PUC Time Table ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕ ಬದಲಾವಣೆ. ಇಲ್ಲಿದೆ ಹೊಸ ವೇಳಾಪಟ್ಟಿ

* ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕ ಬದಲಾವಣೆ
* ಮತ್ತೊಂದು ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ
* ದ್ವಿತೀಯ ಪಿಯುಸಿ ಹಾಗೂ ಜೆಇಇ ಪರೀಕ್ಷೆಯು ಒಟ್ಟಿಗೆ ಬಂದ ಕಾರಣ ವೇಳಾಪಟ್ಟಿ ಬದಲಾವಣೆ

Karnataka second puc annual exams  provisional time table revised rbj

ಬೆಂಗಳೂರು, (ಮಾ.02): ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ(PUC Exams) ಮತ್ತೊಂದು ತಾತ್ಕಾಲಿಕ ವೇಳಾಪಟ್ಟಿ( (Exam Timetable)) ಬಿಡುಗಡೆ ಮಾಡಿದೆ.

ದ್ವಿತೀಯ ಪಿಯುಸಿ ಹಾಗೂ ಜೆಇಇ ಪರೀಕ್ಷೆಯು ಒಟ್ಟಿಗೆ ಬಂದ ಕಾರಣ  ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯಲ್ಲಿ(Provisional Exam Timetable) ಬದಲಾವಣೆ ಮಾಡಿದ್ದು,  ಏಪ್ರಿಲ್ 22ರಿಂದ ಮೇ 5ರವರೆಗೆ ಪರೀಕ್ಷೆಗಳು ನಡೆಯಲಿವೆ.

ಮಹತ್ವದ ನಿರ್ಧಾರಕ್ಕೆ ಮುಂದಾದ ಶಿಕ್ಷಣ ಇಲಾಖೆ , SSLC, PUC ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

ಈ ಪರಿಷ್ಕೃತ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮಾರ್ಚ್ 5ರೊಳಗೆ ಅವಕಾಶ ಇದೆ ಎಂದು  ಪದವಿ ಪೂರ್ವ ಶಿಕ್ಷಣ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಈ ಮೊದಲು ಏಪ್ರಿಲ್ 16 ಇಂದ  ಮೇ 06 ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಿಗಧಿ ಮಾಡಲಾಗಿತ್ತು. ಆದ್ರೆ, ಜೆಇಇ ಪರೀಕ್ಷೆಯು ಒಟ್ಟಿಗೆ ಬಂದ ಕಾರಣ ಈ ಬದಲಾವಣೆ ಮಾಡಲಾಗಿದೆ.

ಸಚಿವ ನಾಗೇಶ್ ಟ್ವೀಟ್
ಇನ್ನು ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್‌ ಟ್ವೀಟ್ ಮಾಡಿದ್ದು, ರಾಜ್ಯದ ದ್ವಿತೀಯ ಪಿಯು ಪರೀಕ್ಷೆ ಮತ್ತು ಎನ್‌ಟಿ‌ಎ ನಡೆಸುವ ಜೆಇಇ ಪರೀಕ್ಷೆಯ ಕೆಲ ಪತ್ರಿಕೆಗಳು ಒಂದೇ ದಿನಾಂಕದಂದು ಬಂದಿರುವ ಕಾರಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ವೇಳಾಪಟ್ಟಿ (ತಾತ್ಕಾಲಿಕ) ಪರಿಷ್ಕರಿಸಲಾಗಿದೆ.  ಈ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮಾ.5ರ ಸಂಜೆ 5ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಹೊಸ ವೇಳಾಪಟ್ಟಿಯನ್ನು ಹಂಚಿಕೊಂಡಿದ್ದಾರೆ.

ಪರಿಷ್ಕೃತಗೊಂಡ ತಾತ್ಕಾಲಿಕ ವೇಳಾಪಟ್ಟಿ ಹೀಗಿದೆ.
ಏ. 22 - ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಏ. 23 - ಹಿಂದಿ
ಏ. 25 - ಅರ್ಥಶಾಸ್ತ್ರ
ಏ. 26 -  ಹಿಂದೂಸ್ಥಾನಿ ಸಂಗೀತ, ಮನಃಶಾಸ್ತ್ರ, ರಾಸಾಯನ ಶಾಸ್ತ್ರ
ಏ. 27 - ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಏ. 28 - ಕನ್ನಡ, ಅರೇಬಿಕ್
ಏ. 30 - ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
ಮೇ 2 - ಭೂಗೋಳಶಾಸ್ತ್ರ, ಜೀವಶಾಸ್ತ್ರ
ಮೇ 4 - ಇಂಗ್ಲಿಷ್
ಮೇ 5 - ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್
ಮೇ 6 - ಗಣಿತಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲಗಣಿತ
ಮೇ  7 - ಐಚ್ಚಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ
ಮೇ 9 - ಇತಿಹಾಸ, ಭೌತಶಾಸ್ತ್ರ
ಮೇ 11 - ರಾಜ್ಯಶಾಸ್ತ್ರ ಸಂಖ್ಯಾಶಾಸ್ತ್ರ

ಕೊರೋನಾ ಕಾರಣದಿಂದ ಕಳೆದೆರಡು ವರ್ಷದಿಂದ ಶಿಕ್ಷಣ ಕ್ಷೇತ್ರ ಭಾರಿ ಹೊಡೆತಬಿದ್ದಿದೆ. ಸರಿಯಾದ ಸಮಯಕ್ಕೆ ಪಾಠ ಇಲ್ಲ. ಸರಿಯಾದ ಸಮಯಕ್ಕೆ ಪರೀಕ್ಷೆಗಳು ನಡೆದಿಲ್ಲ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೊರೋನಾ ಕಂಟಕವಾಗಿದೆ.

 ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಅಂತಿಮ‌ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳಿಗೆ, ಕಡ್ಡಾಯ ಹಾಜರಾತಿ‌ ನಿಯಮವನ್ನು ಸಡಿಲಿಸಲು ಸರ್ಕಾರ ನಿರ್ಧರಿಸಿದೆ.

ಭೌತಿಕ ತರಗತಿಗಳ ಆರಂಭದ ವಿಳಂಬ, ಆನ್‌ಲೈನ್ ತರಗತಿಗಳ ಸಮಯದಲ್ಲಿ ನೆಟ್‌ವರ್ಕ್ ಸಮಸ್ಯೆಗಳನ್ನು ಪರಿಗಣಿಸಿ, ಈ ಶೈಕ್ಷಣಿಕ ವರ್ಷದಲ್ಲಿ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲು 75% ಹಾಜರಾತಿಯನ್ನು ಕಡ್ಡಾಯಗೊಳಿಸದಿರಲು ಇಲಾಖೆ ತೀರ್ಮಾನಿಸಿದೆ. 

Latest Videos
Follow Us:
Download App:
  • android
  • ios