ಕೊರೋನಾ ಕಾಟ: 5-10 ಕ್ಲಾಸ್‌ ಮಕ್ಕಳಿಗೆ ಚಂದನ, FMನಲ್ಲಿ ಪಾಠ

* ಆನ್‌ಲೈನ್‌, ಆಫ್‌ಲೈನ್‌ ಪಠ್ಯ ಬೋಧನೆಗೆ ಮಾರ್ಗಸೂಚಿ
* ಶಿಕ್ಷಕರು ಪುಟ್ಟ ವಿಡಿಯೋ ಮಾಡಿ ಮಕ್ಕಳಿಗೆ ಕಳುಹಿಸಬೇಕು
* ಜು.1ರಂದು ಶಾಲೆ ಪ್ರಾರಂಭೋತ್ಸವ
 

lesson on Chandana and FM for 5th to 10th Students in Karnataka due to Covid19 grg

ಬೆಂಗಳೂರು(ಜೂ.12): ಇತ್ತೀಚೆಗಷ್ಟೇ 2021-22ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯು ಇದೀಗ 5ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕೋವಿಡ್‌ ಹಿನ್ನೆಲೆಯಲ್ಲಿ ಭೌತಿಕ ತರಗತಿ ಬದಲು ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ಪಠ್ಯ ಬೋಧನೆಗೆ ಮಾರ್ಗಸೂಚಿ ಪ್ರಕಟಿಸಿದೆ.

ಕಳೆದ ವರ್ಷದಂತೆ ಈ ವರ್ಷವೂ ದೂರದರ್ಶನ ಚಂದನ ವಾಹಿನಿಯಲ್ಲಿ ‘ಸಂವೇದಾ’ ಕಾರ್ಯಕ್ರಮದ ಮೂಲಕ 1662 ವಿಡಿಯೋ ಪಾಠ ಬೋಧನಾ ನಡೆಯಲಿದೆ. ಎಫ್‌ಎಂ ರೇಡಿಯೋದಲ್ಲಿ ಆಡಿಯೋ ಪಾಠಗಳ ಪ್ರಸಾರ ನಡೆಯಲಿದೆ. ಕೇಂದ್ರ ಸರ್ಕಾರದ ದೀಕ್ಷಾ ಆ್ಯಪ್‌ನಲ್ಲಿ 1ರಿಂದ 10ನೇ ತರಗತಿ ಮಕ್ಕಳ ಪಠ್ಯಕ್ಕೆ ಸಂಬಂಧಿಸಿದ 22 ಸಾವಿರಕ್ಕೂ ಹೆಚ್ಚು ಕಂಟೆಂಟ್‌ಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಈ ಆ್ಯಪ್‌ನಲ್ಲಿ ಮೌಲ್ಯವರ್ಧಿತ ಪಠ್ಯಪುಸ್ತಕಗಳೂ ದೊರೆಯಲಿವೆ. ಅವುಗಳೆಲ್ಲವನ್ನೂ ಡೌನ್‌ಲೋಡ್‌ ಮಾಡಿಕೊಂಡು ಪಾಠ ಅಭ್ಯಾಸ ಮಾಡಬಹುದು.

ಜತೆಗೆ ಶಿಕ್ಷಕರು ಪಠ್ಯ ಬೋಧನೆಯ ಪುಟ್ಟ ವಿಡಿಯೋ ಮಾಡಿ ಮಕ್ಕಳ ಪೋಷಕರಿಗೆ ಹಂಚಿಕೊಳ್ಳಬಹುದು. ತರಗತಿವಾರು ಮಕ್ಕಳ ಪೋಷಕರ ವಾಟ್ಸ್‌ಆ್ಯಪ್‌ ಗುಂಪುಗಳನ್ನು ಮಾಡಿ ಅವರನ್ನು ನಿಗದಿತವಾಗಿ ಸಂಪರ್ಕಿಸಿ ಮಕ್ಕಳ ಕಲಿಕೆಗೆ ಅಗತ್ಯ ಮಾರ್ಗದರ್ಶನ ನೀಡಬೇಕು. ದೂರದರ್ಶನ ರೇಡಿಯೋ ಪಾಠ ಬೋಧನಾ ವೇಳಾಪಟ್ಟಿಯನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಇಲಾಖೆ ತಿಳಿಸಿದೆ.

ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಸಂಪರ್ಕಿಸಿ ಮೊಬೈಲ್‌ ಫೋನ್‌, ಇಂಟರ್ನೆಟ್‌, ರೇಡಿಯೋ, ದೂರದರ್ಶನ ಸೇರಿದಂತೆ ಮತ್ತಿತರ ತಾಂತ್ರಿಕ ಸೌಲಭ್ಯ ಮಾಹಿತಿ ಪಡೆದು, ಅವುಗಳ ಮೂಲಕ ಹೇಗೆ ಶಿಕ್ಷಣ ಪಡೆಯಬೇಕು ಎಂಬ ಬಗ್ಗೆ ಅವರಿಗೆ ಮಾರ್ಗದರ್ಶನ ನೀಡಬೇಕು ಶಿಕ್ಷಕರಿಗೆ ಇಲಾಖೆ ಸೂಚಿಸಿದೆ.

ಪಿಯು ವಿದ್ಯಾರ್ಥಿಗಳಿಗೆ ಶಾಕ್, ಪರೀಕ್ಷೆ ಬರೆಯಲೇಬೇಕು

ಯಾವುದೇ ತಾಂತ್ರಿಕ ಸೌಲಭ್ಯವಿಲ್ಲದ ವಿದ್ಯಾರ್ಥಿಗಳ ಮನೆಯ ಸಮೀಪದ ಸಹೃದಯಿ ವ್ಯಕ್ತಿ ಗುರುತಿಸಿ ಅವರ ಬಳಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಳ್ಳಲು ಅನುವಾಗುವಂತೆ ಶಿಕ್ಷಕರು ಮನವೊಲಿಸುವಂತೆ ಶಿಕ್ಷಕರಿಗೆ ಸೂಚಿಸಿದೆ.
ಪ್ರತಿ ವಿದ್ಯಾರ್ಥಿಯ ವಿಷಯವಾರು ಕೃತಿ ಸಂಪುಟ (ಚೈಲ್ಡ್‌ ಪ್ರೊಫೈಲ್‌) ನಿರ್ವಹಣೆ ಮಾಡಿ, ಮೌಲ್ಯಮಾಪನ ಮಾಡಬೇಕು. ಇದರ ವಿವರವನ್ನು ಕಡ್ಡಾಯವಾಗಿ ವಿದ್ಯಾರ್ಥಿ ಸಾಮರ್ಥ್ಯ ಟ್ರಾಕಿಂಗ್‌ ವ್ಯವಸ್ಥೆ (ಎಸ್‌ಎಟಿಎಸ್‌) ತಂತ್ರಾಂಶದಲ್ಲಿ ಅಳವಡಿಸಬೇಕು ಎಂದು ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.

ಜು.1ರಂದು ಶಾಲೆ ಪ್ರಾರಂಭೋತ್ಸವ

ಜೂ.15ರಿಂದ 30ರವರೆಗೆ ಶಾಲೆ ಪ್ರಾರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಜು.1ರಂದು ಶಾಲೆ ಪ್ರಾರಂಭೋತ್ಸವ ನಡೆಸಬೇಕು. ನಂತರ ಜು.30ರವರೆಗೆ ಸೇತುಬಂಧ ಕಾರ್ಯಕ್ರಮ ನಡೆಸಬೇಕು. ಆಗಸ್ಟ್‌ 1ರಿಂದ ತರಗತಿವಾರು ಪಠ್ಯವಸ್ತು ಬೋಧನೆ ಪ್ರಾರಂಭಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
 

Latest Videos
Follow Us:
Download App:
  • android
  • ios