2022-23ನೇ ಸಾಲಿನ SSLC ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

2022-23ನೇ ಸಾಲಿನ 10ನೇ ತರಗತಿಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿ ಶನಿವಾರ ಬಿಡುಗಡೆಗೊಳಿಸಿದೆ. 

karnataka sslc 2022-23 exam provisional time table released gow

ಬೆಂಗಳೂರು (ಅ.29): 2022-23ನೇ ಸಾಲಿನ 10ನೇ ತರಗತಿಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿ ಶನಿವಾರ ಬಿಡುಗಡೆಗೊಳಿಸಿದೆ. ಪ್ರಕಟಗೊಂಡಿರುವ SSLC ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ಪ್ರಕಾರ ಏಪ್ರಿಲ್ 1ರಿಂದ 15ರ ವರೆಗೆ ಪರೀಕ್ಷೆ ನಡೆಯಲಿದೆ. ಈ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ನವೆಂಬರ್ 28ರ ವರೆಗೂ ಅವಕಾಶ ನೀಡಲಾಗಿದೆ.

ತಾತ್ಕಾಲಿಕ ವೇಳಾಪಟ್ಟಿಯ ವಿಷಯವಾರು ವಿವರ ಹೀಗಿದೆ
ಏಪ್ರಿಲ್ 1- ಪ್ರಥಮ ಭಾಷೆ ವಿಷಯ.
ಏಪ್ರಿಲ್ 4-ಗಣಿತ.
ಏಪ್ರಿಲ್-6 ದ್ವಿತೀಯ ಭಾಷೆ ವಿಷಯ.
ಏಪ್ರಿಲ್ 10- ವಿಜ್ಞಾನ.
ಏಪ್ರಿಲ್ 12- ತೃತೀಯ ಭಾಷೆ ವಿಷಯ.
ಏಪ್ರಿಲ್ 15- ಸಮಾಜ ವಿಜ್ಞಾನ.

ನ.6ರಂದು ನಡೆಯುವ ಟಿಇಟಿ ಸಂಪೂರ್ಣ ಕಟ್ಟುನಿಟ್ಟು

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ: 2023ರ ಮಾರ್ಚ್‌ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದ್ದು, ಮಾ.10 ರಿಂದ 29 ರವರೆಗೂ ಪರೀಕ್ಷೆ ನಡೆಯಲಿವೆ. ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೂ ಎಲ್ಲ ಪರೀಕ್ಷೆಗಳು ನಡೆಯಲಿವೆ. ವೇಳಾಪಟ್ಟಿಬಗ್ಗೆ ಆಕ್ಷೇಪಣೆಗಳಿದ್ದರೆ ವಿದ್ಯಾರ್ಥಿಗಳು ಹಾಗೂ ಪೋಷಕರು ನ.21ರೊಳಗೆ ಸಲ್ಲಿಸಬೇಕು. ಆಕ್ಷೇಪಣೆಗಳನ್ನು jdexam.dpue@gmail.com ಮೇಲ್‌ಗೆ ಮಾತ್ರ ಸಲ್ಲಿಸಬಹುದು. 

24,000 ಪೇದೆಗಳ ನೇಮಕಕ್ಕೆ ಇಂಗ್ಲಿಷ್‌, ಹಿಂದೀಲಿ ಪರೀಕ್ಷೆ: ಕನ್ನಡಿಗರ ಆಕ್ರೋಶ

ಮಾ.10 ಕನ್ನಡ, ಅರೇಬಿಕ್‌, 11ಕ್ಕೆ ಗಣಿತ, ಶಿಕ್ಷಣ, 13ಕ್ಕೆ ಅರ್ಥಶಾಸ್ತ್ರ, 14ಕ್ಕೆ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ. 15ಕ್ಕೆ ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್‌. 16ಕ್ಕೆ ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ. 17ಕ್ಕೆ ಮಾಹಿತಿ ತಂತ್ರಜ್ಞಾನ, ರೀಟೈಲ್‌, ಆಟೋಮೊಬೈಲ್‌, ಹೆಲ್ತ್‌ಕೇರ್‌, ಬ್ಯೂಟಿ ಆ್ಯಂಡ್‌ ವೆಲ್‌ನೆಸ್‌. 18ಕ್ಕೆ ಭೂಗೋಳಶಾಸ್ತ್ರ, ಜೀವಶಾಸ್ತ್ರ. 20ಕ್ಕೆ ಇತಿಹಾಸ, ಭೌತಶಾಸ್ತ್ರ. 21ಕ್ಕೆ ಹಿಂದಿ. 23 ಕ್ಕೆ ಇಂಗ್ಲಿಷ್‌. 25ಕ್ಕೆ ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ. 27ಕ್ಕೆ ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ ಹಾಗೂ ಮಾ.29 ರಂದು ಸಮಾಜ ಶಾಸ್ತ್ರ, ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಸೈನ್ಸ್‌ ವಿಷಯಕ್ಕೆ ಪರೀಕ್ಷೆ ನಡೆಯಲಿದೆ.

Latest Videos
Follow Us:
Download App:
  • android
  • ios