PUC Supplementary Exam Results: ನಾಳೆ ಬೆಳಗ್ಗೆ 11 ಗಂಟೆಗೆ ದ್ವಿತೀಯ ಪಿಯು ಪೂರಕ ಪರೀಕ್ಷೆ ಫಲಿತಾಂಶ
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಜೂ.20ರಂದು ಬೆಳಗ್ಗೆ 11ಕ್ಕೆ ಪ್ರಕಟಗೊಳ್ಳಲಿದೆ.
ಬೆಂಗಳೂರು (ಜೂ.19): ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ (Second PUC Supplementary Result 2023 ) ಜೂ.20ರಂದು ಬೆಳಗ್ಗೆ 11ಕ್ಕೆ ಪ್ರಕಟಗೊಳ್ಳಲಿದೆ. ಈ ಬಗ್ಗೆ ಶಿಕ್ಷಣ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆ ತಿಳಿಸಿದೆ. ಪರೀಕ್ಷೆ ಬರೆದವರು ಫಲಿತಾಂಶಕ್ಕಾಗಿ ಇಲಾಖೆಯ ಅಧಿಕೃತ ವೆಬ್‌ತಾಣ karresults.nic.in ನಲ್ಲಿ ಬೆಳಗ್ಗೆ 11 ಗಂಟೆಯಿಂದ ಲಾಗ್ ಇನ್ ಆಗಿ ಫಲಿತಾಂಶವನ್ನು ಪರಿಶೀಲಿಸಬಹುದು. ಕಳೆದ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಮೇ 23ರಿಂದ 3 ಜೂನ್ ವರೆಗೆ ಜರುಗಿತ್ತು.
ಸವಣೂರು: ಎಸ್ಸೆಸ್ಸೆಲ್ಸಿ 98ನೇ ಬ್ಯಾಚಿನ ವಿದ್ಯಾರ್ಥಿಗಳಿಂದ ಗುರುವಂದನೆ, ಶಿಕ್ಷಕರಿಗೆ ನೆನಪಿನ
ಪರೀಕ್ಷಾ ಕಾರ್ಯಕ್ಕೆ ಪ್ರತಿ ಕೇಂದ್ರಕ್ಕೆ ಒಬ್ಬ ಜಂಟಿ ಮುಖ್ಯಸ್ಥ, ಸಿಟ್ಟಿಂಗ್, ಸಿಟ್ಟಿಂಗ್ ಸ್ಕ್ವಾಡ್, ಸಂಚಾರಿ ಸ್ಕ್ವಾಡ್ ಸೇರಿ ಇತರ ಸಿಬ್ಬಂದಿ ನಿಯೋಜಿಸಲಾಗಿತ್ತು. ಈ ಮೂಲಕ ತುಂಬಾ ಭದ್ರತೆಯಿಂದ ಪರೀಕ್ಷೆ ನಡೆಸಲಾಗಿತ್ತು. ಫಲಿತಾಂಶಗಳನ್ನು ಪರಿಶೀಲಿಸಲು, ವಿದ್ಯಾರ್ಥಿಗಳು ಈ ಕೆಳಗಿನ ಹಂತವನ್ನು ಅನುಸರಿಸಿ.
HUMAN INTEREST: ಹಗಲಿನಲ್ಲಿ ಬಡ ಮಕ್ಕಳಿಗೆ ಉಚಿತ ಪಾಠ, ರಾತ್ರಿ ಕೂಲಿ ಕೆಲಸ: ಹೃದಯ ಗೆದ್ದ ಅತಿಥಿ ಉಪನ್ಯಾಸಕ!
ಇಲಾಖೆಯ ಅಧಿಕೃತ ವೆಬ್‌ತಾಣ karresults.nic.in ಗೆ ಭೇಟಿ ನೀಡಿ.
ಸ್ಕ್ರೀನ್ ಮೇಲೆ ರಿಸಲ್ಟ್ ಲಿಂಕ್ ತೆರೆದ ಬಳಿಕ ಅದರ ಮೇಲೆ ಕ್ಲಿಕ್ಕಿಸಿ
ಬಳಿಕ ಲಾಗಿನ್ ಕ್ರೆಡೆನ್ಶಿಯಲ್ಸ್ ಗೆ ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್ ಅನ್ನು ಬಳಸಿ
ಸ್ಕ್ರೀನ್ ಮೇಲೆ ನಿಮ್ಮ ರಿಸಲ್ಟ್ ಕಾಣಿಸಿಕೊಳ್ಳಲಿದೆ.
ರಿಸಲ್ಟ್ ಚೆಕ್ ಮಾಡಿ ಮತ್ತು ಪೇಜ್ ಅನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ