ಬೆಂಗಳೂರು(ಜ.06): ಅಖಿಲ ಭಾರತೀಯ ಶಿಕ್ಷಣ ಪರಿಷತ್ತಿನ ಆದೇಶದ ಅನ್ವಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಹಂಚಿಕೆಯಾಗದೆ ಉಳಿಸಿರುವ ಎಂಜಿನಿಯರಿಂಗ್‌ ಸೀಟುಗಳ ಪ್ರವೇಶಕ್ಕೆ ಕೊನೆಯ ಸುತ್ತಿನ ಸೀಟು ಹಂಚಿಕೆ ಮಾಡಲು ನಿರ್ಧರಿಸಿದೆ. ಇದರ ವೇಳಾಪಟ್ಟಿಯನ್ನು ಕೆಇಎ ವೆಬ್‌ಸೈಟ್‌ನಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳನ್ನು ರದ್ದುಪಡಿಸಿಕೊಳ್ಳಬಯಸುವವರು ಜ.6 ರಿಂದ 8ರೊಳಗೆ ರದ್ದು ಮಾಡಿಕೊಂಡಲ್ಲಿ ದಂಡ ರೂಪದಲ್ಲಿ 5 ಸಾವಿರ ಪಾವತಿಸಬೇಕು.

ಕಾಲೇಜ್‌ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್!

ಒಂದು ವೇಳೆ ಎರಡನೇ ಮುಂದುವರೆದ ಸುತ್ತಿನ ಸೀಟನ್ನು ಕೊನೆಯ ಸೀಟು ಹಂಚಿಕೆಯ ನಂತರ ರದ್ದುಪಡಿಸಿದ್ದಲ್ಲಿ ಅಂತಹ ಅಭ್ಯರ್ಥಿಗಳು ಸರ್ಕಾರದ ನಿಯಮದಂತೆ ಮೊದಲ ವರ್ಷದ ಶುಲ್ಕ ಮತ್ತು ಐದು ಪಟ್ಟು ಶುಲ್ಕವನ್ನು ದಂಡ ರೂಪದಲ್ಲಿ ಪಾವತಿಸಬೇಕಿರುತ್ತದೆ.

ಸೀಟು ರದ್ದು ಮಾಡಿಕೊಳ್ಳುವ ಅರ್ಜಿ ಕೆಇಎ ವೆಬ್‌ಸೈಟ್‌ನಲ್ಲಿ ದೊರೆಯಲಿದೆ. ಅಭ್ಯರ್ಥಿಗಳು ಸೂಚನೆಗಳನ್ನು ಓದಿಕೊಂಡು ಆನಂತರ ಮುಂದುವರೆಯುವಂತೆ ಕೆಇಎ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಕೆಇಎ ವೆಬ್‌ಸೈಟ್‌ kಛಿa.ka್ಟ.್ಞಜ್ಚಿ ವೀಕ್ಷಿಸಬಹುದು ಎಂದು ತಿಳಿಸಿದೆ.