ಗದಗ: ಬಾರ್ ಬೆಂಡಿಂಗ್ ಕೆಲಸ ಮಾಡೋ ಹುಡುಗ ಪಿಯುಸಿಯಲ್ಲಿ ರಾಜ್ಯಕ್ಕೆ 2ನೇ ರ್‍ಯಾಂಕ್..!
* ಕಲಾ ವಿಭಾಗದಲ್ಲಿ ಶಿವರಾಜ್ ರಾಜ್ಯಕ್ಕೆ ಎರಡನೇ ರ್‍ಯಾಂಕ್
* ರಿಸಲ್ಟ್ ಅನೌನ್ಸ್ ಆದಾಗ ವಿದ್ಯಾರ್ಥಿ ಬಾರ್ ಬೆಂಡಿಂಗ್ ಕೆಲಸ ಮಾಡ್ತಿದ್ದ
* ಐಎಎಸ್ ಕನಸು ಕಾಣುತ್ತಿರುವ ರ್‍ಯಾಂಕ್ ಹುಡುಗ
ವರದಿ : ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ
ಗದಗ (ಜೂ.18): ಜಿಲ್ಲೆಯ ರೋಣ ತಾಲೂಕಿನ ನೆರೇಗಲ್ ಅನ್ನದಾನೇಶ್ವರ ಪಿಯು ಕಾಲೇಜ್ ವಿದ್ಯಾರ್ಥಿ ಶಿವರಾಜ್ ಡಿ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಜಿಲ್ಲೆಯೆ ಹೆಮ್ಮೆ ಪಡುವಂತೆ ಮಾಡಿದ್ದಾನೆ..
ಪಿಯುಸಿ ಕಲಾ ವಿಭಾಗದಲ್ಲಿ 600 ಕ್ಕೆ 593 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಎರಡನೇ ರ್‍ಯಾಂಕ್ ಗಳಿಸಿದಾರೆ. ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ ವಿಷಗಳಲ್ಲಿ ಶಿವರಾಜ್ ನೂರಕ್ಕೆ ನೂರು ಅಂಕ ಪಡೆದಿದ್ದಾನೆ. ಕನ್ನಡ 98, ಇಂಗ್ಲೀಷ್ 95 ಅಂಕ ಪಡೆದು ಕಲಾ ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ.
ರಾಯಚೂರು ಮೂಲದ ಶಿವರಾಜ್ ಪಿಯು ವ್ಯಾಸಾಂಗಕ್ಕೆ ನೆರೇಗಲ್ ಅನ್ನದಾನೇಶ್ವರ ಪಿಯು ಕಾಲೇಜು ಸೇರಿಕೊಂಡಿದ್ರು. ಸೋದರ ಮಾವ ಲಿಂಗಪ್ಪ ಸೂಚನೆಯಂತೆ ನೆರೇಗಲ್ ಸೇರಿದ್ದ ಶಿವರಾಜ್ ಶ್ರೆದ್ಧೆಯಿಂದ ಕಲೆಯುತ್ತಿದ್ದಾರೆ. ಲಿಂಗಸಗೂರು ತಾಲೂಕಿನ ಯರಗಟ್ಟ ಗ್ರಾಮದಲ್ಲಿ ತಂದೆ ತಾಯಿ ಕೂಲ ಕೆಲಸ ಮಾಡ್ಕೊಂಡು ಜೀವನ ನಡೆಸ್ತಿದ್ರೆ ಓದಿನಲ್ಲಿ ಸಾಧನೆ ಮಾಡ್ಬೇಕು ಅನ್ನೋ ಹಂಬಲ ಹೊಂದಿರೋ ಶಿವರಾಜ್ ನೆರೇಗಲ್ ನಲ್ಲಿ ಇದ್ದು ಕಲೆಯುತ್ತಿದ್ದರು.
ವಾಣಿಜ್ಯ ವಿಭಾಗದಲ್ಲಿ ನಾಲ್ವರು, ವಿಜ್ಞಾನ ವಿಭಾಗದಲ್ಲಿ ಒಬ್ಬ ಟಾಪರ್!
ರಿಸಲ್ಟ್ ಹೊರಬಿದ್ದಾಗ ತುಮಕೂರಲ್ಲಿ ಕೂಲಿ ಮಾಡುತ್ತಿದ್ದ ಶಿವರಾಜ್
ಶಿವರಾಜ್ ಮೂಲ ರಾಯಚೂರು ಕಾಲೇಜು ಅಭ್ಯಾಸ ಮಾಡ್ತಿದ್ದ ಊರು ನೆರೇಗಲ್. ಆದ್ರೆ, ಸದ್ಯ ಶಿವರಾಜ್ ಕೂಲಿ ಕೆಲಸಕ್ಕೆ ಅಂತಾ ತುಮಕೂರು ಸೇರಿದಾರೆ. ಏಳನೇ ಕ್ಲಾಸ್ ಇದ್ದಾಗಿನಿಂದಲೂ ಶಿವರಾಜ್ ದುಡಿದೇ ಕಲೀತಿರೋದಂತೆ. ತಿಂಗಳು ರಜೆಯಲ್ಲಿ ಕೆಲಸ ಮಾಡಿ ಉಳಿದ ಹಣವನ್ನೇ ವಿದ್ಯಾಭ್ಯಾಸಕ್ಕೆ ಶಿವರಾಜ್ ಬಳಸ್ತಾರೆ. ಪಿಯು ರಿಸಲ್ಟ್ ಬರೋ ಹೊತ್ತಿಗೆ ಶಿವರಾಜ್ ಬಾರ್ ಬೆಂಡಿಂಗ್ ಕೆಲಸಕ್ಕೆ ಅಂತಾ ತುಮಕೂರು ತೆರಳಿದ್ರು.
ರ್‍ಯಾಂಕ್ ವಿಷಯ ಕೇಳಿ ಕೆಲಸದ ಮಧ್ಯೆ ಸಂಭ್ರಮಪಟ್ಟ ಕಾರ್ಮಿಕರು
ರ್‍ಯಾಂಕ್ ಬಂದಿರೋ ವಿಚಾರ ಶಿವರಾಜ್‌ನ್ ಮೂಲಕ ತಿಳಿದಿದೆ.. ಸಹ ಕೆಲಸಗಾರರಿಗೂ ವಿಷ್ಯ ತಿಳಿದಿದೆ, ಸ್ಥಳಕ್ಕೆ ಕೇಕ್ ತರೆಸಿದ್ದ ಗೌಂಡಿ, ಮೇಸ್ತ್ರಿಗಳು ಶಿವರಾಜ್ ಸಾಧನೆಯನ್ನ ಸಂಭ್ರಮಿಸಿದ್ದಾರೆ.
ಐಎಎಸ್ ಕನಸು ಕಾಣುತ್ತಿರುವ ರ್‍ಯಾಂಕ್ ಹುಡುಗ
ಐಎಎಸ್ ಪರೀಕ್ಷೆ ಪಾಸ್ ಮಾಡ್ಬೇಕು ಅಂತಾ ಕನಸು ಕಾಣ್ತಿರೋ ಶಿವರಾಜ್ ಈಗಿನಿಂದಲೇ ತಯಾರಿ ನಡೆಸಿದಾರೆ.. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಐವರು ಸಹೋದರರು, ಮೂವರು ಸಹೋದರಿಯರ ಪೈಕಿ ಶಿವರಾಜ್ ಮೂರನೇಯವರು. ಅಣ್ಣ ಗಾರೆ ಕೆಲಸ ಮಾಡಿದ್ರೆ ತಂದೆ ತಾಯಿ ಕೂಲಿ ಮಾಡ್ತಾರೆ. ಮೂರು ಎಕರೆ ಜಮೀನು ನಂಬ್ಕೊಂಡು ಜೀವನ ನಡೀತಿದೆ. ಯಾರಿಗೂ ಹೊರೆಯಾಗದೇ ಶಿಕ್ಷಣ ಪಡೆಯಬೇಕು ಅನ್ನೋದು ಶಿವರಾಜ್ ಛಲ..
ಗದಗ ಜಿಲ್ಲೆಯ ಫಲಿತಾಂಶ
2021– 22ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಗದಗ ಜಿಲ್ಲೆ ಶೇ 60.63 ಫಲಿತಾಂಶ ದಾಖಲಿಸಿದೆ. ನರೇಗಲ್‌ನ ಅನ್ನದಾನೇಶ್ವರ ಪಿಯು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ಶಿವರಾಜ ದುರ್ಗಪ್ಪ 593 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ರ್‍ಯಾಂಕ್ ಪಡೆದುಕೊಂಡಿದ್ದಾರೆ. ಮುಂಡರಗಿಯ ಜೆ.ಎ. ಪಿಯು ಕಾಲೇಜಿನ ನಿಂಜಪ್ಪ ಹು.ಮುರಡಿ (588) ದ್ವಿತೀಯ ಸ್ಥಾನ, ಗದುಗಿನ ಎಚ್‌ಸಿಎಸ್ ಪಿಯು ಕಾಲೇಜಿನ ಗೋಪಾಲಕೃಷ್ಣ ಪಡಸಲಮನಿ (585), ಮುಂಡರಗಿಯ ಜೆ.ಎ.ಪಿಯು ಕಾಲೇಜಿನ ವಿಜಯ ಚನ್ನಪ್ಪ (585) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಗದುಗಿನ ವಿನಯ್ ಚಿಕ್ಕಟ್ಟಿ ಪಿಯು ಕಾಲೇಜಿನ ಅದಿತಿ ನಾಗರಾಜ (588) ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಗದುಗಿನ ಎಎಸ್‌ಎಸ್ ಪಿಯು ಕಾಲೇಜಿನ ಆಕಾಶ್ ಆರ್.ಮಾಲಾಪುರ (585) ದ್ವಿತೀಯ, ನರೇಗಲ್ ಅನ್ನದಾನೇಶ್ವರ ಪಿಯು ಕಾಲೇಜಿನ ಮೃತ್ಯುಂಜ ಪಿ.ಹಿರೇಮಠ (584) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
Vijyanagara; ಫಲಿತಾಂಶದಲ್ಲಿ ದಾಖಲೆ ಬರೆದ ಕೊಟ್ಟೂರಿನ ಇಂದೂ ಪಿಯು ಕಾಲೇಜು
ವಿಜ್ಞಾನ ವಿಭಾಗದಲ್ಲಿ ಗದಗ ಸರ್ಕಾರಿ ಪಿಯು ಕಾಲೇಜಿನ ರಾಹುಲ್ ದೀಪಕ್ ಹೆಬ್ಬಾರೆ (591), ವಿನಯ್ ಚಿಕ್ಕಟ್ಟಿ ಪಿಯು ಕಾಲೇಜಿನ ಮುಸ್ಕಾನ ಮೆಹಬೂಬ ಮೊಮಿನ (589) ದ್ವಿತೀಯ, ಅಡವಿಸೋಮಾಪುರದ ಬಿಪಿನ್ ಚಿಕ್ಕಟ್ಟಿ ಪಿಯು ಕಾಲೇಜಿನ ಬಸವರಾಜ ಪ.ಸೊನ್ನದ (584) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
‘ಗದಗ ಜಿಲ್ಲೆ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ಕೋವಿಡ್ ಕಾರಣದಿಂದ ಕಳೆದ ವರ್ಷ ಶೇ 100ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಎಲ್ಲ ಪರೀಕ್ಷೆಗಳು ನಡೆದಿದ್ದು, ಜಿಲ್ಲೆಗೆ ಶೇ 60.63 ಫಲಿತಾಂಶ ಲಭಿಸಿದೆ’ ಎಂದು ಗದಗ ಜಿಲ್ಲಾ ಡಿಡಿಪಿಯು ಕಾಂಬಳೆ ತಿಳಿಸಿದ್ದಾರೆ.