Asianet Suvarna News Asianet Suvarna News

ಶಾಲೆಗಳಲ್ಲಿ ಯೋಗ- ಧ್ಯಾನ ಕಡ್ಡಾಯಗೊಳಿಸಿ: ಅಭಿನವ ಬಸವಲಿಂಗೇಶ್ವರ ಶ್ರೀ

ಕರ್ನಾಟಕ- ಮಹಾರಾಷ್ಟ್ರ ಸರ್ಕಾರಗಳಿಗೆ ನಾಗಣಸೂರು ಅಭಿನವ ಬಸವಲಿಂಗ ಶ್ರೀಗಳ ಆಗ್ರಹ

Make Yoga Meditation Mandatory in Schools Says Abhinava Basavalingeshwara Swamiji grg
Author
First Published Nov 17, 2022, 9:00 PM IST

ಶೇಷಮೂರ್ತಿ ಅವಧಾನಿ/ಶಿವಲಿಂಗೇಶ್ವರ ಜಾಲವಾದಿ

ಕಲಬುರಗಿ(ನ.17): ಮಕ್ಕಳ ಬುದ್ಧಿ ಶಕ್ತಿ ಹೆಚ್ಚಳಕ್ಕೆ, ಚುರುಕಿಗೆ ಹಾಗೂ ಅವರ ಅಧ್ಯಯನದಲ್ಲಿ ಏಕಾಗ್ರತೆಗೆ ಯೋಗ, ಧ್ಯಾನವನ್ನು ಶಾಲೆಗಳಲ್ಲಿ ಕಡ್ಡಾಯ ಮಾಡಬೇಕೆಂದು ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿರುವ ಅಕ್ಕಲಕೋಟೆ ತಾಲೂಕಿನ ನಾಗಣಸೂರು ಗ್ರಾಮದ ಜಗದ್ಗುರು ಬಸವಲಿಂಗೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಅಭಿನವ ಬಸವಲಿಂಗೇಶ್ವರರು ಪ್ರತಿಪಾದಿಸಿದ್ದಾರೆ.

ಕನ್ನಡ ಪ್ರಭ ಪ್ರತಿನಿಧಿಯೊಂದಿಗೆ ಈ ಕುರಿತು ಮಾತನಾಡಿದ ಅವರು, ಜಾಗತೀಕರಣ ಫಲವಾಗಿ ಜಗತ್ತೇ ಹಳ್ಳಿಯಾಗಿದೆ. ಈ ಹಂತಂದಲ್ಲಿ ನಾವು ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸಬೇಕಾಗಿದೆ. ಉತ್ತಮ ದೇಹ- ಆರೋಗ್ಯರ ಮೃನಸ್ಸಿಗೆ ಕನ್ನಡಿ. ಹೀಗಾಗಿ ಮಕ್ಕಳ ದೇಹಾರೋಗ್ಯ, ಮಾನಸಿಕ ಆರೋಗ್ಯ ಸಂರಕ್ಷಣೆಗೆ ಶಾಲೆಗಳಲ್ಲಿ ಯೋಗ, ಧ್ಯಾನ ಬರುವ ದಿನಗಳಲ್ಲಿ ಕಡ್ಡಾಯವಾಗಲೇಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಈಗಿನ ಕಾಲಮಾನದಲ್ಲಿ ಮಕ್ಕಳು ಮೋಬೈಲ್‌ ದಾಸರಾಗುತ್ತಿದ್ದಾರೆ. ಇಲೆಕ್ಟ್ರಾನಿಕ್‌ ಉಪಕರಣಗಳ ಜೊತೆ ಸಮಯ ಕಳೆಯುತ್ತಿರೋದು ಕಳವಳಕಾರಿ ಸಂಗತಿ. ಮಕ್ಕಳನ್ನು ಇದರಿಂದ ದೂರ ಮಾಡುವ ಸವಾಲು ನಮ್ಮ ಮುಂದಿದೆ. ಇದಕ್ಕೆ ಮದ್ದು ಎಂದರೆ ಮಕ್ಕಳನ್ನು ಯೋಗ, ಧ್ಯಾನ ಅವಶ್ಯಕ ಎಂದು ಶ್ರೀಗಳು ಒತ್ತಿ ಹೇಳಿದರು.

KALABURAGI NEWS: ಕೊಳಚೆ ನೀರು ತುಂಬಿದ ಮಹಿಳಾ ಶೌಚಾಲಯ; ಸ್ವಚ್ಛಗೊಳಿಸದ ಪಟ್ಟಣ ಪಂಚಾಯ್ತಿ!

ಮಠಗಳು, ಸಂಘಟನೆಗಳು ಈ ದಿಶೆಯಲ್ಲಿ ಯತ್ನಿಸುತ್ತಲೇ ಇವೆ. ಇದೀಗ ಸರ್ಕಾರಗಳೇ ತಮ್ಮ ಶೈಕ್ಷಣಿಕ ನೀತಿಯನ್ನಾಗಿ ಇದನ್ನು ರೂಪಿಸಬೇಕಿದೆ. ಈ ದಿಶೆಯಲ್ಲಿ ಸಿಎಂ ಬೊಮ್ಮಾಯಿಯವರ ನಿಲುವು ಸ್ವಾಗತಿಸೋದಾಗಿ ಶ್ರೀಗಳು ತಿಳಿಸಿದರು. ಆಧುನಿಕತೆ ಭೋಗದ ಜೀವನ ಕಲಿಸುತ್ತಿದೆ, ಅದನ್ನು ಹಾಗೇ ಬೆಳೆಲು ಬಿಡದಂತೆ ನಾವೆಲ್ಲರೂ ಯೋಗ ಜೀವನ ರೂಢಿಯಾಗುವಂತೆ ಮಾಡಬೇಕಾಗಿದೆ. ಈ ದಿಶೆಯಲ್ಲಿ ಸರ್ಕಾರಗಳೇ ಮುಂದಡಿ ಇಡಲು ಇದು ಸಕಾಲ ಎಂದರು.

ಸಾಮರಸ್ಯದ ಮಠ

ನಾಗಣಸೂರಲ್ಲಿರುವ ಬಸವಲಿಂಗೇಶ್ವರ ಮಠಕ್ಕೆ ಬಹುದೊಡ್ಡ ಇತಿಹಾಸವಿದೆ. ಈ ಮಠದ ಲಿಂ. ಬಸವಲಿಂಗ ಶ್ರೀಗಳು ಮಹಾ ಪವಾಡ ಪುರುಷರು. ಇವರು ಕುಸ್ತಿ ಪಟುಗಳಾಗಿದ್ದರು, ಯೋಗ- ಧ್ಯಾನದಲ್ಲಿಯೂ ಅಪಾರ ಆಸಕ್ತಿ ಇದ್ದವರು. ಊರಿನವರಗೆಲ್ಲರಿಗೂ ಗುರುಗಳು ತಮಗೆ ತುಪ್ಪ, ಹಾಲು ತಂದು ಒಪ್ಪಿಸಬೇಕೆಂದು, ತಾವೇ ಊರವರ ಪಶು ಸಂಪತ್ತನ್ನ ಪೋಷಿಸೋದಾಗಿಯೂ ಹೇಳುತ್ತಿದ್ದರಂತೆಯೇ. ಅದೇ ರೀತಿ ಊರಿನ ಭಕ್ತರು ಮಠಕ್ಕೆ ತುಪ್ಪ, ಹಾಲಿನ ನಿವೇದನೆ ಮಾಡುತ್ತಿದ್ದರು. ಇದೀಗ ಇದೇ ಸಂಪ್ರದಾಯ ಮಠದಲ್ಲಿ ಪ್ರತಿ ಇತಂಗಳು ಅಮಾವಾಸ್ಯೆ ನಡೆಯುತ್ತದೆ. ಹೈನು ಇದ್ದವರೆಲ್ಲರೂ ಮಠಕ್ಕೆ ಹಾಲು ತಂದು ನೀಡುತ್ತಾರೆ. ಹೈನಿದಲ್ಲವರಿಗೆ ಮಠದಿಂದ ಈ ಹಾಲನ್ನು ದಾನ ಮಾಡಲಾಗುತ್ತದೆ. ಇಂತಹ ಹಲವಾರು ಭಕ್ತಸ್ನೇಹಿ ಧೋರಣೆ, ಸಾಮರಸ್ಯದ ಸಂಪ್ರದಾಯಗಳು ಈ ಮಠದಲ್ಲಿವೆ.

ಇಂದಿಗೂ ಹೈನಿದ್ದವರು ತಮ್ಮ ಆಕಳು, ಎಮ್ಮೆಗಳಿಗೆ ಆರೋಗ್ಯ ತೊಂದರೆ ಕಾಡಿದಲ್ಲಿ ಆಸ್ಪತ್ರೆಗೆ ಹೋಗೋದೇ ಇಲ್ಲಿ ನೇರವಾಗಿ ತುಪ್ಪಿನ ಮಠಕ್ಕೆ ಬರುತ್ತಾರೆ. ಇಲ್ಲಿ ಬಂದು ಗುರುಗಳಿಂದ ಪಶುಗಳಿಗೆ ಕಟ್ಟುವ ಕಾಂಡ ಹಾಗೂ ನಿಂಬೆಹಣ್ಣುಗಳನ್ನು ಪಡೆದು ಅವುಗಳನ್ನು ಲಿಂಗೈಕ್ಯ ಬಸವಲಿಂಗೇಶ್ವರರ ಗದ್ದುಗೆಗೆ ಸ್ಪರ್ಶ ಮಾಡಿಕೊಂಡು ಹೋಗಿ ತಮ್ಮ ಅನಾರೋಗ್ಯ ಪೀಡಿತ ಪಶುವಿಗೆ ಕಟ್ಟುತ್ತಾರೆ. ಮಾರನೇ ದಿನವೇ ಆ ಪಶು ಆರೋಗ್ಯಪೂರ್ಣವಾಗಿ ಹಾಲು ಹಿಂಡಲು ಶುರು ಮಾಡುತ್ತದೆ. ಈ ಮಠಕ್ಕೆ ನಿತ್ಯ ಸುತ್ತಲಿನ ಹತ್ತಾರು ಹಳ್ಳಿಯ ರೈತರು ಈ ನಂಬಿಕೆಯೊಂದಿಗೆ ಬಂದು ಹೋಗುತ್ತಾರೆ.

Follow Us:
Download App:
  • android
  • ios