ಸಿಬಿಎಸ್‌ಇ ಫಲಿತಾಂಶ 2023-24: ಮಾಯಾ, ಸ್ತುತಿ ಕರ್ನಾಟಕದ ಟಾಪರ್ಸ್
10ನೇ ತರಗತಿಯಲ್ಲಿ ಬೆಂಗಳೂರಿನ ಇಂದಿರಾನಗರದ ನ್ಯಾಷನಲ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಮಾಯಾ ರಾಜೇಶ್ 500 496 05 (5.99.2) 12ನೇ ತರಗತಿಯಲ್ಲಿ (ವಾಣಿಜ್ಯ ವಿಭಾಗ) ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ನ್ಯಾಷನಲ್ ಪಬ್ಲಿಕ್ ಶಾಲೆಯ ಸ್ತುತಿ 5 500 496 (99.2) ಸಾಧನೆ ಮಾಡಿದ್ದಾರೆ.
ಬೆಂಗಳೂರು(ಮೇ.14): 2023-24ನೇ ಸಾಲಿನ 10 ಮತ್ತು 12ನೇ ತರಗತಿ ಫಲಿತಾಂಶವನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್‌ಇ) ಸೋಮವಾರ ಪ್ರಕಟಿಸಿದ್ದು, ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ಬೆಂಗಳೂರು ಪ್ರಾದೇಶಿಕ ವಿಭಾಗವು ಈ ಬಾರಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
10ನೇ ತರಗತಿಯಲ್ಲಿ ಬೆಂಗಳೂರಿನ ಇಂದಿರಾನಗರದ ನ್ಯಾಷನಲ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಮಾಯಾ ರಾಜೇಶ್ 500 496 05 (5.99.2) 12ನೇ ತರಗತಿಯಲ್ಲಿ (ವಾಣಿಜ್ಯ ವಿಭಾಗ) ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ನ್ಯಾಷನಲ್ ಪಬ್ಲಿಕ್ ಶಾಲೆಯ ಸ್ತುತಿ 5 500 496 (.99.2) ಸಾಧನೆ ಮಾಡಿದ್ದಾರೆ. ಇವರೇ ರಾಜ್ಯದ ಟಾಪರ್‌ಗಳು ಎನ್ನಲಾಗುತ್ತಿದೆ.
ಸಿಬಿಎಸ್‌ಸಿ 12 ನೇ ತರಗತಿ ಫಲಿತಾಂಶ ಬಿಡುಗಡೆ, ಒಟ್ಟು ಶೇ.87.98 ಫಲಿತಾಂಶ!
ಇವರಲ್ಲದೆ 12ನೇ ತರಗತಿಯಲ್ಲಿ ರಾಮ ಮೂರ್ತಿನಗರದ ಶ್ರೀಚೈತನ್ಯ ಟೆಕ್ಕೋಶಾಲೆಯ ಮೋನಿಕಾ.ಎಂ ವಿಜ್ಞಾನ ವಿಭಾಗದಲ್ಲಿ 500ಕ್ಕೆ 494 (ಶೇ.98.8), ಅದೇ ವಿಭಾಗದ ವಿಶ್ರುತ್ ಮತ್ತು ಆದಿತ್ಯ ಎಂಬ ವಿದ್ಯಾರ್ಥಿಗಳು ತಲಾ 493 ಅಂಕ ಪಡೆದಿದ್ದಾರೆ. 10ನೇ ತರಗತಿಯಲ್ಲಿ ವಿದ್ಯಾರಣ್ಯಪುರದ ಶ್ರೀ ಚೈತನ್ಯ ಟೆಕ್ಕೋ ಶಾಲೆಯ ದಯಾನಿತಾ ವಿದ್ಯಾರ್ಥಿನಿ ಶೇ.99 ರಷ್ಟು ಫಲಿತಾಂಶ ಪಡೆದು ಬೆಂಗಳೂರಿಗೆ ಟಾಪರ್ ಆಗಿದ್ದಾರೆ. ಈ ಶಾಲೆಗೆ ಶೇ. 100ರಷ್ಟು ಫಲಿತಾಂಶ ಬಂದಿದೆ. ದಾವಣಗೆರೆಯ ಶ್ರೀ ಚೈತನ್ಯ ಟೆಕ್ಕೋ ಶಾಲೆಯ ಸುಚಿತಾ ಮನ್ನೆ ಮತ್ತು ಸಿಂಧನೂರಿನ ಶ್ರೀ ಚೈತನ್ಯ ಟೆಕ್ಕೋ ಶಾಲೆಯ ಸತಿ ತಿಮ್ಮನದೊಡ್ಡಿಕರನಂ 500ಕ್ಕೆ 494 (ಶೇ.98.8) ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.
ಬೆಂಗಳೂರು ಪ್ರಾದೇಶಿಕ ವಿಭಾಗದ ಸಿಬಿಎಸ್‌ಇ ಶಾಲೆಗಳಲ್ಲಿ 10ನೇ ತರಗತಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಪೈಕಿ ಶೇ.99.26 ರಷ್ಟು ಮತ್ತು 12ನೇ ತರಗತಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಲ್ಲಿ ಶೇ.96.95 ರಷ್ಟು ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದಾರೆ. 10ನೇ ತರಗತಿ ಫಲಿತಾಂಶ ಕಳೆದ ವರ್ಷಕ್ಕೆ (ಶೇ.99.18) ಹೋಲಿಸಿದರೆ ಶೇ.0.08 ರಷ್ಟು ಹೆಚ್ಚಾದರೆ, 12 ನೇ ತರಗತಿ ಫಲಿತಾಂಶವು ಕಳೆದ ವರ್ಷಕ್ಕೆ ಹೋಲಿಸಿದರೆ (ಶೇ.98.64) ಶೇ.1.69 ರಷ್ಟು ಕಡಿಮೆಯಾಗಿದೆ.
ಅನೇಕ ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿರುವುದಾಗಿ ಪ್ರಕಟಿಸಿವೆ. ರಾಜ್ಯದ ವಿವಿಧ ಶಾಲಾವಾರು ಫಲಿತಾಂಶದಲ್ಲಿ 12ನೇ ತರಗತಿಯಲ್ಲಿ ಸರ್ಕಾರಿಶಾಲೆಗಳಲ್ಲಿ ಶೇ.99.11, ಸ್ವತಂತ್ರ ಶಾಲೆಗಳಲ್ಲಿ ಶೇ.96.33, ಜವಾಹರ್ ನವೋದಯ ವಿದ್ಯಾಲಯಗಳಲ್ಲಿ ಶೇ.99.87, ಕೇಂದ್ರೀಯ ವಿದ್ಯಾಲಯಗಳಲ್ಲಿ ಶೇ.99.35 ಮತ್ತು ಕೇಂದ್ರ ಆಡಳಿತದ ಟಿಬೆಟಿಯನ್ ಶಾಲೆ ಗಳಲ್ಲಿ ಶೇ.98.84 ರಷ್ಟು ಫಲಿತಾಂಶ ಬಂದಿದೆ.
CBSE Result ಆ್ಯಸಿಡ್ ದಾಳಿಯಿಂದ ಬದುಕುಳಿದ ಪಿಯೋನ್ ಮಗಳು ಟಾಪರ್!
ಅದೇ ರೀತಿ 10ನೇ ತರಗತಿ ಪೈಕಿ ಸರ್ಕಾರಿ ಶಾಲೆಗಳಲ್ಲಿ ಶೇ.98.07, ಸ್ವತಂತ್ರ ಶೇ.99.24, ಜವಾಹರ್‌ನವೋದಯ ವಿದ್ಯಾಲಯಗಳು ಶೇ.100, ಕೇಂದ್ರೀಯ ವಿದ್ಯಾಲಯಗಳಲ್ಲಿ ಶೇ.99.85, ಕೇಂದ್ರ ಆಡಳಿತದ ಟಿಬೆಟಿಯನ್ ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ದಾಖಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಮಧ್ಯೆ, ತಿರುವನಂತಪುರ ಪ್ರದೇಶದ ಶಾಲೆಗಳು 12ನೇ ತರಗತಿಯಲ್ಲಿ ಶೇ.99.91 ಮತ್ತು 10 ನೇ ತರಗತಿಯಲ್ಲಿ ಶೇ.99.75 ರಷ್ಟು ಫಲಿತಾಂಶದೊಂದಿಗೆ ಅಗ್ರ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನಂತರದ ಸ್ಥಾನದಲ್ಲಿ ವಿಜಯವಾಡ ಮತ್ತು ಚೆನ್ನೈ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ ಎಂದು ಸಿಬಿಎಸ್‌ಇ ಪ್ರಕಟಣೆ ತಿಳಿಸಿದೆ.