ಕಾಲೇಜ್ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್!
ಶಾಲೆ ಮತ್ತು ಕಾಲೇಜಿನಿಂದ ಹೊರಗುಳಿಯುವ ವಿದ್ಯಾರ್ಥಿಗಳನ್ನು ಮರಳಿ ಕರೆ ತರಲು ಎಲ್ಲ ಸರ್ಕಾರಗಳು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿವೆ. ಅದರಲ್ಲೂ ಹೆಣ್ಣುಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಅನೇಕ ಕಾರ್ಯಕ್ರಮಗಳು ದೇಶದಲ್ಲಿ ಜಾರಿಯಲ್ಲಿವೆ. ಇದೀಗ ಅಸ್ಸಾಮ್ ಸರ್ಕಾರ ವಿನೂತನವಾದ ಯೋಜನೆಯನ್ನು ಜಾರಿಗೆ ತರಲು ಹೊರಟಿದೆ.
ಮಕ್ಕಳನ್ನು ಶಾಲೆಗೆ ಕರೆತರಲು ಸರ್ಕಾರಗಳು ನಾನಾ ಕಸರತ್ತು ಮಾಡುತ್ತವೆ. ಉಚಿತವಾಗಿ ಪುಸ್ತಕ , ಬ್ಯಾಗ್, ಸಮವಸ್ತ್ರ ವಿತರಣೆ ಮಾಡುತ್ತವೆ. ಬಿಸಿಯೂಟ, ಹಾಲು- ಮೊಟ್ಟೆ ವಿತರಿಸೋ ಮೂಲಕ ಮಕ್ಕಳ ಆರೋಗ್ಯದ ಮೇಲೂ ನಿಗಾ ವಹಿಸುತ್ತವೆ. ಹೈಸ್ಕೂಲ್ ಹಂತದ ಮಕ್ಕಳಿಗೆ ಸೈಕಲ್ ವಿತರಣೆ ಮಾಡುತ್ತವೆ. ಅದರಲ್ಲೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸರ್ಕಾರಗಳು ಹೆಚ್ಚು ಒತ್ತು ನೀಡುತ್ತವೆ. ಇದೀಗ ಅಸ್ಸಾಂ ಸರ್ಕಾರ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದು, ಕಾಲೇಜು ಓದುವ ವಿದ್ಯಾರ್ಥಿನಿಯರಿಗೆ ಸ್ಕೂಟರ್ ನೀಡಲು ನಿರ್ಧರಿಸಿದೆ.
6 ತಿಂಗಳವರೆಗೆ ಮಕ್ಕಳ ಮನೆಗೇ ಪಡಿತರ, ಯಾವ ರಾಜ್ಯದಲ್ಲಿ?
ನಿರಂತರವಾಗಿ ತರಗತಿಗಳಿಗೆ ಹಾಜರಾಗುವ ಹೆಣ್ಮಕ್ಕಳಿಗೆ ಉಚಿತವಾಗಿ ಸ್ಕೂಟರ್ ವಿತರಣೆ ಮಾಡೋದಾಗಿ ಅಸ್ಸಾಂ ಶಿಕ್ಷಣ ಸಚಿವ ಹೀಮಾಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ. ಸ್ಕೂಟರ್ ಅಷ್ಟೇ ಅಲ್ಲ, ಇನ್ಸೇಂಟಿವ್ ಕೂಡ ಕೊಡೋದಾಗಿ ಸಚಿವರು ಹೇಳಿದ್ದಾರೆ.
ಪ್ರಗ್ಯಾನ್ ಭಾರತಿ ಯೋಜನೆಯಡಿ ಸ್ಟೇಟ್ ಬೋರ್ಡ್ ನ 11ನೇ ತರಗತಿ ಪಾಸಾಗಿರುವ ೧೨ನೇ ತರಗತಿಯ ವಿದ್ಯಾರ್ಥಿಗಳಿಗೆ ಈಗಾಗಲೇ ಅಸ್ಸಾಂ ಸರ್ಕಾರ ೨೨ ಸಾವಿರ ಸ್ಕೂಟರ್ ಗಳನ್ನು ವಿತರಣೆ ಮಾಡ್ತಾ ಇದೆ ಎಂದು ಸಚಿವರು, ಶಿವಸಾಗರ್‌ನಲ್ಲಿ ತಿಳಿಸಿದರು.ವಿದ್ಯಾರ್ಥಿನಿಯರಿಗೆ ಸ್ಕೂಟರ್ ನೀಡುವ ಯೋಜನೆಗೆ ಅಸ್ಸಾಮ್ ರಾಜ್ಯ ಸರ್ಕಾರ ವರ್ಷಕ್ಕೆ 144 ಕೋಟಿ ರೂಪಾಯಿ ವೆಚ್ಚ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ..
11 ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಸ್ಕೂಟರ್ ನೀಡಲು ಸರ್ಕಾರ ಮುಂದಾಗಿದೆ. ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆದುಕೊಳ್ಳುವುದು ಮುಖ್ಯವಾಗಿದೆ. ಹಾಗಾಗಿ, ಒಂದು ಲಕ್ಷ ವಿದ್ಯಾರ್ಥಿಗಳಿಗೆ ಬೇಕಾದರೂ ಸ್ಕೂಟರ್ ವಿತರಿಸಲು ಸರ್ಕಾರ ಬದ್ಧವಾಗಿದೆಯಂತೆ. ಇನ್ನು 2018-19ನೇ ಸಾಲಿನ ಲ್ಲಿ 12ನೇ ತರಗತಿ ಪಾಸ್ ಆಗಿರುವವರಿಗೂ ಸೈಕಲ್ ನೀಡೋದಾಗಿ ಶಿಕ್ಷಣ ಸಚಿವರು ತಿಳಿಸಿದರು.
ಎಎಐನಲ್ಲಿ 368 ಮ್ಯಾನೇಜರ್, ಜ್ಯೂ. ಎಕ್ಸಿಕ್ಯುಟಿವ್ ಹುದ್ದೆಗಳಿಗ ಅರ್ಜಿ ಆಹ್ವಾನ
ಶಾಲೆಗೆ ಬಂದರೆ ದಿನಕ್ಕೆ ನೂರು ರೂ.
ಅಸ್ಸಾಮ್‌ನಲ್ಲಿ ಶಾಲಾ ಹಂತದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಪ್ರೋತ್ಸಾಹ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಶಾಲಾ ಹಂತದಲ್ಲೇ ಅನೇಕ ಹೆಣ್ಣು ಮಕ್ಕಳು ಡ್ರಾಪೌಟ್ ಆಗುವುದರಿಂದ ಅವರ ಹಾಜರಾತಿಯನ್ನುಹೆಚ್ಚಿಸುವುದು ಅಗತ್ಯವಾಗಿ. ಈ ಹಿನ್ನೆಲೆಯಲ್ಲಿ ನಿರಂತರವಾಗಿ ತರಗತಿಗೆ ಬರುವ ಶಾಲಾ ಹೆಣ್ಣು ಮಕ್ಕಳಿಗೆ ಆರ್ಥಿಕ ಪ್ರೋತ್ಸಾಹ ನೀಡಲಿದೆ. ಪ್ರತಿ ದಿನ ಶಾಲೆಗೆ ಬರುವ ಮಕ್ಕಳಿಗೆ ದಿನಕ್ಕೆ 100 ರೂಪಾಯಿ ನೀಡುವ ಯೋಜನೆ ಇದಾಗಿದೆ. ಶಾಲಾ ಹಂತದಿಂದ ಪದವಿ ಪೂರ್ವದವರೆಗೂ ಎಲ್ಲ ಹೆಣ್ಣು ಮಕ್ಕಳಿಗೆ ಯೋಜನೆ ನೆರವಾಗಲಿದೆ. ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 1500, 2500 ರೂ. ಸಿಗಲಿದೆ. ಈ ತಿಂಗಳಾಂತ್ಯಕ್ಕೆ ಯೋಜನೆ ಜಾರಿಯಾಗಲಿದೆ
ಅಂದ ಹಾಗೇ ಕಳೆದ ವರ್ಷವೇ ಈ ಯೋಜನೆ ಜಾರಿಗೆ ಸರ್ಕಾರ ಮುಂದಾಗಿತ್ತು. ಆದ್ರೆ ಕೊರೊನಾ ಲಾಕ್ ಡೌನ್ ನಿಂದಾಗಿ ಅದು ಸಾಧ್ಯವಾಗಲಿಲ್ಲ ಅಂತಾರೆ ಸಚಿವರು.
ಅಸ್ಸಾಮ್ ಮಾತ್ರವಲ್ಲದೇ, ದೇಶದ ಬೇರೆ ಬೇರೆ ರಾಜ್ಯ ಸರ್ಕಾರಗಳು ಪ್ರಾಥಮಿಕ ಮತ್ತು ಮಾಧ್ಯಮವಿಕ ಹಾಗೂ ಕಾಲೇಜು ಮಟ್ಟದ ಶಿಕ್ಷಣ ಪಡೆಯುವಲ್ಲಿ ಹುಡುಗಿಯರಿಗೆ ಹೆಚ್ಚಿನ ಆದ್ಯೆತ ನೀಡುತ್ತಿವೆ. ಕೆಲವು ರಾಜ್ಯಗಳಲ್ಲಿ ಉನ್ನತ ಶಿಕ್ಷಣವನ್ನು ಸಂಪೂರಣವಾಗಿ ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಿದೆ. ನಮ್ಮ ಕರ್ನಾಟಕದಲ್ಲಿ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಶಾಲಾ ಮಟ್ಟದಲ್ಲಿ ಸೈಕಲ್ ವಿತರಣೆಯಂಥ ಕಾರ್ಯಕ್ರಮಗಳ ಮೂಲಕ ಹುಡುಗಿಯರು ಶಾಲೆಯಿಂದ ಹೊರಗುಳಿಯುವುದನ್ನು ತಪ್ಪಿಸಲಾಗುತ್ತಿದೆ. ಬೇರೆ ರಾಜ್ಯಗಳಲ್ಲಿ ಇದೇ ತೆರನಾದ ಅನೇಕ ಕಾರ್ಯಕ್ರಮಗಳನ್ನು ಅಲ್ಲಿನ ಸರ್ಕಾರಗಳು ಹಮ್ಮಿಕೊಂಡಿವೆ. ಆದರೆ, ಸ್ಕೂಟರ್ ನೀಡುವಂಥ ವಿನೂತನ ಯೋಜನೆಯನ್ನು ಪ್ರಕಟಿಸುವ ಮೂಲಕ ಅಸ್ಸಾಮ್ ಸರ್ಕಾರ ಎಲ್ಲ ರಾಜ್ಯಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದೆ ಎಂದು ಹೇಳಬಹುದು.
ಪಿಯುಸಿ ಕಾಮರ್ಸ್ ಆದ ಮೇಲೆ ಯಾವುದೆಲ್ಲ ಕಲಿಯಬಹುದು ಗೊತ್ತಾ?