Asianet Suvarna News Asianet Suvarna News

ದಾಖಲೆ ಬರೆದ ಕೇರಳ; ಎಲ್ಲ ಸರ್ಕಾರಿ ಶಾಲೆಗಳು ಡಿಜಿಟಲ್ ಮಯ!

ಕೇರಳದ ಸಾರ್ವಜನಿಕ ಶಿಕ್ಷಣ ಕ್ಷೇತ್ರ ಸಂಪೂರ್ಣ ಡಿಜಿಟಲ್/ ದೇಶದಲ್ಲೆ ಪ್ರಥಮ/ ಎಲ್ಲ ಶಾಲೆಗಳಿಗೂ ಹೈ ಸ್ಪೀಡ್  ಇಂಟರ್ ನೆಟ್ ಸಂಪರ್ಕ/ ಅಧಿಕೃತ ಘೊಷಣೆ ಮಾಡಲಿದ್ದಾರೆ ಮುಖ್ಯಮಂತ್ರಿ ವಿಜಯನ್

Kerala schools become the first to go completely digital in public education mah
Author
Bengaluru, First Published Oct 13, 2020, 4:13 PM IST
  • Facebook
  • Twitter
  • Whatsapp

ತಿರುವನಂತಪುರ(ಅ. 13) ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಡಿಜಿಟಲೀಕರಣ ಮಾಡಿದ ಖ್ಯಾತಿಗೆ ಕೇರಳ ಪಾತ್ರವಾಗಿದೆ. ಸತತ ಸರ್ಕಾರಗಳ ಪ್ರಯತ್ನದಿಂದಾಗಿ ಇದು ಸಾಧ್ಯವಾಗಿದೆ ಎಂದು ಹೇಳಿದ್ದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದ್ದಾರೆ.

ಮಾಧ್ಯಮಿಕ ಶಾಲೆಗಳಿಗೆ 493.50 ಕೋಟಿ ರೂ.,  ಪ್ರಾಥಮಿಕ ಶಾಲೆಗಳಿಗೆ 300 ಕೋಟಿ ರೂ.ಗಳ ಹೈಟೆಕ್ ಲ್ಯಾಬ್ ಯೋಜನೆ ಹಾಕಿಕೊಳ್ಳಲಾಗಿತ್ತು. ರಾಜ್ಯದ ಎಲ್ಲಾ 16,000 ಸಾರ್ವಜನಿಕ ಶಾಲೆಗಳಲ್ಲಿ ಈಗ 374,274 ಐಟಿ ಉಪಕರಣಗಳಿವೆ. 119,055 ಲ್ಯಾಪ್‌ಟಾಪ್‌ಗಳು, 69,944 ಮಲ್ಟಿಮೀಡಿಯಾ ಪ್ರೊಜೆಕ್ಟರ್‌ಗಳು, 100,473 ಯುಎಸ್‌ಬಿ ಸ್ಪೀಕರ್‌ಗಳು, 23,098 ಪ್ರೊಜೆಕ್ಟರ್ ಪರದೆಗಳು, 43,250 ಕಿಟ್‌ಗಳು, 4,545 ಎಲ್‌ಇಡಿ ಟಿವಿಗಳು, 4,578 ಡಿಎಸ್‌ಎಲ್‌ಆರ್ ಕ್ಯಾಮೆರಾಗಳು, 4,720 ಎಚ್‌ಡಿ ವೆಬ್‌ಕ್ಯಾಮ್‌ಗಳು ಮತ್ತು 4,611 ಮಲ್ಟಿ-ಫಂಕ್ಷನ್ ಮುದ್ರಕಗಳು ಮತ್ತು ಹೈ-ಸ್ಪೀಡ್ ಬ್ರಾಡ್‌ಬ್ಯಾಂಡ್ 6 ಇಂಟರ್ನೆಟ್ ಸಂಪರ್ಕಗಳು  12,678 ಶಾಲೆಗಳಲ್ಲಿದೆ.

ಪಾಸ್ ವರ್ಡ್ ಆಯ್ಕೆ ಮಾಡುವಾಗ ಇರಲಿ ಎಚ್ಚರ, ಇಂಥ ತಪ್ಪು ಮಾಡಬೇಡಿ

ಈ ಕಾರ್ಯಕ್ರಮಗಳನ್ನು ಕೇರಳ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಶಿಕ್ಷಣ (ಕೈಟ್)  ಅಡಿಯಲ್ಲಿ ಜಾರಿ ಮಾಡಲಾಗಿತ್ತು. ಕೈಟ್ ಸಿಇಒ ಕೆ.ಅನ್ವರ್ ಸದಾತ್ ಮಾತನಾಡಿ, ಎಲ್ಲಾ ಉಪಕರಣಗಳು ಐದು ವರ್ಷಗಳ ಗುಣಮಟ್ಟದ ಖಾತ್ರಿ ಹೊಂದಿವೆ. ದೂರುಗಳ ನಿರ್ವಹಣೆಗೆ ವೆಬ್-ಪೋರ್ಟಲ್ ಮತ್ತು ಕಾಲ್ ಸೆಂಟರ್ ಸಹ ಕಾರ್ಯನಿರ್ವಹಿಸುತ್ತದೆ . ಎಲ್ಲಾ ಉಪಕರಣಗಳಿಗೂ ಇನ್ಸೂರೆನ್ಸ್ ಇದೆ ಎಂದು ತಿಳಿಸಿದರು.

ಕೊರೋನಾ ಕಾಲದಲ್ಲಿ ಇದು ನೆರವಿಗೆ ಬಂದಿದೆ. ಇದು ಜೂನ್ 1 ರಂದು ಪ್ರಾರಂಭವಾದಾಗಿನಿಂದ 2,650 ಕ್ಕೂ ಹೆಚ್ಚು ತರಗತಿಗಳನ್ನು ನಡೆಸಲಾಗಿದೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

 

Follow Us:
Download App:
  • android
  • ios