ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟಿಸಿದ ಸಚಿವ, ಎಲ್ಲ ವಿದ್ಯಾರ್ಥಿಗಳೂ ಪಾಸ್

* ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ
* ಕೊರೋನಾ ಭೀತಿಯಿಂದ ರದ್ದು ಮಾಡಲಾಗಿದ್ದ ಪರೀಕ್ಷೆ
* ಎಸ್‌ಎಸ್‌ಎಲ್‌ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ಪಿಯುಸಿ ರಿಸಲ್ಟ್

Karnataka second puc result 2021 Announced By Minister Suresh Kumar rbj

ಬೆಂಗಳೂರು, (ಜು.20): ಕೊರೋನಾ ಭೀತಿಯಿಂದ ರದ್ದು ಮಾಡಲಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಾಗಿದ್ದು,ಎಲ್ಲ ವಿದ್ಯಾರ್ಥಿಗಳೂ ಪಾಸ್ ಆಗಿದ್ದಾರೆ.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇಂದು (ಮಂಗಳವಾರ) ಪರೀಕ್ಷೆ ಇಲ್ಲದ ಫಲಿತಾಂಶವನ್ನು ಪ್ರಕಟಿಸಿದರು. 

"

ದ್ವಿತೀಯ PUC ಫೇಲಾದವರಿಗೆ ಸಿಹಿ ಸುದ್ದಿ: ಹೈಕೋರ್ಟ್‌ಗೆ ಮಹತ್ವದ ಅಭಿಪ್ರಾಯ ತಿಳಿಸಿದ ಸರ್ಕಾರ

ಎಸ್‌ಎಸ್‌ಎಲ್‌ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ಪಿಯುಸಿ ರಿಸಲ್ಟ್ ನೀಡಲಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಅಂದ್ರ ಒಟ್ಟು 6,66,497 ವಿದ್ಯಾರ್ಥಿಗಳು ಪಾಸ್ ಆಗಿದ್ದು, ಈ ಪೈಕಿ 3,35138 ಬಾಲಕರು ಹಾಗೂ 1,47055 ಬಾಲಕೀಯರು ಉತ್ತೀರ್ಣರಾಗಿದ್ದಾರೆ.

ಎಸ್.ಎಸ್.ಎಲ್.ಸಿ. ಹಾಗೂ ಪ್ರಥಮ ಪಿಯು ಹಾಗೂ ಆಂತರಿಕ ಅಂಕಗಳನ್ನು ಮೌಲ್ಯಾಂಕನ ಮಾಡಿ ಫಲಿತಾಂಶ ನೀಡಲಾಗಿದ್ದು,  4 ಲಕ್ಷದ 50 ಸಾವಿರ 706 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ನಲ್ಲಿ ತೇರ್ಗಡೆಯಾಗಿದ್ದಾರೆ.  1,95,650 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ರೆ, 147055 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನು  68729 ವಿದ್ಯಾರ್ಥಿಗಳು ಜಸ್ಟ್ ಪಾಸ್ ಆಗಿದ್ದಾರೆ.

ಈಗ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಇಲಾಖೆ ವೆಬ್​ಸೈಟ್ www.karresults.nic.in ​ ನಲ್ಲಿ ನೋಡಬಹುದಾಗಿದೆ.

Latest Videos
Follow Us:
Download App:
  • android
  • ios