ಬೆಂಗಳೂರು( ಅ. 22) ಶಾಲಾ ಕಾಲೇಜು ಆರಂಭಕ್ಕೆ  ಒಂದು ಕಡೆ ಸರ್ಕಾರ  ಆಲೋಚನೆ ಮಾಡುತ್ತಿದ್ದರೆ ಇನ್ನೊಂದು ಕಡೆ  ಪಠ್ಯದಲ್ಲಿ ಕಡಿತ ಮಾಡಿದೆ.  ಪಿಯುಸಿ ಮಕ್ಕಳಿಗೆ ಪಠ್ಯಹೊರೆಯಾಗುತ್ತಿದ್ದು, ಅವುಗಳನ್ನು ತಪ್ಪಿಸುವ ಸಲುವಾಗಿ ಸರ್ಕಾರ ಪಠ್ಯ ಕಡಿತಗೊಳಿಸಲು ಮುಂದಾಗಿದೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಪಿಯು ಮಂಡಳಿಯ ಶೇ. 30ರಷ್ಟು ಪಠ್ಯವನ್ನು ಕಡಿತಗೊಳಿಸಿರುವುದಾಗಿ ತಿಳಿಸಿದೆ.

ಕಡಿತಗೊಂಡ ಪಠ್ಯದ ಕುರಿತು ಇಲಾಖೆಯ ವೆಬ್​ಸೈಟ್​ನಲ್ಲಿ ಮಾಹಿತಿ ಪ್ರಕಟಿಸಲಾಗಿದೆ. ಪಠ್ಯಗಳನ್ನು ಕಡಿತಗೊಳಿಸುವ ಕುರಿತು ಪಠ್ಯ ಪುಸ್ತಕ ರಚನಾ ಸಮಿತಿ ಮತ್ತು ಪರಿಷ್ಕರಣಾ ಸಮಿತಿಯ ಸದಸ್ಯರು ವರದಿ ನೀಡಿದ್ದು ಅದರ ಅನುಸರವಾಗಿ ಕ್ರಮ ಕೈಗೊಳ್ಳಲಾಗಿದೆ.  ವಿದ್ಯಾರ್ಥಿಗಳಿಗೆ ಹೊರೆ ಕಡಿಮೆ ಮಾಡಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಕೊರೋನಾ ನಡುವೆ ಕಾಲೇಜು ಆರಂಭಕ್ಕೆ ಡೇಟ್ ಫಿಕ್ಸ್

ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೀವ ವಿಜ್ಞಾನ, ಗಣಿತ  ಹೊರತುಪಡಿಸಿ ಇತರೆ 33 ವಿಷಯಗಳಲ್ಲಿ ಶೇ.30ರಷ್ಟು ಪಠ್ಯ ಕಡಿತಗೊಳಿಸಲಾಗಿದೆ. ಇದು ಕೇಲವ 2020–21ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗಲಿದೆ.

ವಿಜ್ಞಾನ ವಿಷಯವನ್ನು ಸಿಬಿಎಸ್​ಸಿ ಅಳವಡಿಕೆಯಂತೆ ಯಥಾವತ್​ ಮುಂದುವರಿಸಲಾಗಿದೆ.  ಕೊರೋನಾ ಕಾರಣಕ್ಕೆ ಶಾಲೆ ಶಾಲೆ ಕಾಲೇಜು ಆರಂಭ ಸದ್ಯಕ್ಕಿಲ್ಲ ಎಂಬ  ಮಾತು ಇದ್ದರೂ ಉನ್ನತ ಶಿಕ್ಷಣ ಕಾಲೇಜುಗಳನ್ನು ತೆರೆಯಲು ಇನ್ನೊಂದು ಕಡೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.