ಕೊಪ್ಪಳ: ಮೇಲಧಿಕಾರಿಗಳ ವಿರುದ್ಧ ವಾಟ್ಸ್‌ಆ್ಯಪ್‌ ಸ್ಟೇಟಸ್‌: ಚರ್ಚೆಗೆ ಗ್ರಾಸವಾದ ಶಿಕ್ಷಕಿ ನಡೆ

‘ಎಲ್ಲೆ ಮೀರಿದ ಅಧಿಕಾರಿಗಳ ಅಟ್ಟಹಾಸ ಇದು ಕೊನೆಗೊಳ್ಳುವ ಕಾಲ ಸನಿಹದಲ್ಲಿದೆಯೇ ಇದೆ’ ಎನ್ನುವ ಮೂಲಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಧಮ್ಕಿ ಹಾಕಿದ ಶಿಕ್ಷಕಿಯೊಬ್ಬರ ವ್ಯಾಟ್ಸ್‌ಆ್ಯಪ್‌ ಸ್ಟೇಟಸ್‌ ತಾಲೂಕಿನೆಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

Koppal teacher controversial whatsapp status agains  superiors Teacher's move is controversial rav

ಕನಕಗಿರಿ (ಫೆ.18) : ‘ಎಲ್ಲೆ ಮೀರಿದ ಅಧಿಕಾರಿಗಳ ಅಟ್ಟಹಾಸ ಇದು ಕೊನೆಗೊಳ್ಳುವ ಕಾಲ ಸನಿಹದಲ್ಲಿದೆಯೇ ಇದೆ’ ಎನ್ನುವ ಮೂಲಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಧಮ್ಕಿ ಹಾಕಿದ ಶಿಕ್ಷಕಿಯೊಬ್ಬರ ವ್ಯಾಟ್ಸ್‌ಆ್ಯಪ್‌ ಸ್ಟೇಟಸ್‌ ತಾಲೂಕಿನೆಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಡಿಡಿಪಿಐ(DDPI) ನೇತೃತ್ವದಲ್ಲಿ ನಡೆದ ಸಭೆಯೊಂದರಲ್ಲಿ ಶಿಕ್ಷಕರು ಶಾಲೆಗೆ ಸಮಯಕ್ಕೆ ಸರಿಯಾಗಿ ಹೋಗಬೇಕು. ಒಂದು ವೇಳೆ ಚಕ್ಕರ್‌ ಹೊಡೆಯುವುದು ಮುಂದುವರಿದರೆ ಅಂಥವರ ವಿರುದ್ಧ ಕ್ರಮಕ್ಕಾಗಿ ಹೆಸರುಗಳನ್ನು ಪತ್ರದಲ್ಲಿ ಬರೆದುಕೊಡುವಂತೆ ಬಿಇಒ ಸೋಮಶೇಖರಗೌಡ(BEO Somashekar gowda)ಗೆ ತಾಕೀತು ಮಾಡಿದ್ದರನ್ನಲಾಗಿದೆ. ಇದೇ ವಿಚಾರಕ್ಕೆ ಶಿಕ್ಷಕಿಯೊಬ್ಬರು ನಮ್ಮ ತಾಲೂಕಿನ ಮುಖ್ಯೋಪಾಧ್ಯಾಯರನ್ನು ಹಾಗೂ ಶಿಕ್ಷಕರನ್ನು ಹೇಗೆ ಸಂರಕ್ಷಣೆ ಮಾಡಿಕೊಳ್ಳಬೇಕೆನ್ನುವುದು ನಮಗೆ ಗೊತ್ತಿದೆ. ಇದನ್ನು ಮೀರಿ ಏನಾದರೂ ನಡೆದರೆ ನಮ್ಮ ತಾಳ್ಮೆ ಮೀರಿ ನಡೆಯಬೇಕಾಗುತ್ತದೆ ಎನ್ನುವ ಪೋಸ್ಟ್‌ಗೆ ಶಿಕ್ಷಕರ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಶಾಲೆಯಲ್ಲಿ ಸಹ ಶಿಕ್ಷಕರ ಕಿರುಕುಳ ಆರೋಪ, ತಹಶಿಲ್ದಾರ ಕಚೇರಿ ಆವರಣದಲ್ಲಿ ನೇಣಿಗೆ ಶರಣಾದ ಶಿಕ್ಷಕ!

Latest Videos
Follow Us:
Download App:
  • android
  • ios