SSLC ಫಲಿತಾಂಶ ಪ್ರಕಟ: ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
* 2020-21 ನೇ ಸಾಲಿನ SSLC ಫಲಿತಾಂಶ ಪ್ರಕಟ
* ನೂತನ ಸಚಿವ ಬಿ.ಸಿ.ನಾಗೇಶ್ ಅವರಿಂದ ಫಲಿತಾಂಶ ಪ್ರಕಟ
* ಮಲ್ಲೇಶ್ವರಂನ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಸುದ್ದಿಗೋಷ್ಠಿ
ಬೆಂಗಳೂರು, (ಆ.09): ಕೊರೋನಾ ಭೀತಿಯ ಮಧ್ಯೆ ನಡೆದಿದ್ದ 2020-21 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ.
"
ಇಂದು (ಆ.09) ಬೆಂಗಳೂರಿನ ಕರ್ನಾಟಕ ಪ್ರೌಢಶಿಕ್ಷಣ ಇಲಾಖೆ ಕಚೇರಿಯಲ್ಲಿ ನೂತನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ಸುದ್ದಿಗೋಷ್ಠಿ ನಡೆಸಿ, ಫಲಿತಾಂಶ ಪ್ರಕಟಿಸಿದ್ದು, ಈ ಬಾರಿ 8.76 ಲಕ್ಷ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಈ ಪೈಕಿ 99.9% ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಓರ್ವ ವಿದ್ಯಾರ್ಥಿನಿಯಿಂದ SSLC ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿ ಸಿಕ್ತು 1 ಕೃಪಾಂಕ
4,70,160 ವಿದ್ಯಾರ್ಥಿಗಳು ಉತ್ತೀರ್ಣ ಆಗಿದ್ದಾರೆ. ಇನ್ನು 4,01,280 ವಿದ್ಯಾರ್ಥಿನಿಯರು ತೇರ್ಡೆಯಾಗಿದ್ದಾರೆ. A+ ಗ್ರೇಡ್‌ನಲ್ಲಿ 128931 ವಿದ್ಯಾರ್ಥಿಗಳು ಪಾಸ್ ಆಗಿದ್ರೆ, A ಗ್ರೇಡ್‌ನಲ್ಲಿ 250317 ಸ್ಟೂಡೆಂಟ್ಸ್ ಉತ್ತೀರ್ಣರಾಗಿದ್ದಾರೆ. B ಗ್ರೇಡ್‌ನಲ್ಲಿ 287684 ಹಾಗೂ ಸಿ ಗ್ರೇಡ್- 1 ಲಕ್ಷದ 13 ಸಾವಿರದ 610 ವಿದ್ಯಾರ್ಥಿಗಳು ಪಡೆದು ಕೊಂಡಿದ್ದಾರೆ. ಇನ್ನು ಶೇ.9 ರಷ್ಟು ಮಕ್ಕಳಿಗೆ ಮಾತ್ರ ಗೇಸ್ ಅಂಕ ನೀಡಿ ಪಾಸ್ ಮಾಡಲಾಗಿದೆ.
* 157 ವಿದ್ಯಾರ್ಥಿಗಳು 625ಕ್ಕೆ 625 (Out of Out) ಅಂಕ ಪಡೆದುಕೊಂಡಿದ್ದಾರೆ.
* 449 ವಿದ್ಯಾರ್ಥಿಗಳು 625 ಅಂಕಗಳಿಗೆ 621 ಮಾರ್ಕ್ಸ್ ಪಡೆದಿದ್ದಾರೆ.
* 625 ಅಂಕಗಳಿಗೆ 289 ವಿದ್ಯಾರ್ಥಿಗಳು 623 ಅಂಕ ಪಡೆದುಕೊಂಡಿದ್ದಾರೆ.
* 625 ಅಂಕಗಳಿಗೆ 28 ವಿದ್ಯಾರ್ಥಿಗಳು 620 ಅಂಕ ಪಡೆದುಕೊಂಡಿದ್ದಾರೆ.
* ಬೆಂಗಳೂರಿನ ಜ್ಯೋತಿಕಾ, ಅಭಯ್ ಚಂದ್ರ, ಶಿವಮೊಗ್ಗದ ಅಭಿಶಾ, ಉಡುಪಿಯ ಅಭಿಶೇಕ್ ಎನ್ನುವ ವಿದ್ಯಾರ್ಥಿಗಳು ಔಟ್ ಆರ್ಪ ಭಟ್ ಅಂದ್ರೆ 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಜ್ಯೋತಿಕಾ, ಅಭಯ್ ಚಂದ್ರ, ಶಿವಮೊಗ್ಗದ ಅಭಿಶಾ, ಉಡುಪಿಯ ಅಭಿಶೇಕ್ ಎನ್ನುವ ವಿದ್ಯಾರ್ಥಿಗಳು ಔಟ್ ಆರ್ಪ ಭಟ್ ಅಂದ್ರೆ 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ.
* ಪ್ರಥಮ ಭಾಷೆ ಕನ್ನಡ- 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳು 25 ಸಾವಿರದ 702.
* ದ್ವಿತೀಯ 100ಕ್ಕೆ 100 ಮಾರ್ಕ್ಸ್ ಅನ್ನು- 36ಸಾವಿರದ 628 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
* ಹಿಂದಿ 100ಕ್ಕೆ 100 ಅಂಕ ಪಡೆದವರು 36 776 ವಿದ್ಯಾರ್ಥಿಗಳು
* ಗಣಿತದಲ್ಲಿ 100ಕ್ಕೆ ನೂರು ಅಂಕವನ್ನು 6321 ವಿದ್ಯಾರ್ಥಿಗಳು ಪಡೆದಿದ್ದಾರೆ.
* ವಿಜ್ಞಾನ- 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 3649
* ಸಮಾಜ ವಿಜ್ಞಾನ100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 9367
https://sslc.karnataka.gov.in/ ಅಥವಾ https://karresults.nic.in/ ಗೆ ಭೇಟಿ ನೀಡಿ ರಿಸಲ್ಟ್ ಚೆಕ್ ಮಾಡಬಹುದು.
ಕೊರೋನಾ ಆತಂಕದ ಮಧ್ಯೆ ಕೆಲವರ ವಿರೋಧದ ನಡುವೆ ಶಿಕ್ಷಣ ಇಲಾಖೆ ಜುಲೈ 19, 22 ರಂದು ಹೊಸ ಮಾದರಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿತ್ತು.