ಖಾಸಗಿ ಇಂಜನಿಯರಿಂಗ್ ಕಾಲೇಜು ಪ್ರವೇಶ ಶುಲ್ಕ ಶೇ.7 ಏರಿಕೆ: ಇಲ್ಲಿದೆ ಶುಲ್ಕದ ವಿವರ

ರಾಜ್ಯದ ಎಲ್ಲ ಬ್ಯಾಚುಲರ್ ಆಫ್ ಇಂಜನಿಯರಿಂಗ್ (ಬಿಇ) ಪ್ರವೇಶ ಶುಲ್ಕವನ್ನು ಸರ್ಕಾರ ಶೇ.7% ಹೆಚ್ಚಳ ಮಾಡಿದೆ. ಈ ನಿಯಮ ಎಲ್ಲ ಖಾಸಗಿ ಇಂಜಿನಿಯರಿಂಗ್‌ ಕಾಲೇಜು ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೂ ಅನ್ವಯವಾಗಲಿದೆ.

Karnataka Govt hikes private engineering admission fees Here is the fee details sat

ಬೆಂಗಳೂರು (ಆ.05): ರಾಜ್ಯದಲ್ಲಿ ಅಧಿಕಾರಕ್ಕೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲಿಯೇ ರಾಜ್ಯದ ಜನತೆಗೆ ಬೆಲೆ ಏರಿಕೆಯ ಬರೆ ಬಿದ್ದಿದೆ. ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತಿರುವ ನಡುವೆಯೇ ಈಗ ವಿದ್ಯಾರ್ಥಿಗಳಿಗೆ ಬರೆಯನ್ನು ಎಳೆದಿದೆ. ರಾಜ್ಯದ ಬ್ಯಾಚುಲರ್ ಆಫ್ ಇಂಜನಿಯರಿಂಗ್ (ಬಿಇ) ಪ್ರವೇಶ ಶುಲ್ಕ ಶೇ.7% ಹೆಚ್ಚಳ ಮಾಡಲಾಗಿದೆ.

ಖಾಸಗಿ ಇಂಜನಿಯರಿಂಗ್  ಕಾಲೇಜು ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿರುವ ಸರ್ಕಾರಿ ಕೋಟಾದ ಸೀಟುಗಳಿಗೂ ಈ ನಿಯಮ ಅನ್ವಯವಾಗಲಿದೆ. ಈ ಹಿಂದೆ ಸರ್ಕಾರಿ  ಕಾಲೇಜುಗಳಲ್ಲಿ 33 ಸಾವಿರ ರೂ ಪಾವತಿ ಮಾಡಬೇಕಿತ್ತು. ಈಗ 40 ಸಾವಿರ ರೂ  ಶುಲ್ಕ ಪಾವತಿ ಮಾಡಬೇಕಿದೆ. ಅಂದರೆ, ಸರಾಸರಿ 7 ಸಾವಿರ ರೂ.ಗಳಿಂದ 10 ಸಾವಿರ ರೂವರೆಗೂ ಹೆಚ್ಚಳ ಆಗಲಿದೆ. ಶೇ.7 ರಷ್ಟು ಶುಲ್ಕ ಏರಿಕೆಯಿಂದ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ. 

ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಆಪ್ಷನ್ ಎಂಟ್ರಿ ಆರಂಭ: ನಾಲ್ಕು ದಿನ ಮಾತ್ರ ಅವಕಾಶ

  • ದರ ಏರಿಕೆ ನಂತರ ಪ್ರವೇಶ ಶುಲ್ಕದ ವಿವರ: 
  • ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ 40,000 ರೂ. 
  • ಸರ್ಕಾರಿ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ 68,000 ರೂ. 
  • ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು (ಟೈಪ್-1) ಶುಲ್ಕ 69,000 ರೂ. 
  • ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ (ಟೈಪ್-2) ಶುಲ್ಕ 76,000 ರೂ. 
  • ಡೀಮ್ಡ್ ಮತ್ತು ಖಾಸಗಿ ವಿವಿ ಕಾಲೇಜುಗಳ ಶುಲ್ಕ 1,69,000 ಲಕ್ಷ ರೂ. 

ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಆಪ್ಷನ್‌ ಎಂಟ್ರಿ ಆರಂಭ: ಬೆಂಗಳೂರು (ಆ.05): ರಾಜ್ಯದಲ್ಲಿ ಈಗಾಗಲೇ ಕರ್ನಾಟಕ ಸಾಮಾನ್ಯ ಪರೀಕ್ಷೆ (ಸಿಇಟಿ) ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಭರ್ತಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆ.5ರ ಸಂಝೆಯಿಂದ ಆ.8ರವರೆಗೆ ಮಾತ್ರ ಅವಕಾಶ ನೀಡಲಾಗಿದ್ದು, ಅಭ್ಯರ್ಥಿಗಳು ಕೂಡಲೇ ತಮ್ಮ ಆಯ್ಕೆಯನ್ನು ಭರ್ತಿ ಮಾಡಬೇಕು.

ಹೌದು, ರಾಜ್ಯದಲ್ಲಿ  ಕೆ-ಸಿಇಟಿ ಪರೀಕ್ಷೆ ಬರೆದು ರ್ಯಾಂಕಿಂಗ್‌ ಪಟ್ಟಿ ಬಿಡುಗಡೆ ಮಾಡಿದ ನಂತರ, ಕಾಲೇಜುಗಳ ಪ್ರವೇಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಈಗ ಆಯ್ಕೆ ಕೋರ್ಸ್‌ಗಳ ಆಯ್ಕೆ  (KEA Option entry) ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅವಕಾಶವನ್ನು ನೀಡಲಾಗಿದೆ. ಆಪ್ಷನ್ ಎಂಟ್ರಿಗೆ 9000 ಸೀಟು ಹಂಚಿಕೆಗೆ ಲಭ್ಯವಾಗಿವೆ. ಇಂಜಿನಿಯರಿಂಗ್ ಕೋರ್ಸ್ ಗೆ ಸಂಬಂಧಿಸಿದಂತೆ ಅಂತಿಮ ಹಂಚಿಕೆ ಪಟ್ಟಿಯಿಂದ ಕೈಬಿಡಲಾದ ಹಿನ್ನೆಲೆಯಲ್ಲಿ ಈ ಸೀಟುಗಳನ್ನು ಹಂಚಿಕೆ ಮಾಡಿ ವಿದ್ಯಾರ್ಥಿಗಳ ಕೋರ್ಸ್‌ ಆಯ್ಕೆಗೆ ಅವಕಾಶ ನೀಡಿದೆ.

ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು, ತಾಯಿ ಕಳಸೇಶ್ವರೀ ಆಶೀರ್ವದಿಸು!

ಆಗಸ್ಟ್‌ 8 ಕೊನೆಯ ದಿನ: ಇಂದು ಸಂಜೆ 5 ರಿಂದ ಆಗಸ್ಟ್ 8 ರವರಿಗೆ ಆಪ್ಷನ್ ಎಂಟ್ರಿ ಗೆ ಅವಕಾಶ ನೀಡಲಾಗಿದೆ. ಆಪ್ಷನ್ ಎಂಟ್ರಿಯಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್ ಗಳಿಗೆ ಅವಕಾಶ ಕೊಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಹೇಳಿದ್ದಾರೆ. ಒಟ್ಟು 9,000 ಸೀಟುಗಳನ್ನು ಉನ್ನತ ಶಿಕ್ಷಣ ಇಲಾಖೆ ಮತ್ತೆ ಸೇರಿಸಿದ್ದು, ಇಷ್ಟು ಸೀಟು ಹಂಚಿಕೆಗೆ ಲಭ್ಯವಾಗಿದೆ. ಇಂದು ಸಂಜೆ 5 ರಿಂದ ಆ.8ರವರೆಗೆ ಆಪ್ಷನ್ ಎಂಟ್ರಿಗೆ ಅವಕಾಶ ಇರುತ್ತದೆ. 

ಸೀಕ್ರೆಟ್ ಕೀ ಆನ್ ಲೈನ್ ಮೂಲಕ UGCET-23 ಪರಿಶೀಲನೆ ಕಡ್ಡಾಯವಾಗಿ ಮಾಡಬೇಕು. ಕೋರ್ಸ್ ಸ್ಲಿಪ್ ಪಡೆದಿರುವ ಅಭ್ಯರ್ಥಿಗಳು, ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಅರ್ಹರಾಗಿರುತ್ತಾರೆ. UG NEET-23ಕ್ಕೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಲ್ಲಿ Secret Key ಯನ್ನು ವೈದ್ಯಕೀಯ ಕೋರ್ಸ್‌ಗಳ ಆಪ್ಷನ್ ಎಂಟ್ರಿಗೆ ಬಳಸಬೇಕು. www.kea.kar.nic.in ವೆಬ್ಸೈಟ್ ನಲ್ಲಿ KEA ಆಪ್ಷನ್ ಎಂಟ್ರಿ ಅರ್ಜಿ ಸಲ್ಲಿಸಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದರು.

Latest Videos
Follow Us:
Download App:
  • android
  • ios