Asianet Suvarna News Asianet Suvarna News

SSLC Toppers 2023 ಇವರೇ ನೋಡಿ: ಪೂರಕ ಪರೀಕ್ಷೆಗೆ ಮೇ 15ರೊಳಗೆ ಅರ್ಜಿ ಸಲ್ಲಿಸಿ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಮೇ 15ರೊಳಗೆ ನೋಂದಣಿ ಮಾಡಿಸಿಕೊಳ್ಳಬಹುದು.

Karnataka SSLC Supplementary Exam 2023 Register by May 15 Check Toppers Details Here sat
Author
First Published May 8, 2023, 12:06 PM IST

ಬೆಂಗಳೂರು (ಮೇ 08): ಕರ್ನಾಟಕದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ 8,35,102 ಜನ ವಿದ್ಯಾರ್ಥಿಗಳ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 7,00,619 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು, 1,34,483 ಅನುತ್ತೀರ್ಣರಾಗಿದ್ದಾರೆ. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಧೃತಿಗೆಡದೇ ಮೇ 15ರೊಳಗೆ ಸಪ್ಲಿಮೆಂಟರಿ ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡು ಮತ್ತೊಮ್ಮೆ ಪರೀಕ್ಷೆ ಬರೆದು ಉತ್ತೀರ್ಣರಾಗಬಹುದು.

ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನನಗೆ ನಿಗದಿಗಿಂತ ಕಡಿಮೆ ಅಂಕಗಳು ಬಂದಿವೆ ಅಥವಾ ಅನುತ್ತೀರ್ಣರಾಗಿದ್ದ ಬಗ್ಗೆ ಅನುಮಾನಗಳಿದ್ದರೆ ನಿಮ್ಮ ಉತ್ತರ ಪತ್ರಿಕೆಗಳ ಫೋಟೋ ಕಾಪಿಗಳನ್ನು (ನಕಲು ಪ್ರತಿಗಳು) ಪಡೆಯಲು ಮೇ 8 ರಿಂದ ಮೇ 14ರೊಳಗೆ ಅರ್ಜಿ ಸಲ್ಲಿಕೆ ಮಾಡಬಹುದು. ಇನ್ನು ಮರು ಮೌಲ್ಯಮಾಪನಕ್ಕೆ ಮೇ 15 ರಿಂದ ಮೇ 21ರವರೆಗೆ ಅರ್ಜಿ ಸಲ್ಲಿಸಬಹುದು. ಜೊತೆಗೆ, ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಪೂರಕ ಪರೀಕ್ಷೆಯನ್ನು (Supplementary examination) ತೆಗೆದುಕೊಳ್ಳಲು ಇಂದಿನಿಂದ (ಮೇ 8) ಮೇ 15ರೊಳಗೆ ನೋಂದಣಿ ಮಾಡಿಸಿಕೊಳ್ಳಬಹುದು. 

ಕರ್ನಾಟಕ ಎಸ್‌ಎಸ್‌ಎಲ್‌ಸಿ 2023ರ ಫಲಿತಾಂಶ ಪ್ರಕಟ: ಚಿತ್ರದುರ್ಗ ಪ್ರಥಮ, ಮಂಡ್ಯ 2ನೇ ಸ್ಥಾನ

ಶಾಲಾ ಹಂತದಲ್ಲಿಯೇ ತಾತ್ಕಾಲಿಕ ಅಂಕಪಟ್ಟಿ ಲಭ್ಯ:  ಶಾಲೆಗಳ ಕ್ರೋಢೀಕೃತ ಫಲಿತಾಂಶ ಪಟ್ಟಿ ಹಾಗೂ ತಾತ್ಕಾಲಿಕ ಅಂಕಪಟ್ಟಿಯನ್ನು ಮಂಡಲಿಯ ಜಾಲತಾಣ https://kseab.karnataka.gov.in ದ ಶಾಲಾ ಲಾಗಿನ್‌ನಲ್ಲಿ ದಿನಾಂಕ 08-05-2023 ರಂದು ಮಧ್ಯಾಹ್ನ 1.00 ಗಂಟೆಯ ನಂತರ ನೀಡಲಾಗುವುದು. ಶಾಲಾ ಹಂತದಲ್ಲಿ ಅಂದೇ ಮುದ್ರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷಾ ಫಲಿತಾಂಶವನ್ನು ಪೌಢಶಾಲೆಗಳಲ್ಲಿ ಈ ದಿನವೇ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.

ರಾಜ್ಯದ ಟಾಪರ್ಸ್‌ಗಳ ವಿವರ ಇಲ್ಲಿದೆ ನೋಡಿ... (Karnataka SSLC Toppers List 2023)

ಚಿಕ್ಕಬಳ್ಳಾಪುರದ ಯಶಸ್‌ಗೌಡ : ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಟಾಪರ್‌ ಯಶಸ್‌ಗೌಡ, ನಾನು ಟಾಪರ್‌ ಆಗ್ತೀನಿ ಎನ್ನುವ ನಂಬಿಕೆಯಿತ್ತು. ಇನ್ನಿ ನಿರ್ಮಲಾನಂದ ಸ್ವಾಮೀಜಿ ಆಶೀರ್ವಾದ, ಮನೆಯವರ ಆಶೀರ್ವಾದ ಮತ್ತು ಪ್ರೋತ್ಸಾಹದಿಂದ ಈ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಹಾರ್ಡ್‌ವರ್ಕ್‌ ಜೊತೆಗೆ ಸ್ಮಾರ್ಟ್‌ ವರ್ಕ್‌ ಕೂಡ ಮಾಡಿದ್ದೆನು. ಶಿಕ್ಷಕರಿಂದ 6.30ರವರೆಗೆ ಡೌಟ್‌ ಕೇಳಿ ಪರಿಹರಿಸಿಕೊಳ್ಳುತ್ತಿದ್ದೆನು. ಮನೆಯಲ್ಲಿಯೂ ಕೂಡ ಶ್ರಮವಹಿಸಿ ಓದುತ್ತಿದ್ದೆನು. ಮುಂದೆ ನಾನು ಇಂಜಿನಿಯರ್‌ ಆಗಬೇಕು ಎಂದುಕೊಂಡಿದ್ದೇನೆ. 

Karnataka SSLC Supplementary Exam 2023 Register by May 15 Check Toppers Details Here sat

ಮುದ್ದೇಬಿಹಾಳದ  ಭೀಮನಗೌಡ ಹನಮಂತಗೌಡ ಬಿರಾದಾರ್: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾ. ನಾಲ್ವತವಾಡದ ಬಳಿ ಇರುವ SDVV ಸಂಘದ ಪಾಟೀಲ್ ಆಕ್ಸ್‌ಫರ್ಡ್ ಶಾಲೆಯ ವಿದ್ಯಾರ್ಥಿ ಭೀಮನಗೌಡ ಹನಮಂತಗೌಡ ಬಿರಾದಾರ್ 625ಕ್ಕೆ 625 ಅಂಕ ಪಡೆದಿದ್ದಾರೆ. ಈತನಿಗೆ ಶಾಲೆ ಹಾಗೂ ತಾಲೂಕಿನಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. 

Karnataka SSLC Supplementary Exam 2023 Register by May 15 Check Toppers Details Here sat
ಸವದತ್ತಿಯ ಅನುಪಮಾ ಶ್ರೀಶೈಲ ಹಿರೇಹೊಳಿ: ಬೆಳಗಾವಿ ಜಿಲ್ಲೆಉ ಸವದತ್ತಿಯ ಅನುಪಮಾ ಶ್ರೀಶೈಲ ಹಿರೇಹೊಳಿ ರಾಜ್ಯದ ಟಾಪರ್‌ಗಳ ಪೈಕಿ ಒಬ್ಬರಾಗಿದ್ದಾರೆ. ಸವದತ್ತಿಯ ಕುಮಾರೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ, ಕಳೆದ ಕಳೆದ ವರ್ಷ ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದಾಳೆ. ಈ ವಿದ್ಯಾರ್ಥಿನಿಯ ತಾಯಿ ರಾಜಶ್ರೀ ಸವದತ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

Karnataka SSLC Supplementary Exam 2023 Register by May 15 Check Toppers Details Here sat

ಬೆಂಗಳೂರಿನ ಭೂಮಿಕಾ ಪೈ: ಇನ್ನು ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಮೆಕಾಲೆ ಖಾಸಗಿ ಶಾಲೆಯ ವಿದ್ಯಾರ್ಥಿನಿ ಭೂಮಿಕಾ ಆರ್. ಪೈ - 625 ಅಂಕ ಪಡೆದ ವಿದ್ಯಾರ್ಥಿನಿ ಆಗಿದ್ದಾಳೆ, ಈ ವಿದ್ಯಾರ್ಥಿನಿಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಕುಟುಂಬ ಸದಸ್ಯರಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ. ಇನ್ನು ಖಾಸಗಿ ಕಾರ್ಯ ನಿಮಿತ್ತ ಉಡುಪಿಗೆ ತೆರಳಿದ್ದಾಳೆ.

Karnataka SSLC Supplementary Exam 2023 Register by May 15 Check Toppers Details Here sat

ಕರ್ನಾಟಕದಲ್ಲಿ ಪ್ರಧಾನಿ ಮೋದಿ ಪ್ರಚಾರ ಅಂತ್ಯ: 18 ಸಮಾವೇಶ, 6 ರೋಡ್‌ ಶೋಗಳ ಮಾಹಿತಿ ಇಲ್ಲಿದೆ!

ಕಳೆದ 5 ವರ್ಷಗಳ ಫಲಿತಾಂಶ ವಿವರ ಇಲ್ಲಿದೆ: 

  • ವರ್ಷ         ಪರೀಕ್ಷಾರ್ಥಿಗಳು    ಉತ್ತೀರ್ಣ    ಶೇಕಡಾ
  • 2022-23     835102         700619     83.89
  • 2021-22     860164         732268     85.13
  • 2020-21     871443         871442     99.99
  • 2019-20     811050         582316     71.80
  • 2018-19     825468         608336     73.70 
Follow Us:
Download App:
  • android
  • ios