ಕೆಇಎ ಪಿಜಿ ಸಿಇಟಿ ಫಲಿತಾಂಶ ಪ್ರಕಟ: ನ.21ರ ಒಳಗೆ ಕಾಲೇಜು ಪ್ರವೇಶಾತಿಗೆ ಸೂಚನೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪಿಜಿ ಸಿಇಟಿ ಫಲಿತಾಂಶವನ್ನು ಪ್ರಕಟಿಸಿದೆ ಮತ್ತು ನವೆಂಬರ್ 21 ರೊಳಗೆ ಕಾಲೇಜು ಪ್ರವೇಶಾತಿಗೆ ಸೂಚನೆ ನೀಡಿದೆ. ಛಾಯ್ಸ್ ಆಯ್ಕೆಗೆ ನ.19ರವರೆಗೆ ಅವಕಾಶ ನೀಡಲಾಗಿದೆ.

Karnataka PGCET 2024 Result announced Notification for College Admissions by November 21 gow

ಬೆಂಗಳೂರು (ನ.16): ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪಿಜಿ ಸಿಇಟಿ ಫಲಿತಾಂಶ ಪ್ರಕಟಿಸಿದೆ. ನ.21ರೊಳಗೆ ಕಾಲೇಜು ಪ್ರವೇಶಾತಿ ಮಾಡಿಕೊಳ್ಳಲು ಸೂಚನೆ ನೀಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್ ಸೈಟ್ ನಲ್ಲಿ ಫಲಿತಾಂಶವನ್ನು ಪರಿಶೀಲನೆ ನಡೆಸಬಹುದು. ಈ ಫಲಿತಾಂಶವನ್ನು http://kea.kar.nic.in ನಲ್ಲಿ ಪ್ರಕಟಿಸಲಾಗಿದೆ. 

ಎಂಬಿಎ, ಎಂಸಿಎ, ಎಂಇ, ಎಂ.ಟೆಕ್‌ ಮತ್ತು ಎಂ.ಆರ್ಕ್‌ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಿದೆ.

ಛಾಯ್ಸ್ ಆಯ್ಕೆಗೆ ನ.19ರವರೆಗೆ ಅವಕಾಶ ನೀಡಲಾಗಿದೆ.ಅಭ್ಯರ್ಥಿಗಳು ತಮ್ಮ ಪೋಷಕರ ಜತೆ ಚರ್ಚಿಸಿ, ಸೂಕ್ತವಾದ ಛಾಯ್ಸ್‌ ದಾಖಲಿಸಬೇಕು. ಛಾಯ್ಸ್ 1 ಮತ್ತು 2 ಅನ್ನು  ಆಯ್ಕೆ‌ ಮಾಡಿದವರು ನ.20ರೊಳಗೆ ಶುಲ್ಕ ಪಾವತಿ ಮಾಡಬೇಕು. ನ. 21ರೊಳಗೆ ಕಾಲೇಜುಗಳಿಗೆ ದಾಖಲು ಮಾಡಿಕೊಳ್ಳಬೇಕು. 

ನಯನತಾರಾ- ಧನುಷ್ ನಡುವೆ ಕ್ಲಾಷ್: ನಟನ ವಿರುದ್ಧ ನಟಿ ಬಳಸಿರುವ ಆ ಜರ್ಮ ...

ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾಲೇಜು ದಾಖಲಾತಿಗೆ  ಹೋಗುವಾಗ  ವೆರಿಫಿಕೇಷನ್ ಸ್ಲಿಪ್ ಕಡ್ಡಾಯವಾಗಿದ್ದು, ಕೆಇಎಗೆ ನಮೂದಿಸಿರುವ ಕ್ಲೇಮ್ ಪ್ರಕಾರ ಮೂಲ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು. ಮೂಲ ದಾಖಲೆಗಳು ಇಲ್ಲದಿದ್ದರೆ ಕಾಲೇಜುಗಳಲ್ಲಿ ಪ್ರವೇಶ ಮಾಡಿಕೊಳ್ಳುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚನೆ ನೀಡಿದೆ.

Latest Videos
Follow Us:
Download App:
  • android
  • ios