Asianet Suvarna News Asianet Suvarna News

ಪಿಯುಸಿ ರಿಸಲ್ಟ್‌: ಜೇವರ್ಗಿ ಕೂಲಿ ಕಾರ್ಮಿಕನ ಮಗ ನಿಂಗಣ್ಣ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 2 ನೇ ರ್‍ಯಾಂಕ್..!

*  ಕಲಾ ವಿಭಾಗದಲ್ಲಿ ಶೇ. 99 ರಷ್ಟು ಅಂಕ ಪಡೆದು ರಾಜ್ಯಕ್ಕೆ 2 ರ್‍ಯಾಂಕ್ ಪಡೆದ ನಿಂಗಣ್ಣ
*  ಈತನ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ
*  ಈತನ ಸಾಧನೆಗೆ ಅಭಿನಂದಿಸಿದ ಕಾಲೇಜಿನ ಪ್ರಾಚಾರ್ಯ 

Labor Son Ninganna Got 2nd Rank PUC Arts in Karnataka grg
Author
Bengaluru, First Published Jun 18, 2022, 11:00 PM IST

ಕಲಬುರಗಿ(ಜೂ.18):  ಜಿಲ್ಲೆಯ ಜೇವರ್ಗಿಯಲ್ಲಿರುವ ಕದಂಬಾ ಕಾಲೇಜಿನ ವಿದ್ಯಾರ್ಥಿ ಪಿಯುಸಿ ಕಲಾ ವಿಭಾಗದಲ್ಲಿ ಶೇ. 99 ರಷ್ಟು ಅಂಕ ಪಡೆದು ರಾಜ್ಯಕ್ಕೆ 2 ರ್‍ಯಾಂಕ್ ಪಡೆದಿದ್ದಾನೆ. ಜೇವರ್ಗಿ ತಾಲೂಕಿನ ಮುರಗಾನೂರಿನ ಬಡ ಕೃಷಿ ಕೂಲಿ ಕಾರ್ಮಿಕ ಸಿದ್ದಣ್ಣ ಅಗಸರ್ ಇವರ ಪುತ್ರನಾದ ನಿಂಗಣ್ಣ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿ ಜೇವರ್ಗಿ ಕೀರ್ತಿ ಪತಾಕೆ ಎಲ್ಲೆಡೆ ಹಾರಿಸಿದ್ದಾನೆ. ಈತನ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ತನ್ನ ತಂದೆ ಸಿದ್ದಣ್ಣ, ತಾಯಿ ಭೋರಮ್ಮ ಅವರ ಕಷ್ಟಕರ ಜೀವನವನ್ನೇ ಪ್ರೇರಣೆಯನ್ನಾಗಿಸಿಕೊಂಡು ಕೂಲಿ ಮಾಡಿ ಜೀವನ ಸಾಗಿಸುವದರ ಜೊತೆಗೆ ತಮ್ಮ ಜೀವನದಂತೆ ಮಕ್ಕಳ ಜೀವನ ಕತ್ತಲೆಯಲ್ಲಿ ಬದುಕಬಾರದು ಎಂಬ ಪಾಲಕರ ಆಸೆ ಪೂರೈಸುವ ನಿಟ್ಟಿನಲ್ಲಿ ನಿಂಗಣ್ಣ ಗುರಿ ಸಾಧನೆ ಮಾಡಿದ್ದಾನೆ. ಜೇವರ್ಗಿಯ ಸರ್ಕಾರಿ ಹಾಸ್ಟೆಲ್‍ನಲ್ಲಿದ್ದುಕೊಂಡು ಈತ ಮಾಡಿದ ಸಾಧನೆ ಬೆರಗು ಮೂಡಿಸಿದೆ.

ಗದಗ: ಬಾರ್ ಬೆಂಡಿಂಗ್ ಕೆಲಸ ಮಾಡೋ ಹುಡುಗ ಪಿಯುಸಿಯಲ್ಲಿ ರಾಜ್ಯಕ್ಕೆ 2ನೇ ರ್‍ಯಾಂಕ್..!

ದ್ವಿತಿಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ರ್‍ಯಾಂಕ್ ಪಡೆದು ಕೊಂಡ ನಿಂಗಣ್ಣ ಐಎಎಸ್ ಮಾಡಿ ಸಮಾಜ ಸೇವೆ ಮಾಡಬೆಕು ಎಂಬ ಗುರಿ ಹೊಂದಿದ್ದಾನೆ. ಕೂಲಿ ಮಾಡಿ ಬದುಕು ಸಾಗಿಸಿ ಕಷ್ಟ ಅನುಭವಿಸಿರುವ  ನಮಗೆ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಲಿ ಎನ್ನುವ ಆಸೆ ನಮ್ಮದಾಗಿತ್ತು. ಮಗನ ಸಾಧನೆ ನಮಗೆ ಸಂತಸ ತಂದಿದೆ ಎಂದು ರ್‍ಯಾಂಕ್ ಬಂದ ವಿದ್ಯಾರ್ಥಿ ನಿಂಗಣ್ಣನ  ತಂದೆ ಸಿದ್ದಣ್ಣ ತಾಯಿ ಭೋರಮ್ಮ ಅವರ ಅಭಿಪ್ರಾಯವಾಗಿದೆ.  ಕಾಲೇಜಿನ ಪ್ರಾಚಾರ್ಯ ಶ್ರೀಶೈಲ ಈತನ ಸಾಧನೆಗೆ ಅಭಿನಂದಿಸಿದ್ದಾರೆ.
 

Follow Us:
Download App:
  • android
  • ios