Asianet Suvarna News Asianet Suvarna News

ಬೆಂ.ನಗರ ವಿವಿಯ ಪಿಜಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಂದ ಸಾಮೂಹಿಕ ನಕಲು

*  ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯುತ್ತಿದ್ದ ಪರೀಕ್ಷೆಗಳು
*  ಮುಖ್ಯ ಅಧೀಕ್ಷಕರನ್ನು ಬದಲಿಸಿದ ವಿವಿ
*  ಜೆರಾಕ್ಸ್‌ ಪ್ರತಿ, ನೋಟ್‌ ಹಾಳೆ ನೋಡಿ ನಕಲು
 

Mass Copy From Students in Bengaluru City University PG Exam grg
Author
Bengaluru, First Published Jun 17, 2022, 5:27 AM IST

ಬೆಂಗಳೂರು(ಜೂ.17):  ನಗರದ ಕೆ.ಆರ್‌.ವೃತ್ತ ಬಳಿಯ ಸರ್ಕಾರಿ ಕಲಾ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ (ಗ್ಯಾಸ್‌ ಕಾಲೇಜು) ಬುಧವಾರ ನಡೆದ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಸಾಮೂಹಿಕ ನಕಲು ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕೇಂದ್ರ ಮುಖ್ಯ ಅಧೀಕ್ಷಕರೇ ಸಾಮೂಹಿಕ ನಕಲಿಗೆ ಸಹಕಾರ ನೀಡಿದ್ದು, ಪರೀಕ್ಷಾ ಅವಧಿಯಲ್ಲಿ ಸ್ಥಳದಲ್ಲಿರದೆ ಕೇಂದ್ರದಿಂದ ಹೊರಗೆ ಹೋಗಿದ್ದರು ಎಂಬ ಆರೋಪಿಸಲಾಗುತ್ತಿದೆ.

ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ವಿಭಾಗದ ಪ್ರಥಮ ಸೆಮಿಸ್ಟರ್‌ ಪರೀಕ್ಷೆಗಳಲ್ಲಿ ಜೆರಾಕ್ಸ್‌ ಪ್ರತಿ, ನೋಟ್‌ ಬುಕ್‌ ಹಾಳೆಗಳನ್ನೇ ಇಟ್ಟುಕೊಂಡು ವಿದ್ಯಾರ್ಥಿಗಳು ನಕಲು ಮಾಡಿದ್ದಾರೆ. ಇದಕ್ಕೆ ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಪ್ರಾಧ್ಯಾಪಕರೇ ಸಹಕಾರ ನೀಡಿದ್ದಾರೆ ಎಂಬ ಆಪಾದನೆಗಳು ಕೇಳಿಬಂದಿವೆ.

ಕುವೆಂಪು ವಿವಿ ಘಟಿಕೋತ್ಸವ: ಸಮಸ್ಯೆ ಪರಿಹಾರಕ್ಕೆ ಬದ್ಧತೆಯ ವಿದ್ಯಾವಂತರು ಅವಶ್ಯ: ಡಾ.ಶ್ರೀದೇವಿ. ಸಿಂಗ್‌

ಪರೀಕ್ಷಾ ಅಕ್ರಮದ ಆರೋಪ ಬಂದ ಕೂಡಲೇ ಎಚ್ಚೆತ್ತ ವಿಶ್ವವಿದ್ಯಾಲಯದ ಅಧಿಕಾರಿಗಳು ಗುರುವಾರ ಆಂತರಿಕ ವಿಚಾರಣೆ ನಡೆಸಿದ್ದು, ಈ ಕೇಂದ್ರದಲ್ಲಿ ಸಾಮೂಹಿಕ ನಕಲು ನಡೆದಿಲ್ಲ. ಆದರೆ, ಪರೀಕ್ಷಾ ಸಮಯದಲ್ಲಿ ಕೇಂದ್ರದ ಮುಖ್ಯ ಅಧೀಕ್ಷಕರೂ ಆದ ಕಾಲೇಜಿನ ಪ್ರಾಂಶುಪಾಲ ಪಿ.ಟಿ.ಶ್ರೀನಿವಾಸ್‌ ನಾಯಕ್‌ ಕೇಂದ್ರದಲ್ಲಿ ಇರಲಿಲ್ಲ ಎಂಬುದು ಸಾಬೀತಾಗಿದೆ. ಈ ಸಂಬಂಧ ವಿವಿಯ ಮೌಲ್ಯಮಾಪನ ಕುಲ ಸಚಿವರು ವರದಿ ನೀಡಿದ್ದು, ಆ ವರದಿ ಮೇಲೆ ಶ್ರೀನಿವಾಸ್‌ ನಾಯಕ್‌ ಅವರನ್ನು ಮುಖ್ಯ ಅಧೀಕ್ಷಕ ಕಾರ್ಯದಿಂದ ಬಿಡುಗಡೆ ಮಾಡಿ ಹೊಸಬರನ್ನು ನೇಮಿಸಲಾಗಿದೆ ಎಂದು ಬೆಂ. ನಗರ ವಿವಿ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ತಿಳಿಸಿದ್ದಾರೆ.

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಮುಖ್ಯ ಅಧೀಕ್ಷಕರ ಬದಲಾವಣೆ ಜೊತೆಗೆ ಬಾಕಿ ಇರುವ ಇನ್ನು ನಾಲ್ಕು ವಿಷಯಗಳ ಪರೀಕ್ಷೆಗಳಿಗೆ ವಿಶ್ವವಿದ್ಯಾಲಯದ ಅಧಿಕಾರಿಗಳನ್ನೇ ಈ ಕೇಂದ್ರಕ್ಕೆ ಸಿಟ್ಟಿಂಗ್‌ ಸ್ಕಾ$್ವಡ್‌ ಆಗಿ ನೇಮಿಸಲು ತೀರ್ಮಾನಿಸಲಾಗಿದೆ. ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲು ಎಲ್ಲ ರೀತಿಯ ಕ್ರಮ ವಹಿಸಲಾಗಿತ್ತು. ಈಗಾಗಲೇ ಪದವಿ ಪರೀಕ್ಷೆಗಳು ಪೂರ್ಣಗೊಂಡಿವೆ. ಸ್ನಾತಕೋತ್ತರ ಪರೀಕ್ಷೆಗಳು ನಡೆಯುತ್ತಿವೆ. ಮುಖ್ಯ ಅಧೀಕ್ಷಕರ ಬೇಜವಾಬ್ದಾರಿತನದಿಂದ ಇಂತಹ ಲೋಪವಾಗಿದೆ. ಪರೀಕ್ಷೆ ವೇಳೆ ತಾವು ಸ್ಥಳದಲ್ಲಿ ಇರಲಿಲ್ಲ ಎಂದು ಶ್ರೀನಿವಾಸ್‌ ನಾಯಕ್‌ ಮೌಖಿಕವಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ಬಗ್ಗೆ ಅವರಿಗೆ ವಿವರಣೆ ನೀಡುವಂತೆ ಸೂಚಿಸಲಾಗಿದೆ. ಅವರ ವಿವರಣೆ ಆಧರಿಸಿ ಕ್ರಮ ಜರುಗಿಸಲಾಗುವುದು ಎಂದರು.

ಅಗಿದ್ದೇನು?

* ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಪರೀಕ್ಷೆ
* ಜೆರಾಕ್ಸ್‌ ಪ್ರತಿ, ನೋಟ್‌ ಹಾಳೆ ನೋಡಿ ನಕಲು
* ಕೇಂದ್ರ ಸ್ಥಾನದಲ್ಲಿ ಇರದ ಮುಖ್ಯ ಅಧೀಕ್ಷಕರು
 

Follow Us:
Download App:
  • android
  • ios