ಆತ್ಮನಿರ್ಭರ ಭಾರತದ ನವನಿರ್ಮಾಣ, ಸ್ವಗ್ರಾಮ ಫೆಲೋಶಿಪ್ ಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ಅನೇಕ ಸಮಾನ ಮನಸ್ಕ ಸಂಸ್ಥೆಗಳು ಮತ್ತು ಚಿಂತಕರು ಮೂರು ವರ್ಷದ ಒಂದು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದ್ದು, ಸ್ವಗ್ರಾಮ ಫೆಲೋಶಿಪ್ ಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಡಿಸೆಂಬರ್ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಆತ್ಮನಿರ್ಭರ ಭಾರತದ ಕನಸನ್ನು ಕಾಣಬೇಕೆಂದರೆ ಅದು ಸ್ವಾವಲಂಬೀ ಗ್ರಾಮದ ಕಡೆಗೆ ಹೆಜ್ಜೆ ಹಾಕುವುದೆಂದೇ ಅರ್ಥ. ಈ ನಡೆ ಆಧುನಿಕತೆಯ ವಿರೋಧಿಯಲ್ಲ ಬದಲಿಗೆ ಹೊಸ ಚಿಗುರು ಹಳೆಬೇರು ಎನ್ನುವ ವಾಕ್ಯದಂತೆ. ಹಾಗಾಗಿ ಆತ್ಮನಿರ್ಭರ ಭಾರತವೆಂದರೆ ಸಮಗ್ರವಿಕಾಸದ ಕಲ್ಪನೆಯಡಿ ಗ್ರಾಮದ ಸ್ವಭಾವಗಳನ್ನು ಆಧರಿಸಿ ಗ್ರಾಮಸ್ಥರೇ ನಿರ್ಣಯಿಸುವ ಅಭ್ಯುತ್ಥಾನ ಪಥ. ಇಂತಹ ಒಂದು ಮಾದರಿಯನ್ನು ಕ್ರಿಯಾನ್ವಯಗೊಳಿಸಲು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ಅನೇಕ ಸಮಾನ ಮನಸ್ಕ ಸಂಸ್ಥೆಗಳು ಮತ್ತು ಚಿಂತಕರು ಮೂರು ವರ್ಷದ ಒಂದು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಅಂಚಾಯತ್ ರಾಜ್ ವಿಶ್ವವಿದ್ಯಾನಿಲಯ ಕಾಯಿದೆ, 2016ರ ಮೂಲಕ ಸುಸ್ಥಿರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಬೋಧನೆ , ತರಭೇತಿ ಮತ್ತು ಸಂಶೋಧನೆಗಾಗಿ ಸ್ಥಾಪಿಸಲಾಗಿದೆ. ವಿಶ್ವವಿದ್ಯಾಲಯಗಳು ಕೇವಲ ಬೋಧನೆ ಮತ್ತು ಸಂಶೋಧನೆಗಳಿಗೆ ಮಾತ್ರ ಸೀಮಿತವಾಗಬಾರದು. ಸದರಿ ಅಧ್ಯಯನ ಮತ್ತು ಸಂಶೋಧನೆಗಳಿಂದ ಹೊರಹೊಮ್ಮಿದ ಒಳನೋಟಗಳನ್ನು ಬಳಸಿಕೊಂಡು ಜನರ ಬದುಕನ್ನು ಹಸನಗೊಳಿಸುವ ಹಾಗೂ ರಾಷ್ಟ್ರದ ಏಳಿಗೆಗೆ ಕೊಡುಗೆ ಕೊಡುವಂತೆ ರೂಪುಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ. ಯೂತ್ ಫಾರ್ ಸೇವಾ, ಚಾಣಕ್ಯ ವಿಶ್ವವಿದ್ಯಾಲಯ, ಪ್ರಜ್ಞಾ ಪ್ರವಾಹ ಮತ್ತು ಕುವೆಂಪು ವಿಶ್ವವಿದ್ಯಾಲಯದ ಅಬ್ದುಲ್ ನಜೀರ್ ಸಾಬ್ ಅಧ್ಯಯಮ ಪೀಠದ ಸಹಯೋಗದೊಂದಿಗೆ "ಸ್ವಗ್ರಾಮ ಫೆಲೋಶಿಪ್ ನಮ್ಮ ಗ್ರಾಮ ನಮ್ಮ ಹೆಮ್ಮೆ" ಎಂದು ಶೀರ್ಷಿಕೆಯಡಿ ಆರಂಭಿಸಿದೆ.
ಫೆಲೋಶಿಪ್ ಉದ್ದೇಶ:
- ಸಮಗ್ರ ವಿಕಾಸದ ಪರಿಕಲ್ಪನೆಯ ಮೇಲೆ ಗ್ರಾಮ ವಿಕಾಸ ಸಾಧಿಸುವುದು.
- ಗ್ರಾಮದ ಸ್ವಭಾವಕ್ಕೆ ಅನುಗುಣವಾಗಿ ಗ್ರಾಮ ವಿಕಾಸದ ಮಾದರಿಗಳ ನಿರ್ಮಾಣ
- ಪರಸ್ವಾವಲಂಬನೆ ,ತ್ತು ಸಹಕಾರದ ಆಧಾರದ ಮೇಲೆ ಸ್ವಾವಲಂಬಿ ಗ್ರಾಮ ನಿರ್ಮಾಣ
- ರಾಷ್ಟ್ರಮಟ್ಟದಲ್ಲಿ ವಿಸ್ತರಿಸಲು ಸಮಗ್ರ ಗ್ರಾಮ ವಿಕಾಸದ ಪರಿಕಲ್ಪನೆಯ ಚೌಕಟ್ಟು ಮತ್ತು ಸಾಧನಗಳನ್ನು ಅಭಿವೃದ್ಧಿಪಡಿಸುವುದು.
ಫೆಲೋಶಿಪ್‌ಗೆ ಅರ್ಜಿ ಸಲ್ಲಿಸಲು ಅರ್ಹರು
- ಗ್ರಾಮದಿಂದ ಹೊರಗಿದ್ದು ವಿವಿಧ ಕ್ಷೇತ್ರಗಳಲ್ಲಿ ವಿವಿಧ ಭಾಗಗಳಲ್ಲಿ ತೊಡಗಿಕೊಂಡಿದ್ದು, ತನ್ನ ಗ್ರಾಮಕ್ಕೆ ಕೊಡುಗೆ ಕೊಡುವ ಆಸಕ್ತಿ ಇರುವವರು.
- ತಮ್ಮ ಗ್ರಾಮದ ವಿಕಾಸಕ್ಕೆ ಈಗಾಗಲೇ ತೊಡಗಿಸಿಕೊಂಡಿರುವವರು.
- ಸ್ವ ಉದ್ಯೋಗ ಮಾಡುತ್ತ ತನ್ನ ಗ್ರಾಮ ವಿಕಾಸಕ್ಕೆ ತೊಡಗಿಸಿಕೊಳ್ಳಬಯಸುವವರು.
ಫೆಲೋಶಿಪ್ ಕಾಲಾವಧಿ ಮತ್ತು ವೇಳಾಪಟ್ಟಿ
- ಇದು ಒಟ್ಟಾರೆ ಮೂರು ವರ್ಷದ ಪ್ರಕ್ರಿಯೆಯಾಗಿರುತ್ತದೆ. (ನ.2022 ರಿಂದ ನ.2025ರವರೆಗೆ)
- ಮೊದಲ ವರ್ಷ ಆಳವಾದ ಚಟುವಟಿಕೆಗಳು ಉಳಿದ ಎರಡು ವರ್ಷ ಮಾರ್ಗದರ್ಶನ ರೂಪದಲ್ಲಿರುತ್ತದೆ.
Karnataka assembly election: ಶಿಕ್ಷಕರಿಗೆ ಮತಪಟ್ಟಿಪರಿಷ್ಕರಣೆ ಕೆಲಸ, ಪಾಠಕ್ಕೆ ಕುತ್ತು!
ಮುಖ್ಯ ಮಾಹಿತಿ:
- ಫೆಲೋಶಿಪ್ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 15, 2022
- ಅರ್ಜಿ ಕ್ರೋಡಿಕರಣ ಮತ್ತು ಸಂದರ್ಶನ ಡಿಸೆಂಬರ್ 30, 2022
- ಮೊದಲ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಭೇತಿ ಜನವರಿ 20, 2023
- ಗ್ರಾಮಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆ ಜನವರಿ 31, 2023
- ಆಯ್ಕೆಯಾದ ಗ್ರಾಮಗಳಲ್ಲಿ ಚಟುವಟಿಕೆ ಆರಂಭ ಫೆಬ್ರವರಿ 2023 ರಿಂದ
SSLC EXAM 2023 TIME TABLE: ಕರ್ನಾಟಕ ಎಸ್‌ಎಸ್‌ಎಲ್ ಸಿ ಅಂತಿಮ ವೇಳಾಪಟ್ಟಿ ಬಿಡುಗಡೆ
ಹೆಚ್ಚಿನ ಮಾಹಿತಿಗೆ
ಗಿರೀಶ್ ಬಿ : 9945626180
ಅಭಿಷೇಕ್ : 9206808889
ಈ ಮೇಲ್ : swagramafellowship@gmail.com
ವೆಬ್‌ಸೈಟ್: https://ksrdpru.ac.in/page_kannadda.aspx?id=73