Eggs in Mid Day Meal ಶೀಘ್ರವೇ ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆ ವಿತರಣೆ ಸಾಧ್ಯತೆ
ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ನಿಭಾಯಿಸಲು ಉತ್ತರ ಕರ್ನಾಟಕದ ಏಳು “ಹಿಂದುಳಿದ ಜಿಲ್ಲೆಗಳಲ್ಲಿ” ಮೊಟ್ಟೆಗಳನ್ನು ಬಡಿಸುವ ಪ್ರಾಯೋಗಿಕ ಅಧ್ಯಯನಕ್ಕೆ ನಡೆಸಿದ್ದು, ಶೀಘ್ರವೇ ಈ ಯೋಜನೆಗೆ ಚಾಲನೆ ಸಿಗಲಿದೆ ಎನ್ನಲಾಗಿದೆ.
ಬೆಂಗಳೂರು: ರಾಜ್ಯಾದ್ಯಂತ ಮಧ್ಯಾಹ್ನ ಬಿಸಿಯೂಟದಲ್ಲಿ ( mid-day meal menu ) ಡಿಸೆಂಬರ್ ನಿಂದ ಶಾಲಾ ಮಕ್ಕಳಿಗೆ ಮೊಟ್ಟೆಯನ್ನು (Egg) ವಿತರಿಸಲು ಶಿಕ್ಷಣ ಇಲಾಖೆ (Education Department) ಮುಂದಾಗಿತ್ತು. ಇದಕ್ಕೆ ಭಾರೀ ದೊಡ್ಡ ಮಟ್ಟದಲ್ಲೇ ಪರ ವಿರೋಧ ವ್ಯಕ್ತವಾಗಿತ್ತು. ಇದೀಗ ಮುಂದಿನ ಶೈಕ್ಷಣಿಕ ಅಧಿವೇಶನದಿಂದ ಕರ್ನಾಟಕದಾದ್ಯಂತ ಹೆಚ್ಚಿನ ಶಾಲೆಗಳಲ್ಲಿ ಮಧ್ಯಾಹ್ನದ ಊಟದದಲ್ಲಿ ಮೊಟ್ಟೆಯನ್ನು ವಿತರಿಸಲು ಚಿಂತನೆ ನಡೆದಿದೆ ಎಂದು ವರದಿಯಾಗಿದೆ.
ಮಕ್ಕಳಲ್ಲಿ ಅಪೌಷ್ಟಿಕತೆಯನ್ನು (malnutrition) ನಿಭಾಯಿಸಲು ಡಿಸೆಂಬರ್ 2021 ಮತ್ತು ಮಾರ್ಚ್ 2022 ರ ನಡುವೆ ಉತ್ತರ ಕರ್ನಾಟಕದ ಏಳು “ಹಿಂದುಳಿದ ಜಿಲ್ಲೆಗಳಲ್ಲಿ (backward districts)” ಮೊಟ್ಟೆಗಳನ್ನು ಬಡಿಸುವ ಪ್ರಾಯೋಗಿಕ ಅಧ್ಯಯನ ಮಾಡಲು ಬಿಜೆಪಿ ರಾಜ್ಯ ಸರ್ಕಾರವು ಯೋಜಿಸುತ್ತಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಮೊಟ್ಟೆಗಳನ್ನು ಸೇವಿಸದವರಿಗೆ ಹಣ್ಣುಗಳು ಅಥವಾ ಇತರ ಪರ್ಯಾಯಗಳನ್ನು ಒದಗಿಸಲಾಗುತ್ತದೆ ಎಂದು ಹೇಳಲಾಗಿದೆ.
ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡುವ ಬಗ್ಗೆ ಲಿಂಗಾಯತ ಮತ್ತು ಜೈನ ಸಮುದಾಯಗಳ ಪ್ರಭಾವಿ ವ್ಯಕ್ತಿಗಳು, ಮಠಾಧೀಶರು, ಸ್ವಾಮೀಜಿಗಳು ಧರ್ಮದರ್ಶಿಗಳು ಸೇರಿದಂತೆ ವಿವಿಧ ಗುಂಪುಗಳು ವಿರೋಧಿಸಿದ್ದವು. ಆದರೆ ಮಕ್ಕಳು ಮತ್ತು ಪೋಷಕರು ಈ ಯೋಜನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕಾರಣ ರಾಜ್ಯ ಸರಕಾರ ಪ್ರಾಯೋಗಿಕವಾಗಿ ಮೊಟ್ಟೆ ವಿತರಿಸಲು ಮುಂದಾಗಿದೆ ಎನ್ನಲಾಗಿದೆ.
Vijayapura ಶಿಕ್ಷಕಿ ಬೀಳ್ಕೋಡುಗೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು!
ವರದಿಯನ್ನು ಅಂತಿಮಗೊಳಿಸಿ ರಾಜ್ಯ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಇಡಲಾಗುವುದು. ಮತ್ತು ಪ್ರತಿ ಮೊಟ್ಟೆಗೆ ಸುಮಾರು 6.50 ರೂ.ಗಳ ಯೋಜಿತ ವೆಚ್ಚವನ್ನು ಸರ್ಕಾರವು ಭರಿಸಲಿದೆ ಎಂದು ಬಲ್ಲ ಮೂಲಗಳ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಈ ನಿರ್ಧಾರವನ್ನು ಕೇಂದ್ರಕ್ಕೆ ತಿಳಿಸಲಾಗಿದ್ದು, ಪ್ರಸ್ತಾವನೆಯನ್ನು ರಾಜ್ಯದ ಹಣಕಾಸು ಇಲಾಖೆಯ ಮುಂದೆ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕ್ಯಾಬಿನೆಟ್ ಒಪ್ಪಿಗೆ ಕೊಟ್ಟರೆ, ಕರ್ನಾಟಕವು ಶಾಲಾ-ಊಟದ ಕಾರ್ಯಕ್ರಮದ ಮೆನುವಿನಲ್ಲಿ ಮೊಟ್ಟೆಗಳನ್ನು ಪರಿಚಯಿಸಿದ ಮೊದಲ ಬಿಜೆಪಿ ಆಡಳಿತದ ರಾಜ್ಯವಾಗಲಿದೆ. ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ ಮೊಟ್ಟೆಗಳು ಈ ಹಿಂದೆ ನೀಡಲಾಗಿದ್ದು, 2021-22ರಲ್ಲಿ ಪ್ರತಿ ಮಗುವಿಗೆ ವಾರಕ್ಕೆ ಒಂದು ಮೊಟ್ಟೆಯನ್ನು ಕಡ್ಡಾಯಗೊಳಿಸಲಾಗಿದೆ.
Bidar ಬೀದಿ ನಾಯಿಗಳಂತೆ ಕಿತ್ತಾಡಿಕೊಂಡ ಪಾಟೀಲ್ ಕುಟುಂಬ!
ದಿನ ಬಿಟ್ಟು ದಿನಕ್ಕೆ ಒಂದರಂತೆ ಮಕ್ಕಳಿಗೆ ಮೊಟ್ಟೆಗಳನ್ನು ಒದಗಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಅಧಿಕೃತ ಔಪಚಾರಿಕತೆಗಳು ಮುಂದುವರಿದ ಹಂತದಲ್ಲಿವೆ. ಒಂದೇ ಬಾರಿಗೆ ರಾಜ್ಯಾದ್ಯಂತ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಗದಿದ್ದರೂ, ಹೆಚ್ಚಿನ ಜಿಲ್ಲೆಗಳನ್ನು ಪಟ್ಟಿಗೆ ಸೇರಿಸಲಾಗುತ್ತದೆ. ಪ್ರಾಯೋಗಿಕ ಅಧ್ಯಯನದಿಂದಾಗಿ ಮಕ್ಕಳಲ್ಲಿ ಪೌಷ್ಠಿಕಾಂಶದ ಮಟ್ಟದಲ್ಲಿ ಸುಧಾರಣೆಯನ್ನು ನೋಡಲು ರಾಜ್ಯವು ಒಂದು ಅಧ್ಯಯನವನ್ನು ಕೈಗೊಂಡಿದೆ. ಫಲಿತಾಂಶಗಳು ಆಶಾದಾಯಕವಾಗಿವೆ” ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕರ್ನಾಟಕ ಶಿಕ್ಷಣ ಸಚಿವ ಬಿ ಸಿ ನಾಗೇಶ್ , ಈ ಬಗ್ಗೆ ಖಾಸಗಿ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆಂದು ವರದಿಯಾಗಿದೆ. "ನಾವು ಮೊಟ್ಟೆಗಳು ಅಥವಾ ಅದಕ್ಕೆ ಪರ್ಯಾಯಗಳನ್ನು ಒದಗಿಸಬಹುದಾದ ಹೆಚ್ಚಿನ ಜಿಲ್ಲೆಗಳನ್ನು ಸೇರಿಸಲು ಯೋಚಿಸುತ್ತಿದ್ದೇವೆ. ಇದು ಏಳು ಜಿಲ್ಲೆಗಳಲ್ಲಿ ಪ್ರಯೋಗದ ಪ್ರತಿಕ್ರಿಯೆಯನ್ನು ಆಧರಿಸಿದೆ. ಹಾಜರಾತಿಯ ದೃಷ್ಟಿಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ನಾಗೇಶ್ ತಿಳಿಸಿದ್ದಾರೆನ್ನಲಾಗಿದೆ. ಆದರೆ ಬಹಿರಂಗವಾಗಿ ಈ ಬಗ್ಗೆ ಸರಕಾರ ಎಲ್ಲೂ ಈವರೆಗೆ ಹೇಳಿಕೆ ನೀಡಿಲ್ಲ.
ಮೊಟ್ಟೆ ಬದಲಾಗಿ ಏನೆಲ್ಲ ತಿನ್ನಬಹುದೆಂದು ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಗೆ ಸರಕಾರ ಮನವಿ ಮಾಡಿದ್ದು, ಸೋಯಾ, ಶೇಂಗಾ, ಬೆಲ್ಲ ಸೇರಿದಂತೆ ಹಲವು ಸಲಹೆಗಳು ಬಂದಿದೆ ಎನ್ನಲಾಗಿದೆ.