ಗ್ಯಾರಂಟಿ ಯೋಜನೆಗಳಿಗಾಗಿ ಕೂಲಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕೆ ಕತ್ತರಿ ಹಾಕಿದ ಸರ್ಕಾರ!
ಕರ್ನಾಟಕ ಕಾಂಗ್ರೆಸ್ ಸರ್ಕಾರವು ತನ್ನ ಉಚಿತ ಗ್ಯಾರಂಟಿ ಯೋಜನೆಗಳಿಗಾಗಿ ಕೂಲಿ ಕಾರ್ಮಿಕರ ಮಕ್ಕಳಿಗೆ ನಿಡುತ್ತಿದ್ದ ಶೈಕ್ಷಣಿಕ ಸಹಾಯಧನಕ್ಕೆ ಶೇ.40 ರಿಂದ ಶೇ.70 ಕತ್ತರಿ ಹಾಕಿದೆ.
ಬೆಂಗಳೂರು (ನ.08): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರವು, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಮಿಕರ ಮಕ್ಕಳಿಗೆ ನಿಡಲಾಗುತ್ತಿದ್ದ ಸಹಾಯಧನಕ್ಕೆ ಶೇ.40 ರಿಂದ ಶೇ.70 ರಷ್ಟು ಕಡಿತ ಮಾಡಿದೆ.
ಹೌದು, ಗ್ಯಾರಂಟಿ ಹೊಡೆತಕ್ಕೆ ಮತ್ತೊಂದು ಯೋಜನೆಯ ಸಹಾಯಧನಕ್ಕೆ ಕತ್ತರಿ ಹಾಕುತ್ತಿದೆ. ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಕಸಿದುಕೊಂಡಿದೆ. ಕಟ್ಟಡ ಕಾರ್ಮಿಕರ ಮಕ್ಕಳ ಕಲಿಕೆ ಭಾಗ್ಯಕ್ಕೆ 'ಕಡಿತ' ಭಾಗ್ಯ ಕರುಣಿಸಿದೆ. ಕಾರ್ಮಿಕ ಇಲಾಖೆಯ ಸಚಿವ ಸಂತೋಷ್ ಲಾಡ್ ಅವರು ಕಟ್ಟಡ ಕಾರ್ಮಿಕ ಮಕ್ಕಳ ವಾರ್ಷಿಕ ಸಹಾಯಧನಕ್ಕೆ ಕತ್ತರಿ ಹಾಕಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನೀಡಲಾಗ್ತಿದ್ದ ಕಾರ್ಮಿಕ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕೆ ಭಾರೀ ಪ್ರಮಾಣದಲ್ಲಿ ಕಡಿತ ಮಾಡಿದೆ.
ಧರ್ಮಸ್ಥಳ ಸೌಜನ್ಯಾ ಪ್ರಕರಣ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸಿಬಿಐ: ಸಂತೋಷ್‌ರಾವ್‌ನೇ ಅತ್ಯಾಚಾರಿಯಂತೆ!
ಅಕ್ಟೋಬರ್ 30 ರಂದು ಅಧಿಸೂಚನೆ ಹೊರಡಿಸಿರುವ ಸರ್ಕಾರ, ವಾರ್ಷಿಕವಾಗಿ ಕನಿಷ್ಟ 5000 ದಿಂದ 60,000 ಸಹಾಯಧನ ನೀಡಲಾಗುತ್ತಿತ್ತು. ಆದರೆ, ಈ ಸಹಾಯಧನದ ಮೊತ್ತದಲ್ಲಿ ಕಾಂಗ್ರೆಸ್ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಕಡಿತ ಮಾಡಿದೆ. ಕಳೆದ ಸಾಲಿನಲ್ಲಿ ನೀಡುತ್ತಿದ್ದ ಸಹಾಯಧನದ ಹಣದಲ್ಲಿ ಪ್ರತಿ ವಿಭಾಗವಾರು ವಿವಿಧ ಹಂತಕ್ಕೆ ತಕ್ಕಂತೆ 1,100 ರೂ.ಗಳಿಂದ 11,000ರೂ.ಗಳನ್ನು ಕಡಿತಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.
ವಿಭಾಗಗಳು: ಹಿಂದಿನ ಮೊತ್ತ ಈಗಿನ ಮೊತ್ತ
1-4 ತರಗತಿ 5,000 1,100
5-8 ತರಗತಿ 8,000 1,250
9-10 ತರಗತಿ 12,000 3,000
ಪಿಯುಸಿ 15,000 4,600
ಪದವಿ 25,000 6,000
ಬಿಇ, ಬಿಟೆಕ್ 50,000 10,000
ಪಿಜಿ 30,000 10,000
ಐಟಿಐ/ಡಿಪ್ಲೊಮೊ 20,000 4,600
ನರ್ಸಿಂಗ್/ಪ್ಯಾರಾಮೆಡಿಕಲ್ 40,000 10,000
ಬಿ.ಇಡಿ 35,000 6,000
ಡಿ.ಇಡಿ 25,000 4,600
ವೈದ್ಯಕೀಯ 60,000 11,000
ಎಲ್ಎಲ್‌ಬಿ/ಎಲ್‌ಎಲ್‌ಎಂ 30,000 10,000
ಪಿಎಚ್‌ಡಿ/ಎಂ.ಫಿಲ್ 25,000 11,000
25 ಲಕ್ಷ ಕಾರ್ಮಿಕರ ಕಾರ್ಡ್ ರದ್ದುಗೊಳಿಸುವುದಾಗಿ ಹೇಳಿದ್ದ ಸಂತೋಷ್‌ಲಾಡ್: ರಾಜ್ಯದಲ್ಲಿ ಕಾರ್ಮಿಕ ಇಲಾಖೆಯಲ್ಲಿ ಬೋಗಸ್ ಕಾರ್ಡ್‌ಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸುಮಾರು 25 ಲಕ್ಷಕ್ಕೂ ಅಧಿಕ ಕಾರ್ಮಿಕರ ಕಾರ್ಡ್‌ಗಳನ್ನು ರದ್ದುಗೊಳಿಸುವ ಮುನ್ಸೂಚನೆಯನ್ನು ನೀಡಿದ್ದರು. ಅಂದರೆ, ಈ ಬಗ್ಗೆ ಅಕ್ಟೋಬರ್5 ರಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್, ರಾಜ್ಯದಲ್ಲಿರುವ ನಕಲಿ ಕಾರ್ಮಿಕರ ಕಾರ್ಡ್ ಗಳನ್ನು ಹುಡುಕಿ ತೆಗೆದು ಹಾಕುತ್ತೇವೆ. ರಾಜ್ಯದಲ್ಲಿ 45 ಲಕ್ಷ ಕಾರ್ಡ್‌ಗಳು ಕಾರ್ಮಿಕ ಇಲಾಖೆಯಲ್ಲಿವೆ. ಅದರಲ್ಲಿ ಶೇ. 60 ರಿಂದ ಶೇ.70 ನಕಲಿ ಕಾರ್ಡ್‌ಗಳಿವೆ. ನಮ್ಮ ಇಲಾಖೆಯಲ್ಲಿ ದುಡ್ಡು ಇದೆ ಅಂತಾ ಕಾರ್ಡ್ ಮಾಡಿಕೊಂಡಿದ್ದಾರೆ. ಹೀಗಾಗಿ ನಕಲಿ ಕಾರ್ಡ್ ಮಾಡಿಕೊಂಡು ಅರ್ಜಿ ಹಾಕಿದ್ದಾರೆ. ಅದನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿ ಲ್ಯಾಪ್‌ಟಾಪ್ ಹಾಗೂ ಟ್ಯಾಬ್ ಕೊಡೊದಕ್ಕೆ ನಮ್ಮಲ್ಲಿ ದುಡ್ಡಿನ ಕೊರತೆ ಇದೆ. ಇರೊದನ್ನೆ ಇವಾಗ ಕೊಡೊದಕ್ಕೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದರು.