ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಆಪ್ಷನ್ ಎಂಟ್ರಿ ಆರಂಭ: ನಾಲ್ಕು ದಿನ ಮಾತ್ರ ಅವಕಾಶ
ರಾಜ್ಯದಲ್ಲಿ ಸಿಇಟಿ ಪರೀಕ್ಷೆ ಬರೆದು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳಿಗ ಸೇರಲು ಬಯಸುತ್ತಿರುವ ವಿದ್ಯಾರ್ಥಿಗಳಿಗೆ ಕೋರ್ಸ್ ಆಯ್ಕೆಗೆ (Option entry) ಇಂದಿನಿಂದ ಅವಕಾಶ ನೀಡಲಾಗಿದೆ.
ಬೆಂಗಳೂರು (ಆ.05): ರಾಜ್ಯದಲ್ಲಿ ಈಗಾಗಲೇ ಕರ್ನಾಟಕ ಸಾಮಾನ್ಯ ಪರೀಕ್ಷೆ (ಸಿಇಟಿ) ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಭರ್ತಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆ.5ರ ಸಂಝೆಯಿಂದ ಆ.8ರವರೆಗೆ ಮಾತ್ರ ಅವಕಾಶ ನೀಡಲಾಗಿದ್ದು, ಅಭ್ಯರ್ಥಿಗಳು ಕೂಡಲೇ ತಮ್ಮ ಆಯ್ಕೆಯನ್ನು ಭರ್ತಿ ಮಾಡಬೇಕು.
ಹೌದು, ರಾಜ್ಯದಲ್ಲಿ ಕೆ-ಸಿಇಟಿ ಪರೀಕ್ಷೆ ಬರೆದು ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದ ನಂತರ, ಕಾಲೇಜುಗಳ ಪ್ರವೇಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಈಗ ಆಯ್ಕೆ ಕೋರ್ಸ್‌ಗಳ ಆಯ್ಕೆ (KEA Option entry) ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅವಕಾಶವನ್ನು ನೀಡಲಾಗಿದೆ. ಆಪ್ಷನ್ ಎಂಟ್ರಿಗೆ 9000 ಸೀಟು ಹಂಚಿಕೆಗೆ ಲಭ್ಯವಾಗಿವೆ. ಇಂಜಿನಿಯರಿಂಗ್ ಕೋರ್ಸ್ ಗೆ ಸಂಬಂಧಿಸಿದಂತೆ ಅಂತಿಮ ಹಂಚಿಕೆ ಪಟ್ಟಿಯಿಂದ ಕೈಬಿಡಲಾದ ಹಿನ್ನೆಲೆಯಲ್ಲಿ ಈ ಸೀಟುಗಳನ್ನು ಹಂಚಿಕೆ ಮಾಡಿ ವಿದ್ಯಾರ್ಥಿಗಳ ಕೋರ್ಸ್ ಆಯ್ಕೆಗೆ ಅವಕಾಶ ನೀಡಿದೆ.
ಖಾಸಗಿ ಇಂಜನಿಯರಿಂಗ್ ಕಾಲೇಜು ಪ್ರವೇಶ ಶುಲ್ಕ ಶೇ.7 ಏರಿಕೆ: ಇಲ್ಲಿದೆ ಶುಲ್ಕದ ವಿವರ
ಆಗಸ್ಟ್ 8 ಕೊನೆಯ ದಿನ: ಇಂದು ಸಂಜೆ 5 ರಿಂದ ಆಗಸ್ಟ್ 8 ರವರಿಗೆ ಆಪ್ಷನ್ ಎಂಟ್ರಿ ಗೆ ಅವಕಾಶ ನೀಡಲಾಗಿದೆ. ಆಪ್ಷನ್ ಎಂಟ್ರಿಯಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್ ಗಳಿಗೆ ಅವಕಾಶ ಕೊಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಹೇಳಿದ್ದಾರೆ. ಒಟ್ಟು 9,000 ಸೀಟುಗಳನ್ನು ಉನ್ನತ ಶಿಕ್ಷಣ ಇಲಾಖೆ ಮತ್ತೆ ಸೇರಿಸಿದ್ದು, ಇಷ್ಟು ಸೀಟು ಹಂಚಿಕೆಗೆ ಲಭ್ಯವಾಗಿದೆ. ಇಂದು ಸಂಜೆ 5 ರಿಂದ ಆ.8ರವರೆಗೆ ಆಪ್ಷನ್ ಎಂಟ್ರಿಗೆ ಅವಕಾಶ ಇರುತ್ತದೆ.
ದಾಖಲೆ ಒದಗಿಸದ್ದಕ್ಕೆ ವಿಳಂಬ: ಶಿಕ್ಷಣ ಇಲಾಖೆಗೆ ಕೆಲವು ದಾಖಲೆಗಳನ್ನು ಒದಗಿಸಿಲ್ಲ ಎನ್ನುವ ಕಾರಣಕ್ಕೆ ಸೀಟು ಹಂಚಿಕೆ ಪ್ರಕ್ರಿಯೆಯಿಂದ ಹೊರಗಿಡಲಾಗಿತ್ತು. ಉನ್ನತ ಶಿಕ್ಷಣ ಇಲಾಖೆ ಶುಕ್ರವಾರ ಷರತ್ತು ವಿಧಿಸಿ ಸೀಟು ಹಂಚಿಕೆಗೆ ಒಪ್ಪಿಗೆ ಸೂಚಿಸಿದೆ. ನಿಗದಿತ ಅವಧಿಯೊಳಗೆ ಕಾಲೇಜುಗಳಿಗೆ ಅಗತ್ಯ ಇರುವ ದಾಖಲೆಗಳನ್ನು ಒದಗಿಸಬೇಕು. ಎಲ್ಲ ಕೋರ್ಸ್‌ಗಳಿಗೆ ಆಪ್ಷನ್ ಎಂಟ್ರಿ ಮಾಡುವ ಪ್ರಕ್ರಿಯೆ ಇಂದು ಸಂಜೆ ಆರಂಭವಾಗಲಿದೆ. ಎಲ್ಲ ಕೋರ್ಸ್ ಗಳಿಗೂ ಏಕಕಾಲದಲ್ಲಿ ಆಪ್ಷನ್ ಎಂಟ್ರಿ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದರು.
Bengaluru: ವಿಜಯನಗರ ಸಂಚಾರಿ ಪೊಲೀಸ್ ಹೃದಯಾಘಾತಕ್ಕೆ ಬಲಿ: ಇಲ್ಲಿದೆ ನೋವಿನ ನುಡಿ..
ಇಲ್ಲಿದೆ ಸೀಕ್ರೆಟ್ ಕೀ ವಿವರ: ಸೀಕ್ರೆಟ್ ಕೀ ಆನ್ ಲೈನ್ ಮೂಲಕ UGCET-23 ಪರಿಶೀಲನೆ ಕಡ್ಡಾಯವಾಗಿ ಮಾಡಬೇಕು. ಕೋರ್ಸ್ ಸ್ಲಿಪ್ ಪಡೆದಿರುವ ಅಭ್ಯರ್ಥಿಗಳು, ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಅರ್ಹರಾಗಿರುತ್ತಾರೆ. UG NEET-23ಕ್ಕೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಲ್ಲಿ Secret Key ಯನ್ನು ವೈದ್ಯಕೀಯ ಕೋರ್ಸ್‌ಗಳ ಆಪ್ಷನ್ ಎಂಟ್ರಿಗೆ ಬಳಸಬೇಕು. www.kea.kar.nic.in ವೆಬ್ಸೈಟ್ ನಲ್ಲಿ KEA ಆಪ್ಷನ್ ಎಂಟ್ರಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.