Asianet Suvarna News Asianet Suvarna News

10ನೇ ವಯಸ್ಸಿಗೆ 10ನೇ ತರಗತಿ ಡಿಸ್ಟಿಂಕ್ಷನ್‌ನಲ್ಲಿ ಪಾಸು ಮಾಡಿದ ಬಾಲಕ

ಉತ್ತರ ಪ್ರದೇಶದ ಹತ್ತು ವರ್ಷದ ಬಾಲಕ ರಾಷ್ಟ್ರಂ ಆದಿತ್ಯ ಶ್ರೀ ಕೃಷ್ಣ ಎಂಬಾತ 10ನೇ ತರಗತಿ ಪರೀಕ್ಷೆಯನ್ನು ಪಾಸು ಮಾಡುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾನೆ. ವಿಶೇಷ ಅನುಮತಿಯೊಂದಿಗೆ ಹತ್ತನೇ ತರಗತಿ ಎಕ್ಸಾಮ್ ಬರೆಯಲು ಉತ್ತರ ಪ್ರದೇಶದ ಮಾಧ್ಯಮಿಕ ಶಿಕ್ಷಣ ಮಂಡಳಿ ಈತನಿಗೆ ಅವಕಾಶ ಕಲ್ಪಿಸಿತ್ತು.

10 year old student child passes 10th class examination
Author
Bengaluru, First Published Aug 4, 2021, 3:56 PM IST

ಪ್ರತಿಭೆಗೆ ಯಾವುದೇ ವಯಸ್ಸಿನ ಹಂಗಿರುವುದಿಲ್ಲ. ತೀರಾ ಚಿಕ್ಕ ವಯಸ್ಸಿನಲ್ಲೂ ಹಿರಿದಾದ ಸಾಧನೆ ಮಾಡಬಹುದು. ವೃದ್ಧಾಪ್ಯದಲ್ಲಿ ಜಗತ್ತೇ ಬೆಕ್ಕಸ ಬೆರಗಾಗುವಂಥ ಪ್ರತಿಭೆಯನ್ನು ಪ್ರದರ್ಶಿಸಬಹುದು. ಪ್ರತಿಭೆಗೆ ಯಾವುದೇ ಜಾತಿ, ವರ್ಗ, ಹಿರಿಯ, ಕಿರಿಯ, ಬಣ್ಣ, ಬಡತನ, ಸಿರಿತನ ಸೇರಿದಂತೆ ಅಡ್ಡಿಗಳಿರುವುದಿಲ್ಲ. ಈ ಪೀಠಿಕೆ ಯಾಕೆಂದರೆ, 10 ವರ್ಷದ ಬಾಲಕನೊಬ್ಬ ಹತ್ತನೇ ಕ್ಲಾಸ್ ಎಕ್ಸಾಮ್ ಬರೆದು ಪಾಸಾಗಿದ್ದಾನೆ.

ಲಸಿಕೆ ಹಾಕಿಸದ್ರೆ ಮಕ್ಕಳನ್ನು ಶಾಲೆಗೆ ಕಳಿಸಲು ಶೇ.48ರಷ್ಟು ಪೋಷಕರು ರೆಡಿ

10 ವರ್ಷ ವಯಸ್ಸು ಎಂದರೆ, ಎರಡೋ, ಮೂರೋ ಕ್ಲಾಸಿನಲ್ಲಿ ಓದಲು ಬೇಕಾಗಿರುವಂಥ ವಯಸ್ಸು. ಆದರೆ, ಈ ಬಾಲಕ ಮಾತ್ರ ತನ್ನ ವಯಸ್ಸಿಗೆ ಮೀರಿದ ಪ್ರತಿಭೆಯನ್ನು ಮೆರೆದಿದ್ದಾನೆ. 10 ವರ್ಷದಲ್ಲೇ ಹತ್ತನೇ ತರಗತಿ ವಿದ್ಯಾರ್ಥಿಗೆ ಬೇಕಾಗುವ ತಿಳಿವಳಿಕೆ ಜ್ಞಾನವನ್ನು, ಗ್ರಹಿಸುವ ಶಕ್ತಿಯನ್ನು ಹೊಂದಿದ್ದಾನೆ. ಆತನೀಗ ಹತ್ತನೇ ತರಗತಿಯಲ್ಲಿ ಶೇ.79 ಅಂಕಗಳನ್ನು ಗಳಿಸುವುದರ ಮೂಲಕ ಎಲ್ಲರೂ ನಿಬ್ಬೆರಾಗುವಂತೆ ಮಾಡಿದ್ದಾನೆ.

ಹತ್ತನೇ ಕ್ಲಾಸ್ ಪಾಸು ಮಾಡಿದ ಹತ್ತು ವರ್ಷ ವಯಸ್ಸಿನ ವಿದ್ಯಾರ್ಥಿಯ ಹೆಸರು ರಾಷ್ಟ್ರಂ ಆದಿತ್ಯ ಶ್ರೀಕೃಷ್ಣ. ಉತ್ತರ ಪ್ರದೇಶದ ಈ ಬಾಲಕ ವಿಶೇಷ ಅನುಮತಿಯನ್ನು ಪಡೆದುಕೊಂಡು ಹತ್ತನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದು. ಪರೀಕ್ಷೆಯಲ್ಲಿ ಶೇ.79ರಷ್ಟು ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾನೆ. 

ಮುಂಬರುವ ಅಕ್ಟೋಬರ್ 11ಕ್ಕೆ ಆದಿತ್ಯ 11 ವರ್ಷಕ್ಕೆ ಕಾಲಿಡಲಿದ್ದಾನೆ. ಉತ್ತರ ಪ್ರದೇಶದ ಶಿಕ್ಷಣ ಮಂಡಳಿಯ 10ನೇ ತರಗತಿ ಪರೀಕ್ಷೆಯಲ್ಲಿ ಆದಿತ್ಯ ಹಿಂದಿಯಲ್ಲಿ 82, ಇಂಗ್ಲಿಷ್‌ನಲ್ಲಿ 83, ಗಣಿತದಲ್ಲಿ 64, ವಿಜ್ಞಾನದಲ್ಲಿ 76, ಸಮಾಜ ವಿಜ್ಞಾನದಲ್ಲಿ 84 ಮತ್ತು ಕಲೆಯಲ್ಲಿ 86 ಅಂಕಗಳನ್ನು ಪಡೆದುಕೊಂಡಿದ್ದಾನೆ.

ಖಾಲಿ ಇರುವ ವಿವಿಧ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ ಸಖತ್ ಸಂಬಳ

ರಾಷ್ಟ್ರಂ ಆದಿತ್ಯ ಶ್ರೀ ಕೃಷ್ಣ ಒಬ್ಬ ಅದ್ಭುತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾನೆ. ತನ್ನಂಥ ಚಿಕ್ಕ ವಯಸ್ಸಿನ ಹಾಗೂ ಹಿರಿಯ ವಯಸ್ಸಿನ ವಿದ್ಯಾರ್ಥಿಗಳಿಗೆ ಆತ ಮಾದರಿಯಾಗಿದ್ದಾನೆ ಎಂದು ಶಾಲೆಗಳ ಜಿಲ್ಲಾ ಇನ್ಸ್‌ಪೆಕ್ಟರ್ ಮುಕೇಶ್ ಕುಮಾರ್ ಸಿಂಗ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಂ ಆದಿತ್ಯ ಶ್ರೀ ಕೃಷ್ಣ ಬಾಲಕನಲ್ಲಿದಲ್ಲಿ ವಿಶಿಷ್ಟ ಪ್ರತಿಭೆಯನ್ನು ಪರಿಗಣಿಸಿ ಉತ್ತರ ಪ್ರದೇಶದ ಮಾಧ್ಯಮಿಕ ಶಿಕ್ಷಣ ಮಂಡಳಿ(ಯುಪಿಎಸ್‌ಇಬಿ)ಯು 2019ರಲ್ಲಿ 9ನೇ ತರಗತಿಗೆ ದಾಖಲಾಗಲು ಅವಕಾಶ ಕಲ್ಪಿಸಿತ್ತು. ಆದಿತ್ಯ ಲಖನೌ ನಗರದ ಎಂಡಿ ಶುಕ್ಲಾ ಇಂಟರ್ ಕಾಲೇಜ್‌ನಲ್ಲಿ ಪ್ರವೇಶ ಪಡೆದುಕೊಂಡಿದ್ದ. 

ಆದಿತ್ಯ ಕಟ್ಟಾ ಓದುಗ, ಮತ್ತು ಯಾವುದೇ ಪರಿಕಲ್ಪನೆಯನ್ನು ಗ್ರಹಿಸಲು ಚುರುಕಾಗಿರುತ್ತಾನೆ. ಆತನು ವಿಷಯಗಳ ಬಗ್ಗೆ ಪೂರ್ತಿ ತಿಳಿದುಕೊಳ್ಳುತ್ತಾನೆ ಮತ್ತು ಕಣ್ಣು ಮುಚ್ಚಿಯೂ ಗಣಿತದ ಸಮಸ್ಯೆಗಳನ್ನು ಪರಿಹರಿಸಬಲ್ಲನು. ಅವನು ಯೋಗವನ್ನು ಚೆನ್ನಾಗಿ ತಿಳಿದಿರುತ್ತಾನೆ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ದೀರ್ಘವಾಗಿ ಮಾತನಾಡಬಲ್ಲನು. ನಮ್ಮ ಶಾಲೆಗೆ ಒಂದು ಆಸ್ತಿ ಎಂದು ಎಂಡಿ ಶುಕ್ಲಾ ಇಂಟರ್ ಕಾಲೇಜ್‌ ಪ್ರಿನ್ಸಿಪಾಲ್ ಎಚ್ ಎನ್ ಉಪಾಧ್ಯಯ ಅವರು ಆದಿತ್ಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ನಕಲಿ ವಿಶ್ವವಿದ್ಯಾಲಯಗಳು UP, ದೆಹಲಿಯಲ್ಲೇ ಹೆಚ್ಚು!

ಉತ್ತರ ಪ್ರದೇಶದ ಮಾಧ್ಯಮಿಕ ಶಿಕ್ಷಣ ಮಂಡಳಿಯು ತುಲನಾತ್ಮಕವಾಗಿ ಕಿರಿಯ ಮಗುವಿಗೆ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲು ಇದು ಎರಡನೇ ಬಾರಿಗೆ ಅವಕಾಶ ನೀಡಿದೆ. ಈ ಹಿಂದೆ, ಬಾಲ ಪ್ರತಿಭೆ ಸುಷ್ಮಾ ವರ್ಮಾ 5 ನೇ ವಯಸ್ಸಿನಲ್ಲಿ 9 ನೇ ತರಗತಿಗೆ ದಾಖಲಾಗಿದ್ದರು. 2007 ರಲ್ಲಿ ಯುಪಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ ಅವರು ದೇಶದ ಕಿರಿಯ ಮೆಟ್ರಿಕ್ಯುಲೇಟ್ ಆದರು. ಮಂಡಳಿಯ ನಿಯಮಗಳು 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲು ವಿದ್ಯಾರ್ಥಿಗೆ ಕನಿಷ್ಠ 14 ವರ್ಷ ವಯಸ್ಸಾಗಿರಬೇಕು. ಆದರೆ, ಕೆಲವು ವಿಶೇಷ ಪ್ರತಿಭೆಯನ್ನು ಹೊಂದಿರುವ ಮಕ್ಕಳಿಗೆ ವಿಶೇಷತ ಅನುಮತಿಯೊಂದಿಗೆ ಹತ್ತನೇ ತರಗತಿ ಪರೀಕ್ಷೆಯ ಅವಕಾಶ ಕಲ್ಪಿಸಲಾಗುತ್ತದೆ.

Follow Us:
Download App:
  • android
  • ios