ಶಾಲೆ ಆರಂಭ ಸ್ವಲ್ಪ ಲೇಟ್, SSLC Resultಗೆ ಮುಹೂರ್ತ ಫಿಕ್ಸ್

  • ರಾಜ್ಯದಲ್ಲಿ ಕೊರೋನಾ ಹಿನ್ನೆಲೆ ಶಾಲಾ-ಕಾಲೇಜುಗಳ ಆರಂಭ ಸದ್ಯಕ್ಕಿಲ್ಲ
  • ಶಿಕ್ಷಣ ಇಲಾಖೆ ಆಯುಕ್ತರೊಂದಿಗೆ ಮುಖ್ಯಮಂತ್ರಿ  ವಿಡಿಯೋ ಕಾನ್ಫರೆನ್ಸ್
  • ಎಸ್‌ಎಸ್‌ಎಲ್ಸಿ ಫಲಿತಾಂಶಕ್ಕೆ ದಿನಾಂಕ ನಿಗದಿ
Karnataka SSLC results to be announced on Aug 7 snr

ಬೆಂಗಳೂರು (ಆ.06) ರಾಜ್ಯದಲ್ಲಿ ಕೊರೋನಾ ಹಿನ್ನೆಲೆ ಶಾಲಾ-ಕಾಲೇಜುಗಳು ಬಂದ್ ಆಗಿ 2 ವರ್ಷಗಳೇ ಆಗುತ್ತಲಿದ್ದು, ಇದೀಗ ಮತ್ತೆ ಶಾಲೆ ಆರಂಭಿಸುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. 

ಈಗಾಗಲೇ ಶಾಲೆ ಪ್ರಾರಂಭಿಸುವಂತೆ ಸರ್ಕಾರಕ್ಕೆ  ತಜ್ಞರ ಸಮಿತಿ ವರದಿ ಸಲ್ಲಿಸಿದ್ದು, ಭೌತಿಕ ತರಗತಿ ಅಥವಾ ವಿದ್ಯಾಗಮ ಪ್ರಾರಂಭಿಸಲು ಸಲಹೆ ನೀಡಿದ್ದಾರೆ. ಈ ಬಗ್ಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಶಿಕ್ಷಣ ‌ಇಲಾಖೆ ಆಯುಕ್ತರು ಚರ್ಚೆ ನಡೆಸಿದ್ದಾರೆ. ಅಲ್ಲದೇ SSLC ಫಲಿತಾಂಶದ ಬಗ್ಗೆಯೂ ಚರ್ಚಿಸಲಾಗಿದೆ.

10ನೇ ವಯಸ್ಸಿಗೆ 10ನೇ ತರಗತಿ ಡಿಸ್ಟಿಂಕ್ಷನ್‌ನಲ್ಲಿ ಪಾಸು ಮಾಡಿದ ಬಾಲಕ

ಶಾಲೆ ಪ್ರಾರಂಭಕ್ಕೆ ತಜ್ಞರು ‌ಕೊಟ್ಟಿರುವ ವರದಿಯ ಬಗ್ಗೆ ಚರ್ಚೆ ನಡೆದಿದ್ದು, ಹಂತವಾಗಿ ವಿದ್ಯಾಗಮ ಪ್ರಾರಂಭದ ಬಗ್ಗೆ ಚರ್ಚಿಸಿದ್ದಾರೆ. 

 ನಾಳೆ SSLC ಫಲಿತಾಂಶ ಪ್ರಕಟ :  2020-21 ನೇ ಸಾಲಿನ SSLC ಫಲಿತಾಂಶ ಆಗಸ್ಟ್ 7 ರಂದು (ನಾಳೆ ) ಪ್ರಕಟವಾಗಲಿದೆ.  ಸಿಎಂ ಜೊತೆ ವಿಡಿಯೋ ಕಾನ್ಪರೆನ್ಸ್ ಬಳಿಕ SSLC ಫಲಿತಾಂಶ ಪ್ರಕಟದ ಬಗ್ಗೆ ಘೋಷಣೆ ಮಾಡಲಾಗಿದೆ.    

Latest Videos
Follow Us:
Download App:
  • android
  • ios