ಕರ್ನಾಟಕದಲ್ಲಿ 4398 ಸರ್ಕಾರಿ ಶಾಲೆಗಳಿಗೆ ಮುಚ್ಚುವ ಆತಂಕ..!
2022ರಲ್ಲಿ ಶೂನ್ಯದಿಂದ 10 ಮಕ್ಕಳಿರುವ ಶಾಲೆಗಳ ಸಂಖ್ಯೆ 1810 ಇತ್ತು. 2023ರಲ್ಲಿ ಅದು 3646 ಏರಿಕೆಯಾಯ್ತು, ಈ ಸಂಖ್ಯೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 4398ಕ್ಕೆ ಏರಿಕೆಯಾಗಿದೆ. ಅಂದರೆ ಒಂದೇ ವರ್ಷದಲ್ಲಿ 700ಕ್ಕೂ ಹೆಚ್ಚು ಶಾಲೆಗಳಲ್ಲಿ ದಾಖಲಾತಿ ತೀವ್ರ ಕುಸಿತಕ್ಕೆ ಒಳಗಾಗಿದೆ. ಅದೇ ರೀತಿ 11ರಿಂದ 20 ಮಕ್ಕಳಿರುವ ಶಾಲೆಗಳ ಸಂಖ್ಯೆ ಈ ಸಾಲಿನಲ್ಲಿ 7,810ಕ್ಕೆ ಏರಿಕೆಯಾಗಿದ್ದರೆ, 11ರಿಂದ 30 ಮಕ್ಕಳಿರುವ ಶಾಲೆಗಳ ಸಂಖ್ಯೆ 5362ಕ್ಕೆ ಹೆಚ್ಚಾಗಿದೆ. ಇವೆಲ್ಲವೂ ಪ್ರಾಥಮಿಕ ಶಾಲೆಗಳಾಗಿವೆ.
ಲಿಂಗರಾಜು ಕೋರಾ
ಬೆಂಗಳೂರು(ಆ.03): ರಾಜ್ಯದಲ್ಲಿರುವ 46 ಸಾವಿರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪೈಕಿ ಸುಮಾರು 18 ಸಾವಿರ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ 30 ದಾಟಿಲ್ಲ. ಆಶ್ಚರ್ಯವೆಂದರೆ ಈ ಪೈಕಿ 4300 ಕ್ಕೂ ಹೆಚ್ಚು ಶಾಲೆಗಳಲ್ಲಿ 10ಕ್ಕಿಂತ ಕಡಿದು ಮಕ್ಕಳಿದ್ದಾರೆ. ಇದರಲ್ಲಿ ಶೂನ್ಯ ದಾಖಲಾತಿಯ ಶಾಲೆಗಳೂ ಇವೆ.
ಇದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಇತ್ತೀಚೆಗೆ ಮುಕ್ತಾಯಗೊಂಡ ಮುಂಗಾರು ಅಧಿವೇಶನದಲ್ಲಿ ಮಂಡಿಸಿರುವ ಅಧಿಕೃತ ಮಾಹಿತಿ. ವಿಪರ್ಯಾಸ ಎಂದರೆ ಈ ರೀತಿ ಅತೀ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳು ಇಲ್ಲದೆ ಇರುವ ಒಂದೂ ಜಿಲ್ಲೆ ರಾಜ್ಯದಲ್ಲಿ ಇಲ್ಲ. ಈ ಹಿಂದೆ 10ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಸಮೀಪದ ಮತ್ತೊಂದು ಶಾಲೆಯಲ್ಲಿ ವಿಲೀನ ಮಾಡುವ ಮೂಲಕ ಒಂದು ಶಾಲೆಯನ್ನು ಸರ್ಕಾರ ಶಾಶ್ವತವಾಗಿ ಮುಚ್ಚುತ್ತಿತ್ತು. ಹೀಗಾಗಿ ಇದೀಗ 4300 ಶಾಲೆಯ ವಿದ್ಯಾರ್ಥಿಗಳು, ಪೋಷಕರಿಗೆ ಅದೇ ಆತಂಕ ಎದುರಾಗಿದೆ.
ಶಾಲೆಗಳಿಗೆ ಕಳಪೆ ಗುಣಮಟ್ಟದ ಅಕ್ಕಿ ನೀಡಿಲ್ಲ : ಸಚಿವ ಕೆ.ಎಚ್.ಮುನಿಯಪ್ಪ ಸ್ಪಷ್ಟನೆ
ದಾಖಲಾತಿ ಭಾರೀ ಕುಸಿತ:
2022ರಲ್ಲಿ ಶೂನ್ಯದಿಂದ 10 ಮಕ್ಕಳಿರುವ ಶಾಲೆಗಳ ಸಂಖ್ಯೆ 1810 ಇತ್ತು. 2023ರಲ್ಲಿ ಅದು 3646 ಏರಿಕೆಯಾಯ್ತು, ಈ ಸಂಖ್ಯೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 4398ಕ್ಕೆ ಏರಿಕೆಯಾಗಿದೆ. ಅಂದರೆ ಒಂದೇ ವರ್ಷದಲ್ಲಿ 700ಕ್ಕೂ ಹೆಚ್ಚು ಶಾಲೆಗಳಲ್ಲಿ ದಾಖಲಾತಿ ತೀವ್ರ ಕುಸಿತಕ್ಕೆ ಒಳಗಾಗಿದೆ. ಅದೇ ರೀತಿ 11ರಿಂದ 20 ಮಕ್ಕಳಿರುವ ಶಾಲೆಗಳ ಸಂಖ್ಯೆ ಈ ಸಾಲಿನಲ್ಲಿ 7,810ಕ್ಕೆ ಏರಿಕೆಯಾಗಿದ್ದರೆ, 11ರಿಂದ 30 ಮಕ್ಕಳಿರುವ ಶಾಲೆಗಳ ಸಂಖ್ಯೆ 5362ಕ್ಕೆ ಹೆಚ್ಚಾಗಿದೆ. ಇವೆಲ್ಲವೂ ಪ್ರಾಥಮಿಕ ಶಾಲೆಗಳಾಗಿವೆ.
ಹಾಸನ ನಂ.1:
ಈ ಪೈಕಿ ಹಾಸನದಲ್ಲಿ ಅತಿ ಹೆಚ್ಚು 490 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ, 696 ಶಾಲೆಗಳಲ್ಲಿ 20ಕ್ಕಿಂತ ಕಡಿಮೆ ಮತ್ತು 347 ಶಾಲೆಗಳಲ್ಲಿ 30ಕ್ಕಿಂತ ಕಡಿಮೆ ದಾಖಲಾತಿ ಇದೆ. ನಂತರದ ಸ್ಥಾನ ತುಮ ಕೂರು ಕಡಿಮೆ ದಾಖಲಾತಿ ಶಾಲೆಗಳ ಸಂಖ್ಯೆ 1300ರಷ್ಟಿದೆ. ಸಮಾಧಾನಕರ ಸಂಗತಿ ಎಂದರೆ ಪ್ರೌಢ ಶಾಲೆಗಳ ಪೈಕಿ ಕಡಿಮೆ ದಾಖಲಾತಿ ಶಾಲೆಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಕೇವಲ 2 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ, 10 ಶಾಲೆಗಳಲ್ಲಿ 11ರಿಂದ 20 ಮಕ್ಕಳು ಹಾಗೂ 35 ಶಾಲೆಗಳಲ್ಲಿ 21ರಿಂದ 30 ಮಕ್ಕಳಿದ್ದಾರೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮೇಲ್ಮನೆ ಯಲ್ಲಿ ಉತ್ತರ ಮಂಡಿಸಿದ್ದಾರೆ.
ಸರ್ಕಾರಿ ಶಾಲಾ ಮಕ್ಕಳಿಗೆ ವಾರಕ್ಕೆ 2 ದಿನ ಬದಲು 6 ದಿನ ಮೊಟ್ಟೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ
ವಲಸೆ, ವೈಯಕ್ತಿಕ ಕಾರಣದಿಂದ ದಾಖಲಾತಿ ಕುಸಿತ: ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಳಕ್ಕೆ ಸರ್ಕಾರ ಉಚಿತ ಪ್ರವೇಶ, ಉಚಿತ ಸಮವಸ್ತ್ರ, ಪಠ್ಯ ಪುಸ್ತಕ, ತೂ, ಸಾಕ್ಸ್, ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಬಾಲಕ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಅಷ್ಟೇ ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಸಾವಿರಾರು ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಆರಂಭ, ಪ್ರತೀ ವರ್ಷ 35ರಿಂದ 40 ಸಾವಿರ ಅತಿಥಿ ಶಿಕ್ಷಕರ ನೇಮಕ ಸೇರಿದಂತೆ ಹತ್ತಾರು ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರೂ ದಾಖಲಾತಿ ಪ್ರಮಾಣ ಮಾತ್ರ ಸುಧಾರಿಸುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಲಕ್ಷಾಂತರ ಪೋಷಕರು ಖಾಸಗಿ ಶಾಲೆಗಳಿಂದ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ವರ್ಗಾವಣೆ ಪಡೆದಿದ್ದರಿಂದ 2020-21 ಹಾಗೂ 2021-22ನೇ ಕಂಡಿತ್ತು. ನಂತರ ಮತ್ತೆ ಕುಸಿಯಲಾರಂಭಿಸಿದೆ. ಅದರಲ್ಲೂ ದಾಖಲಾತಿ ಬೆರಳೆಣಿಕೆಯ ಮಟ್ಟಕ್ಕೆ ಕುಸಿಯುತ್ತಿರುವ ಶಾಲೆಗಳು ಹೆಚ್ಚುತ್ತಿದ್ದು ಅವುಗಳು ಬರುವ ದಿನಗಳಲ್ಲಿ ವಿಲೀನದ ಹೆಸರಲ್ಲಿ ಮುಚ್ಚಿಹೋಗುವ ಆತಂಕಕಂಡುಬರುತ್ತಿದೆ ಎನ್ನುತ್ತಾರೆ ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರು, ಇಷ್ಟೆಲ್ಲದ ಮಧ್ಯೆ, ದಾಖಲಾತಿ ಕುಸಿತವನ್ನು ಒಪ್ಪಿಕೊಂಡಿರುವ ಶಿಕ್ಷಣ ಇಲಾಖೆಯು ಇದಕ್ಕೆ ಪ್ರಮುಖವಾಗಿ ಎರಡು ಕಾರಣಗಳನ್ನು ನೀಡಿದೆ. ಪ್ರತೀ ವರ್ಷ ವಿದ್ಯಾರ್ಥಿಗಳ ದಾಖಲಾತಿ ಕುಸಿತಕ್ಕ ಪೋಷಕರು ಆರ್ಥಿಕ ಸಂಕಷ್ಟದಿಂದ ವಲಸೆ ಹೋಗುವುದು ಎಂದು ಹೇಳಿದೆ.
10ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆ
ವರ್ಷ: ಶಾಲೆ ಸಂಖ್ಯೆ
2022 1800
2023 3646
2024 4396