ನವೆಂಬರ್‌ನಲ್ಲಿ ಮತ್ತೆ 6 ದಿನ ಸರಣಿ ರಜೆ!? ದಸರಾ ಬೆನ್ನಲ್ಲೇ ಮತ್ತೊಂದು ಮಿನಿ ವೆಕೇಶನ್ !
ಈಗಷ್ಟೇ ದೀಪಾವಳಿ ಸರಣಿ ರಜೆ ಮುಗಿಸಿ ಶಾಲೆಗಳತ್ತ ಮುಖಮಾಡಿದ್ದ ವಿದ್ಯಾರ್ಥಿಗಳಿಗೆ ಇದೀಗ ಮತ್ತೊಮ್ಮೆ ಸಾಲು ಸಾಲು ರಜೆ ಅನುಭವಿಸುವ ಕಾಲ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು: ದಸರಾ, ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಮಿಂದೆದ್ದ ರಾಜ್ಯದ ವಿದ್ಯಾರ್ಥಿಗಳು ಈಗಷ್ಟೇ ಶಾಲಾ ಕಾಲೇಜುಗಳತ್ತ ಮುಖ ಮಾಡಿದ್ದರು. ಇನ್ನು ಈ ಬಾರಿ ದಸರಾ ರಜೆಯ ಜತೆಗೆ ಮಳೆರಾಯ ಕೂಡಾ ಹೆಚ್ಚು ಅಡ್ಡಿಪಡಿಸಿದ್ದರಿಂದ ಶಾಲಾ ಮಕ್ಕಳು ಶಾಲೆಗೆ ಹೋಗಿದ್ದಕ್ಕಿಂತ ರಜಾ ಮಜಾವನ್ನು ಅನುಭವಿಸಿದ್ದೇ ಹೆಚ್ಚು.
ಇದೀಗ ಹಬ್ಬ ಹರಿದಿನಗಳನ್ನು ಮುಗಿಸಿ ಶಾಲೆಗಳತ್ತ ಮುಖ ಮಾಡಿದ್ದ ವಿದ್ಯಾರ್ಥಿಗಳಿಗೆ ಇದೀಗ ನವೆಂಬರ್ 13ರಿಂದ 18ರ ವರೆಗೆ ಸರಣಿ ರಜೆ ಅನುಭವಿಸಲು ರೆಡಿಯಾಗಿದ್ದಾರೆ. ಹೌದು, ಈ ವರ್ಷದ ಕ್ಯಾಲೆಂಡರ್ ಪ್ರಕಾರ, ನವೆಂಬರ್ 13ರಂದು ತುಳಸಿ ಪೂಜೆ ಇದೆ. ಇದಾದ ಮರುದಿನ ಅಂದರೆ ನವೆಂಬರ್ 14 ಮಕ್ಕಳ ದಿನಾಚರಣೆ ಇದೆ. ಇನ್ನು ನವೆಂಬರ್ 15ರಂದು ಗುರು ನಾನಕ್ ಜಯಂತಿ ಇದೆ. ಇದಾದ ಬಳಿಕ ನವೆಂಬರ್ 16 (ಶನಿವಾರ) ಕೇವಲ ಅರ್ಧ ದಿನ ಮಾತ್ರ ಶಾಲೆ ಇರಲಿದೆ. ಇನ್ನು ನವೆಂಬರ್ 17 ಭಾನುವಾರ ಇರುವುದರಿಂದ ಶಾಲಾ ಕಾಲೇಜುಗಳಿಗೆ ರಜೆ ಇರುತ್ತದೆ. ಇದಾದ ಬಳಿಕ ನವೆಂಬರ್ 18ರಂದು ಕನಕದಾಸ ಜಯಂತಿ ಇದೆ. ಹೀಗಾಗಿ ನವೆಂಬರ್ 13ರಿಂದ ನವೆಂಬರ್ 18ರ ಅವಧಿಯೊಳಗೆ ಕರ್ನಾಟಕ ರಾಜ್ಯದ ಬಹುತೇಕ ಶಾಲೆಗಳಿಗೆ ರಜೆ ಇರಲಿದೆ.
ಬೆಂಗಳೂರು-ಮಂಗಳೂರು ನಡುವೆ ಎಲ್ಲಾ ಕಾಲಕ್ಕೂ ಸಲ್ಲುವ ಹೈ-ಸ್ಪೀಡ್ ರೋಡ್, 2028ರಿಂದ ನಿರ್ಮಾಣ ಕಾರ್ಯ?
ಇದು ನೆನಪಿರಲಿ: ಈ ಸಂದರ್ಭದಲ್ಲಿ ಶಾಲೆಗಳಿಗೆ ರಜೆ ನೀಡುವ ಅಧಿಕಾರ ಆಯಾ ಶಾಲೆಗಳ ಸಂಸ್ಥೆಗಳ ತೀರ್ಮಾನಕ್ಕೆ ಬಿಟ್ಟ ವಿಚಾರವಾಗಿದೆ. ಈ ಎಲ್ಲಾ ಮಾಹಿತಿಗಳು ವರ್ಷದ ಕ್ಯಾಲೆಂಡರ್‌ನಲ್ಲಿ ನೀಡಿದ ಮಾಹಿತಿಗಳಾಗಿರುತ್ತವೆ.