Asianet Suvarna News Asianet Suvarna News

ಶಾಲಾ ಮಕ್ಕಳಿಗೆ ಭರ್ಜರಿ ಆಫರ್ : ಇನ್ಮುಂದೆ ಸಿಗುತ್ತೆ ತೊಗರಿಬೇಳೆ, ಎಣ್ಣೆ, ಉಪ್ಪು

ಶಾಲಾ ಮಕ್ಕಳಿಗೆ ತೊಗರಿಬೇಳೆ, ಎಣ್ಣೆ ಮತ್ತು ಉಪ್ಪು ವಿತರಿಸಲಾಗುತ್ತದೆ. ತರಗತಿವಾರು ಪ್ರಮಾಣವನ್ನು ನಿರ್ಧರಿಸಲಾಗಿದೆ. 

Karnataka Govt To Distribute Dal Oil salt To Students snr
Author
Bengaluru, First Published Dec 16, 2020, 7:42 AM IST

ಬೆಂಗಳೂರು (ಡಿ.16):  ಕೋವಿಡ್‌ ಕಾರಣದಿಂದ ಶಾಲೆಗಳನ್ನು ಮುಚ್ಚಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಸ್ಥಗಿತಗೊಳಿಸಿರುವುದಕ್ಕೆ ಪರಿಹಾರವಾಗಿ ಮಕ್ಕಳಿಗೆ ತೊಗರಿಬೇಳೆ, ಎಣ್ಣೆ ಮತ್ತು ಉಪ್ಪು ವಿತರಿಸಲು ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಕೊರೋನಾ ಸೋಂಕಿನಿಂದಾಗಿರುವ ಅನಾನುಕೂಲಗಳನ್ನು ಬಗ್ಗೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ, ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠದೆ ಮುಂದೆ ಬಂದಿತ್ತು. ಈ ವೇಳೆ ಸರ್ಕಾರಿ ವಕೀಲರು ವಾದ ಮಂಡಿಸಿ, ಮಧ್ಯಾಹ್ನ ಬಿಸಿಯೂಟ ಸ್ಥಗಿತಗೊಳಿಸಿದ್ದಕ್ಕೆ ಈಗಾಗಲೇ ಪರಿಹಾರ ರೂಪದಲ್ಲಿ ಪಡಿತರ ಧಾನ್ಯಗಳನ್ನು ವಿತರಿಸಲಾಗಿದೆ. 

ಇದೀಗ ನ್ಯಾಯಾಲಯದ ನಿರ್ದೇಶನದಂತೆ ಮಕ್ಕಳಿಗೆ ಪರಿಹಾರ ರೂಪದಲ್ಲಿ ತೊಗರಿಬೇಳೆ, ಅಡುಗೆ ಎಣ್ಣೆ ಮತ್ತು ಅಯೋಡೈಸ್ಡ್ ಉಪ್ಪು ವಿತರಿಸಲಾಗುವುದು. ಈ ಕುರಿತು ಮಂಗಳವಾರ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿ ಆದೇಶದ ಪ್ರತಿಯನ್ನು ಸಲ್ಲಿಸಿದರು. ಜತೆಗೆ, ನ್ಯಾಯಾಲಯ ಅನುಮತಿ ನೀಡಿದರೆ ಕೂಡಲೇ ವಿತರಣಾ ಕಾರ್ಯ ಆರಂಭಿಸಲಾಗುವುದು ಎಂದರು. ನ್ಯಾಯಪೀಠ ಪ್ರತಿಕ್ರಿಯಿಸಿ, ಎಷ್ಟುಸಮಯದಲ್ಲಿ ವಿತರಣೆ ಮಾಡಲಾಗುತ್ತದೆ ಎಂಬ ಬಗ್ಗೆ ವೇಳಾಪಟ್ಟಿಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಡಿ.22ಕ್ಕೆ ಮುಂದೂಡಿತು.

ಸರ್ಕಾರದಿಂದ ಇಲ್ಲಿದೆ ಗುಡ್ ನ್ಯೂಸ್ : RTE ವಿಚಾರವಿದು

ಎಷ್ಟುವಿತರಣೆ?:  ಒಂದನೇ ಹಂತದಲ್ಲಿ ನವೆಂಬರ್‌, ಡಿಸೆಂಬರ್‌ ತಿಂಗಳಿಗೆ 1ರಿಂದ 5ನೇ ತರಗತಿ ಮಕ್ಕಳಿಗೆ 1ಕೆ.ಜಿ. 406 ಗ್ರಾಂ ತೊಗರಿಬೇಳೆ, 1 ಲೀಟರ್‌ ಎಣ್ಣೆ, 6ರಿಂದ 10ನೇ ತರಗತಿ ಮಕ್ಕಳಿಗೆ 2 ಕೆ.ಜಿ. 835 ಗ್ರಾಂ ತೊಗರಿಬೇಳೆ ವಿತರಿಸಲಾಗುವುದು, ಎರಡನೇ ಹಂತದಲ್ಲಿ 2021ರ ಜನವರಿ, ಫೆಬ್ರವರಿಗೆ 1ರಿಂದ 5ನೇ ತರಗತಿವರೆಗೆ 1 ಕೆ.ಜಿ. 194 ಗ್ರಾಂ ತೊಗರಿಬೇಳೆ, 1 ಲೀಟರ್‌ ಎಣ್ಣೆ, 1 ಕೆ.ಜಿ. ಉಪ್ಪು, 9 ಮತ್ತು 10ನೇ ತರಗತಿ ಮಕ್ಕಳಿಗೆ 2 ಕೆ.ಜಿ. 624 ಗ್ರಾಂ ತೊಗರಿಬೇಳೆ, 1 ಲೀಟರ್‌ ಎಣ್ಣೆ, 1 ಕೆ.ಜಿ. ಉಪ್ಪು ವಿತರಿಸಲಾಗುವುದು. ಮೂರನೇ ಹಂತದಲ್ಲಿ 2021ರ ಮಾಚ್‌ರ್‍, ಏಪ್ರಿಲ್‌ಗೆ 1ರಿಂದ 5ನೇ ತರಗತಿವರೆಗೆ 529 ಗ್ರಾಂ ತೊಗರಿ ಬೇಳೆ, 1 ಲೀಟರ್‌ ಎಣ್ಣೆ, 9 ಮತ್ತು 10ನೇ ತರಗತಿ ಮಕ್ಕಳಿಗೆ 1 ಕೆ.ಜಿ. 521 ಗ್ರಾಂ ತೊಗರಿಬೇಳೆ, 1 ಲೀಟರ್‌ ಎಣ್ಣೆ ವಿತರಿಸಲಾಗುವುದು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

Follow Us:
Download App:
  • android
  • ios