Asianet Suvarna News Asianet Suvarna News

ಓರ್ವ ವಿದ್ಯಾರ್ಥಿನಿಯಿಂದ SSLC ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿ ಸಿಕ್ತು 1 ಕೃಪಾಂಕ

* ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿ ಸಿಕ್ತು 1 ಕೃಪಾಂಕ 
* ಎಸ್ ಎಸ್ ಎಲ್ ಸಿ ಕನ್ನಡ ಪರೀಕ್ಷೆಯಲ್ಲಿ ಗೊಂದಲದ 1  ಪ್ರಶ್ನೆಗೆ ಕೃಪಾಂಕ‌ ನೀಡಿದ ಇಲಾಖೆ  
* ದಾವಣಗೆರೆ ಮೂಲದ ಬನಶ್ರೀ ಭಟ್ ವಿಡಿಯೋ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಳು

Karnataka Secondary Education Examination Board gives 1 grace marks To SSLC Students rbj
Author
Bengaluru, First Published Aug 1, 2021, 4:31 PM IST
  • Facebook
  • Twitter
  • Whatsapp

ಬೆಂಗಳೂರು, (ಆ.01): ಎಸ್‌ಎಸ್‌ಎಲ್‌ ಸಿ ಕನ್ನಡ ಪರೀಕ್ಷೆಯ  ಒಂದು ಪ್ರಶ್ನೆಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಕೃಪಾಂಕ‌ ನೀಡಿದೆ. ಈ ಮೂಲಕ ಗೊಂದಲಕ್ಕೆ ತೆರೆಬಿದ್ದಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದ ಬಳಿಕ ದಾವಣಗೆರೆ ವಿದ್ಯಾರ್ಥಿನಿ ಕನ್ನಡ ಭಾಷೆ  ಪರೀಕ್ಷೆಯಲ್ಲಿ ಒಂದು ಪ್ರಶ್ನೆ ಗೊಂದಲವನ್ನುಂಟು ಮಾಡಿದ್ದು ಅದಕ್ಕೆ ಗ್ರೇಸ್ ಮಾರ್ಕ್ಸ್ ನಿಡಬೇಕೆಂದು ಒತ್ತಾಯಿಸಿದ್ದರು. ಅದರಂತೆ ವಿದ್ಯಾರ್ಥಿನಿ ಹೋರಾಟಕ್ಕೆ ಒಂದು ಕೃಪಾಂಕ ನೀಡಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಡೇಟ್ ಫಿಕ್ಸ್

2021ನೇ ಸಾಲಿನ ಜುಲೈ 19 ಮತ್ತು ಜುಲೈ 22ರಂದು ನಡೆದ ಎಸ್‌ಎಸ್‌ಎಲ್ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಕೀ ಉತ್ತರಗಳನ್ನು ಮಂಡಳಿಯ ವೆಬ್ಸೈಟ್ನಲ್ಲಿ ಅಳವಡಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಅಕ್ಷೇಪಣೆಗಳಿದ್ದಲ್ಲಿ ಸಲ್ಲಿಸುವಂತೆ ತಿಳಿಸಲಾಗಿತ್ತು. ಈ ಸಂಬಂಧ ಒಟ್ಟು 11 ವಿಷಯಗಳ ಕೀ ಉತ್ತರಗಳ ಮೇಲೆ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. 

ಇನ್ನು ದಾವಣಗೆರೆ ಮೂಲದ ಬನಶ್ರೀ ಭಟ್ ವಿಡಿಯೋ ಮೂಲಕ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್‌ ಅವರಿಗೆ ಗೊಂದಲದ ಪ್ರಶ್ನೆ ಬಗ್ಗೆ  ಮನವಿ  ಮಾಡಿದ್ದಳು.

ಬಳಿಕ ಅಕ್ಷೇಪಣೆಗಳನ್ನು ಸಂಬಂಧಿಸಿದ ವಿಷಯ ತಜ್ಞರು ಸಮಿತಿಯವರಿಂದ ಮತ್ತೊಮ್ಮೆ ಪರಿಶೀಲನೆಗೆ ಒಳಪಡಿಸಲಾಗಿತ್ತು. ಸದ್ಯ ಈಗ ಒಟ್ಟು 11 ವಿಷಯಗಳ ಪೈಕಿ ಪ್ರಥಮ ಭಾಷೆ ಕನ್ನಡ ವಿಷಯದ ಪ್ರಶ್ನೆ ಸಂಖ್ಯೆ 19ಕ್ಕೆ 01 ಕೃಪಾಂಕ ನೀಡಬಹುದೆಂದು ಪರಿಶೀಲನಾ ಸಮಿತಿ ಅಭಿಪ್ರಾಯ ತಿಳಿಸಿದ್ದಾರೆ.

ಅದರಂತೆ ಕನ್ನಡ ವಿಷಯದ  ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೂ 1 ಕೃಪಾಂಕ ನೀಡಲಾಗಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಣೆ ಹೊರಡಿಸಿದೆ.

Follow Us:
Download App:
  • android
  • ios