಬೆಂಗಳೂರು(ಮೇ.19): ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಒತ್ತಾಸೆ ಮೇರೆಗೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿ ಫಲಿತಾಂಶದ ಒತ್ತಡ ನಿರ್ವಹಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ‘ಮಾನಸಿಕ ಆರೋಗ್ಯ ಸಹಾಯವಾಣಿ- 08046110007’ ಆರಂಭಿಸಲಾಗಿದೆ. ಇಂದು(ಗುರುವಾರ) ಎಸ್ಸೆಸ್ಸೆಲ್ಸಿ ಫಲಿತಾಂಶ ಘೋಷಣೆ ಆಗಲಿದ್ದು, ಈ ಹಿನ್ನೆಲೆಯಲ್ಲಿ ಸಹಾಯವಾಣಿಗೆ ಚಾಲನೆ ನೀಡಲಾಗಿದೆ.

ಆರೋಗ್ಯ ಇಲಾಖೆಯು ನಿಮ್ಹಾನ್ಸ್‌ ಸಹಕಾರದೊಂದಿಗೆ ಸಹಾಯವಾಣಿಯನ್ನು ನಿರ್ವಹಿಸಲಿದೆ. ಫಲಿತಾಂಶದಿಂದ ಒತ್ತಡಕ್ಕೆ ಒಳಗಾಗುವ ವಿದ್ಯಾರ್ಥಿಗಳು ನೇರವಾಗಿ ಸಹಾಯವಾಣಿಗೆ ಕರೆ ಮಾಡಿ ತಜ್ಞರು, ಆಪ್ತಸಮಾಲೋಚಕರಿಂದ ನೆರವು ಪಡೆದುಕೊಳ್ಳಬಹುದಾಗಿದೆ.

ಮೇ 19 ರಂದು SSLC ಫಲಿತಾಂಶ ಪ್ರಕಟ, ಮಾರ್ಕ್ಸ್‌ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್!

ಫಲಿತಾಂಶ ಹಿನ್ನೆಲೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿರುವ ಡಾ. ಸುಧಾಕರ್‌, ‘ಶೈಕ್ಷಣಿಕ ಜೀವನದ ಮಹತ್ವದ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶ ನಿರೀಕ್ಷೆಯಲ್ಲಿದ್ದಾರೆ. ಫಲಿತಾಂಶಗಳು ಅಂದುಕೊಂಡ ಹಾಗೇ ಬರಲಿ, ಬಾರದೇ ಇರಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಫಲಿತಾಂಶ ಜೀವನದ ಅಂತ್ಯವಲ್ಲ. ಆರಂಭವೂ ಅಲ್ಲ. ಅದು ಶೈಕ್ಷಣಿಕ ಜೀವನದ ಒಂದು ಪ್ರಕ್ರಿಯೆ. ಸೋಲು-ಗೆಲುವು ಎರಡೂ ಜೀವನದ ಭಾಗ. ದೃತಿಗೆದೆ ಮುನ್ನುಗ್ಗಿ’ ಎಂದು ಹಾರೈಸಿದ್ದಾರೆ.

"

ಪರೀಕ್ಷೆ ಬರೆದಿರುವ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೂ ಫಲಿತಾಂಶಕ್ಕೆ ಶುಭ ಹಾರೈಕೆಗಳು. ತಂದೆ, ತಾಯಿ, ಗುರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಿರಿ ಎಂದು ಸಚಿವರು ಶುಭ ಹಾರೈಸಿದ್ದಾರೆ.
 

Follow Us:
Download App:
  • android
  • ios