ಮಾಲಿನ್ಯ ನಿಯಂತ್ರಣ ಮಂಡಳಿಯ ಕನ್ಸೆಂಟ್ ಶುಲ್ಕ ಹೆಚ್ಚಳ, ಖಾಸಗಿ ಆಸ್ಪತ್ರೆಗಳು ಗರಂ

ಮಾಲಿನ್ಯ ನಿಯಂತ್ರಣ ಮಂಡಳಿಯು ಖಾಸಗಿ ಆಸ್ಪತ್ರೆ, ಕೈಗಾರಿಕೆಗಳಿಂದ  ಪಡೆಯುವ ಕನ್ಸೆಂಟ್ ಫೀಸ್  ಅನ್ನು ಏರಿಕೆ ಮಾಡಿದ್ದು, ಇದು ಖಾಸಗಿ ಆಸ್ಪತ್ರೆಳ ಕೆಂಗಣ್ಣಿಗೆ ಗುರಿಯಾಗಿದೆ.  

PHANA  complaint against Karnataka State Pollution Control Board about the Consent Fee hike  gow

ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್  

ಬೆಂಗಳೂರು (ಮಾ.26): ಪ್ರತೀ ವರ್ಷ ಮಾಲಿನ್ಯ ನಿಯಂತ್ರಣ ಮಂಡಳಿ (Karnataka State Pollution Control Board), ಖಾಸಗಿ ಆಸ್ಪತ್ರೆ (Private hospitals), ಕೈಗಾರಿಕೆಗಳಿಂದ ಕನ್ಸೆಂಟ್ ಫೀಸ್ (consent fees) ಪಡೆಯುತ್ತದೆ. ಆದರೆ ಈಗ ಮಾಲಿನ್ಯ ನಿಯಂತ್ರಣ ಮಂಡಳಿ ದರ ಪರಿಷ್ಕರಣೆ ಮಾಡಿದ್ದು, ಇದು ಖಾಸಗಿ ಆಸ್ಪತ್ರೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ವರ್ತನೆ ವಿರುದ್ಧ PHANA (private hospital and nursing Association) ಆಕ್ರೋಶ ವ್ಯಕ್ತಪಡಿಸಿದೆ. 2021 ವರ್ಷದ ಕೊನೆಯಲ್ಲಿ ಕನ್ಸೆಂಟ್ ಫೀಸ್ ಪರಿಷ್ಕರಣೆ ಮಾಡಿರುವ ಮಾಲಿನ್ಯ ನಿಯಂತ್ರಣ ‌ಮಂಡಳಿ, 33% ರಿಂದ ಶೇ. 900 ವರೆಗೂ ಕನ್ಸೆಂಟ್ ಫೀಸ್ ಹೆಚ್ಚಿಸಿದೆ.

ಆಸ್ಪತ್ರೆಗಳಿಂದ ಎಷ್ಟು ತ್ಯಾಜ್ಯ ಹೊರಬರುತ್ತೆ, ಆಸ್ಪತ್ರೆಯಿಂದಾಗುವ ಮಾಲಿನ್ಯ ಯಾವ ಪ್ರಮಾಣದ್ದು ಎಂಬ ಅಂಶಗಳನ್ನ ಇಟ್ಟುಕೊಂಡು ಇಲ್ಲಿಯವರೆಗೆ ಕನ್ಸೆಂಟ್ ಫೀಸ್ ಪಡೆಯಲಾಗ್ತಿತ್ತು.‌ ಆದರೆ ಈಗ ಆಸ್ಪತ್ರೆ ಒಟ್ಟಾರೆ ಆಸ್ತಿ, ಬಂಡವಾಳದ ಮೇಲೆ ಕನ್ಸೆಂಟ್ ಫೀಸ್ ವಸೂಲಿ ಮಾಡಲು ಮುಂದಾಗಿದೆ ಮಾಲಿನ್ಯ ನಿಯಂತ್ರಣ ಮಂಡಳಿ. ಮಾಲಿನ್ಯ‌ ನಿಯಂತ್ರಣ ಮಂಡಳಿಯ ನಿರ್ಧಾರದಿಂದ ಕಂಗಾಲಾಗಿವೆ ಖಾಸಗಿ ಆಸ್ಪತ್ರೆಗಳು. ಎಷ್ಟು ಕನ್ಸೆಂಟ್ ಫೀಸ್ ಹೆಚ್ಚಳ ಮಾಡಲಾಗಿದೆ ಅಂತ ನೋಡೋದಾದ್ರೆ.

ಬಜೆಟ್ ಘೋಷಣೆ ಬಳಿಕ ವಿವಾದದಲ್ಲಿ Chikkamagaluru ನಗರಸಭೆ

ಕನ್ಸೆಂಟ್ ಫೀಸ್ ಕಿರಿಕ್..! 

ಬಂಡವಾಳ ಕನ್ಸೆಂಟ್ ಫೀಸ್  ಪರಿಷ್ಕೃತ ಫೀಸ್  % ಏರಿಕೆ
1000 ಕೋಟಿ   2 ಲಕ್ಷ   20 ಲಕ್ಷ 900% 
500-1000 ಕೋಟಿ 1.50 ಲಕ್ಷ   10 ಲಕ್ಷ      567%
250-500 ಕೋಟಿ   1 ಲಕ್ಷ          5 ಲಕ್ಷ       400%  
50-250 ಕೋಟಿ  75 ಸಾವಿರ   1 ಲಕ್ಷ         33% 

ಮಾಲಿನ್ಯ ನಿಯಂತ್ರಣ ಮಂಡಳಿಯ ತೀರ್ಮಾನ ಕುರಿತು ಪ್ರತಿಕ್ರಯಿಸಿರುವ PHANA ಅಧ್ಯಕ್ಷ ಡಾ.ಪ್ರಸನ್ನ, ಮನಸೋ ಇಚ್ಛೆ ಮಾಲಿನ್ಯ ನಿಯಂತ್ರಣ ಮಂಡಳಿ ತೀರ್ಮಾನ ತೆಗೆದುಕೊಂಡಿದೆ. ಆಸ್ಪತ್ರೆ ಆಸ್ತಿ, ಬಂಡವಾಳದ ಮೇಲೆ ಕನ್ಸೆಂಟ್ ಫೀಸ್‌ ವಸೂಲಿ ಮಾಡೋದು ಅವೈಜ್ಞಾನಿಕ ಅಂತ ಕಿಡಿಕಾರಿದರು.

SSLC 2022 EXAM ಹಿಜಾಬ್ ಧರಿಸಿದ್ರೆ ಪರೀಕ್ಷೆಗಿಲ್ಲ ಎಂಟ್ರಿ, ಶಿಕ್ಷಣ ಇಲಾಖೆ ಆದೇಶ

ಆಸ್ಪತ್ರೆಯಲ್ಲಿ ಬಳಸುವ ಒಂದೊಂದು ಮಷಿನ್ 10 ಕೋಟಿ ಇದೆ ಅಂತ ಇಟ್ಕೊಳಿ. ಅದರಿಂದ ಯಾವುದೇ ಮಾಲಿನ್ಯ ಇರುವುದಿಲ್ಲ, ಇದನ್ನೂ ಕೂಡ ಸೇರಿಸಿಕೊಂಡು ಕನ್ಸೆಂಟ್ ಫೀಸ್ ವಸೂಲಿ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ್ರು. ಎಷ್ಟು ಬೆಡ್ ಇರುತ್ತೆ, ಎಷ್ಟು ತ್ಯಾಜ್ಯ ಸೃಷ್ಟಿಯಾಗತ್ತೆ ಅನ್ನೋದನ್ನ ನೋಡಬೇಕು. ಅಲ್ಲದೇ ಬಯೋ ಮೆಡಿಕಲ್ ವೇಸ್ಟ್ ಪ್ರತ್ಯೇಕವಾಗಿ ನಾವೇ ದುಡ್ಡು ಕೊಟ್ಟು ನಿರ್ವಹಣೆ ಮಾಡ್ತಿದ್ದೇವೆ ಎಂದರು.

ಅಲ್ಲದೇ 5 ವರ್ಷದ ಫೀಸ್ ಅನ್ನು ಒಟ್ಟಿಗೆ ಕಟ್ಟಿ‌ ಎಂದು ನೋಟಿಸ್ ಕೊಟ್ಟಿದ್ದಾರೆ. ನಾವು ಸಾಲ ಮಾಡಿ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ. ಇದು ಅವೈಜ್ಞಾನಿಕವಾದ ತೀರ್ಮಾನ, ನಾವು ಆಸ್ಪತ್ರೆಗಳನ್ನ ನಡೆಸೋದು ಹೇಗೆ ಎನ್ನುವಂತಾಗಿದೆ. ಈ ರೀತಿ ವಸೂಲಿ ಮಾಡಿದ್ರು ನಾವು ಮತ್ತೆ ರೋಗಿಗಳ ಮೇಲೆ‌ ದರ ಹೆಚ್ಚಿಸುವ ಪರಿಸ್ಥಿತಿ ಎದುರಾಗುತ್ತೆ ಎಂದರು. ಸಚಿವ ಆನಂದ್ ಸಿಂಗ್ ಅವರ ಗಮನಕ್ಕೆ ಈ ವಿಚಾರ ತಂದಿದ್ದೇವೆ‌ ಸಮಸ್ಯೆ ಬಗೆಹರಿಸಿ ಎಂದು ಕೇಳಿದ್ದೇವೆ, ಡಾ. ಪ್ರಸನ್ನ ಹೇಳಿದರು.

Latest Videos
Follow Us:
Download App:
  • android
  • ios