3 ವರ್ಷ ವಯಸ್ಸಿದ್ದಾಗ ಭೀಕರ ಆ್ಯಸಿಡ್ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಮುಖ ಸೇರಿದಂತೆ ದೇಹದ ಬಹುತೇಕ ಭಾಗ ಸುಟ್ಟಿತ್ತು. ಬರೋಬ್ಬರಿ 6 ವರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಬದುಕು ಸಹಜ ಸ್ಥಿತಿಗೆ ಮರಳಲಿಲ್ಲ. ಆದರೆ ಸತತ ಪ್ರಯತ್ನ, ಪರಿಶ್ರಮದಿಂದ ಈಕೆ ಬದಕು ಬದಲಿಸಿದ್ದಾಳೆ. ಇದೀಗ 10ನೇ ತರಗತಿ ಸಿಬಿಎಸ್ಇ ಪರೀಕ್ಷೆಯಲ್ಲಿ ಈಕೆ ಶಾಲೆಗೆ ಟಾಪರ್ ಆಗಿದ್ದಾಳೆ. ಶೇ.95.02 ಅಂಕ ಪಡೆದಿದ್ದಾಳೆ.
ಚಂಡಿಘಡ(ಮೇ.14): ಹೆಸರು ಕಾಫಿ. ಏನೂ ಅರಿಯದ 3ನೇ ವಯಸ್ಸಿಗೆ ಆ್ಯಸಿಡ್ ದಾಳಿಗೆ ತುತ್ತಾಗಿ 6 ವರ್ಷ ಚಿಕಿತ್ಸೆ ಪಡೆಯಬೇಕಾಯಿತು. ಆದರೂ ಬದುಕು ಸಹಜವಾಗಲಿಲ್ಲ. ಕಣ್ಣು ಕಾಣಿಸದಾಯಿತು. ಆದರೆ ಈ ಕಾಫಿ ತನ್ನ ಬದುಕು ಬದಲಿಸಲು ಮಾಡಿದ ಹೋರಾಟ ಎಲ್ಲರಿಗೂ ಮಾದರಿ. ಇದೀಗ ಕಾಫಿ 10ನೇ ತರಗತಿ ಸಿಬಿಎಸ್‌ಇ ಫಲಿತಾಂಶದಲ್ಲಿ ಶೇಕಡಾ 95.02 ಅಂಕ ಪಡೆದು ಶಾಲೆಗೆ ಟಾಪರ್ ಆಗಿದ್ದಾಳೆ. ಈಕೆಯ ತಂದೆ ಸೆಕ್ರೆಟರಿ ಕಚೇರಿಯಲ್ಲಿ ಪಿಯೋನ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಶಾಲೆಗೆ ಮೊದಲ ಸ್ಥಾನ ಪಡೆದ ಈ ಕಾಫಿ, ಐಎಎಸ್ ಅಧಿಕಾರಿಯಾಗು ಕನಸು ಕಟ್ಟಿಕೊಂಡಿದ್ದಾಳೆ. ಇತ್ತ ಪೋಷಕರ ಸಂತಸಕ್ಕೆ ಪಾರವೇ ಇಲ್ಲ. ಮಗಳ ಸಾಧನೆಯನ್ನು ಕೊಂಡಿದ್ದಾರೆ.
ಚಂಡೀಘಡ ನಿವಾಸಿಯಾಗಿರುವ ಕಾಫಿ, 3ನೇ ವಯಸ್ಸಿಗೆ ಭೀಕರ ಆ್ಯಸಿಡ್ ದಾಳಿಗೆ ತುತ್ತಾಗಿದ್ದಳು. ನೆರಮನೆಯವರ ಹೊಟ್ಟೆ ಕಿಚ್ಚಿಗೆ ಏನೂ ಅರಿಯದ ಮೂರು ವರ್ಷದ ಪುಟ್ಟ ಕಂದಮ್ಮ ಕಾಫಿ ತುತ್ತಾಗಿದ್ದಳು. ಹೊಟ್ಟೆ ಕಿಚ್ಚಿನ ಭೀಕರತೆ ಆ್ಯಸಿಡ್ ದಾಳಿ ನಡೆದಿತ್ತು. ಮುಖ ಸೇರಿದಂತೆ ದೇಹದ ಭಾಗಗಳು ಸುಟ್ಟುಹೋಗಿತ್ತು. ಸತತ 6 ವರ್ಷ ಚಿಕಿತ್ಸೆ ಪಡೆಯುವ ಅನಿವಾರ್ಯ ಎದುರಾಗಿತ್ತು. ಈಕೆಯ ಸುಂದರ ಬಾಲ್ಯ ನೋವು, ಆಘಾತ, ಚಿಕಿತ್ಸೆಯಲ್ಲೇ ಕಳೆದು ಹೋಯಿತು. ಆ್ಯಸಿಡ್ ದಾಳಿಯಿಂದ ಕಳೆದುಕೊಂಡು ದೃಷ್ಟಿ ಮರಳಿ ಬರಲಿಲ್ಲ. ಆದರೆ ಛಲ ಬಿಡದ ಕಾಫಿ, ತನ್ನ ಬದಕು ಬದಲಿಸಲು ನಿರ್ಧರಿಸಿದಳು. ವಿದ್ಯಾಭ್ಯಾಸದ ಮೂಲಕ ತಾನು ಎಲ್ಲವನ್ನೂ ಗೆಲ್ಲಬಲ್ಲೆ ಅನ್ನೋ ವಿಶ್ವಾಸ ಈಕೆಯಲ್ಲಿತ್ತು. ಅದು ಸಾಬೀತು ಮಾಡಿದ್ದಾಳೆ.
CBSE Class 10 Result: ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ, ರಿಸಲ್ಟ್‌ಗಾಗಿ ಇಲ್ಲಿ ಚೆಕ್ ಮಾಡಿ!
ಬೈಲ್ ಲಿಪಿ ಮೂಲಕ ತನ್ನ ವಿದ್ಯಾಭಾಸ ಆರಂಭಿಸಿದ ಕಾಫಿ, ಅತ್ಯುತ್ತಮ ಅಂಕ ಪಡೆಯುತ್ತಲೇ ಸಾಗಿದಳು. ಸಿಬಿಎಶ್ಇ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಾಗ ಕಾಫಿ ಖುಷಿ ಡಬಲ್ ಆಗಿತ್ತು. ಶೇಕಡಾ 95.02 ಅಂಕ ಪಡೆದು ಈಕೆ ಕಲಿಯುತ್ತಿರುವ ಚಂಡೀಘಡದ ಶಾಲೆಗೆ ಟಾಪರ್ ಆಗಿದ್ದಳು. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕಾಫಿ, ಸಂತಸ ಹಂಚಿಕೊಂಡಿದ್ದಾಳೆ. ನನಗೆ ಬೆನ್ನೆಲುಬಾಗಿ ನಿಂತು ನನ್ನಲ್ಲಿ ಮಾನಸಿಕವಾಗಿ ಧೈರ್ಯ ತುಂಬಿ, ಆತ್ಮವಿಶ್ವಾಸ ನೀಡಿದ ಪೋಷಕರಿಗೆ ಎಷ್ಟು ಧನ್ಯವಾದ ಹೇಳಿದರು ಸಾಲದು. ನನ್ನ ಕಷ್ಟದ ದಿನಗಳು ಪೋಷಕರಿಗೆ ಮಾತ್ರ ಗೊತ್ತು. ಈ ಎಲ್ಲಾ ಸಂಕಷ್ಟ ಮೆಟ್ಟಿ ನಿಂತಿರುವುದು ಖುಷಿ ತಂದಿದೆ. ಇದರ ಜೊತೆಗೆ ಶಿಕ್ಷಕರ ಮಾರ್ಗದರ್ಶನ ಅತ್ಯಂತ ಸಹಕಾರಿಯಾಗಿತ್ತು ಎಂದು ಕಾಫಿ ಹೇಳಿದ್ದಾಳೆ.
CBSE Class 12 Result: ತಿರುವನಂತಪುರ ಟಾಪ್, ಬೆಂಗಳೂರಿಗೆ 2ನೇ ಸ್ಥಾನ!
ಚೆನ್ನಾಗಿ ಓದಿ ಐಎಎಸ್ ಅಧಿಕಾರಿಯಾಗಬೇಕು. ಇದಕ್ಕಾಗಿ ಎಲ್ಲಾ ಶ್ರಮಪಡುತ್ತೇನೆ. ನನಗೆಪೋಷಕರ ಆಶೀರ್ವಾದ ಬೆಂಬಲ ಇದೆ. ಹೀಗಾಗಿ ನಾನು ಸಾಧಿಸುತ್ತೇನೆ ಎಂದು ಕಾಫಿ ವಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತ ಕಾಫಿ ತಂದೆ ಮಗಳ ಸಾಧನೆಯನ್ನು ಕೊಂಡಿದ್ದಾರೆ. ಮಗಳ ಮುಂದೆ ಏನು ಒದಬೇಕು, ಆಕೆ ಏನಾಗಬೇಕೆಂದು ಬಯಸಿದ್ದಾಳೆ. ಅದನ್ನು ನೆರವೇರಿಸಲು ನಾವು ಸಿದ್ದರಿದ್ದೇವೆ. ಹಗಲು ರಾತ್ರಿ ದುಡಿದು ಆಕೆಗೆ ಬೆಂಬಲ ನೀಡುತ್ತೇವೆ ಎಂದು ಕಾಫಿ ತಂದೆ ಹೇಳಿದ್ದಾರೆ.
