Asianet Suvarna News Asianet Suvarna News

ಜಾಬ್ ಮಾಡುತ್ತಲೇ ಎಂಟೆಕ್ ಕೋರ್ಸ್ ಮಾಡಿ, ಪ್ರಮೋಷನ್‌ ಪಡೆಯಿರಿ

* ಎಂಟೆಕ್ ಮಾಡಬೇಕು ಎಂಬ ಇಚ್ಛೆಯುಳ್ಳವರಿಗೆ ಅತ್ಯುತ್ತಮ ಅವಕಾಶ
* ಲಕ್ನೋ ವಿವಿಯಿಂದ ವೃತ್ತಿಪರರಿಗೆ ಎಂಟೆಕ್ ಕಲಿಯಲು ಅವಕಾಶ 
* ವಿವಿ ಈ ಕೋರ್ಸನ್ನು ಅರೆಕಾಲಿಕ ಎಂಟೆಕ್ ಕೋರ್ಸ್ ಎಂದು ಕರೆದಿದೆ

Lucknow University offering MTech course for professionals
Author
First Published May 16, 2022, 3:14 PM IST

ಉನ್ನತ ಶಿಕ್ಷಣ ಪಡೆಯುವ ಆಸೆ ಇದ್ರೂ ಅದು ಈಡೇರಲಿಲ್ಲ. ಇಂಜಿನಿಯರಿಂಗ್ (Engineering) ಮುಗಿಯುತ್ತಲೇ ಐಟಿ ಫೀಲ್ಡ್ ಗೆ ಬಂದಿ ಬಿಟ್ಟೆ. ಹೈಯರ್ ಸ್ಟಡೀಸ್ ಮಾಡುವ ಅವಕಾಶವೇ ನನಗೆ ಸಿಗಲಿಲ್ಲ. ಈಗೇನಿದ್ರೂ ಆಫೀಸ್- ಮನೆ ಎಂಬಂತಹ ಸ್ಥಿತಿ‌ ನಿರ್ಮಾಣವಾಗಿದೆ ಅಂತ ಕೊರಗುತ್ತಿದ್ದೀರಾ?. ಇನ್ಮುಂದೆ ಈ ಥರಾ ಯೋಚಿಸೋಕೆ ಹೋಗ್ಬೇಡಿ. ಕೆಲಸ ಮಾಡ್ಕೊಂಡೇ ನೀವು ಓದುವ ಮೂಲಕ ನಿಮ್ಮ ಕನಸು ನನಸಾಗಿಸಿಕೊಳ್ಳಬಹುದು.. ಅತ್ತ ಕೆಲಸನೂ ಬಿಡಂಗಿಲ್ಲ, ಇತ್ತ ಉನ್ನತ ಶಿಕ್ಷಣವನ್ನೂ ಪಡೆಯಲು ಅವಕಾಶವಿದೆ. ಅದು ನೇರವಾಗಿ ಕ್ಲಾಸ್ ಗೆ ಹೋಗಿ ಕಲಿಯಬಹುದು. ಇದ್ಹೇಗೆ ಸಾಧ್ಯ ಅಂತೀರಾ.? ಇಂಥದ್ದೊಂದು ವಿನೂತನ ಪ್ರಯತ್ನಕ್ಕೆ ಲಕ್ನೋ ವಿಶ್ವವಿದ್ಯಾಲಯ (Lucknow Universities) ಕೈಹಾಕಿದೆ.

ಲಕ್ನೋ ವಿಶ್ವವಿದ್ಯಾನಿಲಯವು (Lucknow Universities) ಕೆಲಸ ಮಾಡುವ ವೃತ್ತಿಪರರಿಗೆ ಪಾರ್ಟ್ ಟೈಮ್ MTech ಕೋರ್ಸ್ ನೀಡಲಿದೆ. ಪಾರ್ಟ್ ಟೈಮ್ ಪಿಎಚ್‌ಡಿ (PhD) ಕಾರ್ಯಕ್ರಮದ ಯಶಸ್ಸನ್ನು ಪರಿಗಣಿಸಿದ ನಂತರ ಇತ್ತೀಚೆಗೆ ನಡೆದ ಸಭೆಯಲ್ಲಿ ಎಂಜಿನಿಯರಿಂಗ್ ಅಧ್ಯಾಪಕರ ಮಂಡಳಿಯು ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ. ಇನ್ನು ಶೈಕ್ಷಣಿಕ ಮಂಡಳಿಯ ಅನುಮೋದನೆ ಪಡೆದ ನಂತರ ಶೀಘ್ರದಲ್ಲೇ ಆನ್‌ಲೈನ್ ಅರ್ಜಿಗಳು  ಪ್ರಾರಂಭವಾಗುತ್ತವೆ." ಲಕ್ನೋ ವಿಶ್ವವಿದ್ಯಾನಿಲಯವು ಕೆಲಸ ಮಾಡುವ ವ್ಯಕ್ತಿಗೆ ಉನ್ನತ ಶಿಕ್ಷಣವನ್ನು ಸುಲಭಗೊಳಿಸಲು M.Tech ಅರೆಕಾಲಿಕ ಕೋರ್ಸ್ ಅನ್ನು ಪ್ರಾರಂಭಿಸಿದೆ" ಎಂದು ಲಕ್ನೋ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಫ್ಯಾಕಲ್ಟಿ ಟ್ವೀಟ್ ಮಾಡಿದ್ದಾರೆ.

ಪೆಟ್ರೋಲಿಯಂ ಇಂಜಿನಿಯರಿಂಗ್ ಓದಿದವರಿಗೆ ಉದ್ಯೋಗಾವಕಾಶಗಳು

ಪಾರ್ಟ್ ಟೈಮ್ (ಅರೆಕಾಲಿಕ) ಎಂಟೆಕ್ (MTech) ಕಾರ್ಯಕ್ರಮವನ್ನು ಆರು ಸೆಮಿಸ್ಟರ್‌ಗಳಿಗೆ ಕಲಿಸಲಾಗುತ್ತದೆ. ಈ ಕಾರ್ಯಕ್ರಮದ ಅವಧಿ ಐದು ವರ್ಷಗಳು. ವಾರಾಂತ್ಯದಲ್ಲಿ ತಡವಾದ ಸಮಯದಲ್ಲಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುವ ಎಂಜಿನಿಯರ್‌ಗಳು (Engineers) ಮತ್ತು ಶಿಕ್ಷಕರಂತಹ ಕೆಲಸ ಮಾಡುವ ವೃತ್ತಿಪರರಿಗಾಗಿ ಈ ಕೋರ್ಸ್ ಅನ್ನು ಉದ್ದೇಶಿಸಲಾಗಿದೆ ಎಂದು ವರದಿ ಹೇಳಿದೆ. 

ಪಾರ್ಟ್ ಟೈಮ್ ಎಂ.ಟೆಕ್ ಕೋರ್ಸ್‌ ನ ತರಗತಿಗಳ ಸಮಯವು ಶನಿವಾರ ಮತ್ತು ಭಾನುವಾರದಂದು ಸಂಜೆ 6 ರಿಂದ ರಾತ್ರಿ 9 ರವರೆಗೆ ಇರುತ್ತದೆ. ಬಿಟೆಕ್ (BTech ಅಥವಾ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ (BE) ಪದವಿ ಹೊಂದಿರುವ ಕೆಲಸ ಮಾಡುವ ವೃತ್ತಿಪರರು ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು. ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಅಧ್ಯಾಪಕರು,  ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪವರ್ ಸಿಸ್ಟಮ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಡೊಮೇನ್‌ನಲ್ಲಿ ಕೈಗಾರಿಕಾ ಮತ್ತು ಉತ್ಪಾದನಾ ಎಂಜಿನಿಯರಿಂಗ್ ಬೋಧಿಸುತ್ತಾರೆ. ವರದಿಯ ಪ್ರಕಾರ ಪ್ರತಿ ಬ್ಯಾಚ್ 20 ಸೀಟುಗಳನ್ನು ಹೊಂದಿರುತ್ತದೆ.

ಹರಿಯಾಣ ಸರ್ಕಾರದಿಂದ 3 ಲಕ್ಷ ಟ್ಯಾಬ್ ವಿತರಣೆ

ಅಭ್ಯರ್ಥಿಗಳು ತಮ್ಮ ಸಂಸ್ಥೆಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (NOC) ಸಲ್ಲಿಸಬೇಕು. ಪ್ರವೇಶ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ. ಅರೆಕಾಲಿಕ MTech ಕಾರ್ಯಕ್ರಮದ ಪ್ರತಿ ಸೆಮಿಸ್ಟರ್‌ನ ಶುಲ್ಕವು ರೂ 40,000 ಆಗಿರುತ್ತದೆ. ಕೆಲವು ಕಾರಣಗಳಿಂದ ತಮ್ಮ ಪದವಿಯ ನಂತರ ಉನ್ನತ ವ್ಯಾಸಂಗವನ್ನು ಮುಂದುವರಿಸಲು ಸಾಧ್ಯವಾಗದ ಎಂಜಿನಿಯರ್‌ಗಳು ಮತ್ತು ವೃತ್ತಿಪರರಿಗೆ ಈ ಕಾರ್ಯಕ್ರಮವು ಪ್ರಯೋಜನಕಾರಿಯಾಗಿದೆ. ಆರಂಭಿಕ ಬ್ಯಾಚ್ 20 ಸೀಟುಗಳನ್ನು ಹೊಂದಿರುತ್ತದೆ. ತರಗತಿಗಳ ಸಮಯವು ಶನಿವಾರ ಮತ್ತು ಭಾನುವಾರದಂದು ಸಂಜೆ 6 ರಿಂದ ರಾತ್ರಿ 9 ರವರೆಗೆ ಇರುತ್ತದೆ. ಕೋರ್ಸ್‌ನಲ್ಲಿ ಆಸಕ್ತಿಯುಳ್ಳವರು ತಮ್ಮ ಸಂಸ್ಥೆಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್‌ಒಸಿ) ಸಲ್ಲಿಸಬೇಕಾಗುತ್ತದೆ. ಪ್ರವೇಶ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ವಿದ್ಯಾರ್ಥಿಗಳ ಆಯ್ಕೆಯನ್ನು ಮಾಡಲಾಗುತ್ತದೆ. ಅರೆಕಾಲಿಕ MTech ಕಾರ್ಯಕ್ರಮದ ಪ್ರತಿ ಸೆಮಿಸ್ಟರ್‌ನ ಶುಲ್ಕವು ರೂ 40,000 ಆಗಿರುತ್ತದೆ.

Follow Us:
Download App:
  • android
  • ios